Air India Discount Offers: ಕೇವಲ 1,705 ರೂ.ಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಕೇ? ಇಂದೇ ಟಿಕೆಟ್ ಕಾಯ್ದಿರಿಸಿ

ಏರ್ ಇಂಡಿಯಾ ಪತ್ರಿಕಾ ಪ್ರಕಟಣೆ ಪ್ರಕಾರ, ಕಂಪನಿಯ ಎಲ್ಲ ಬುಕಿಂಗ್​ ಪ್ಲಾಟ್​ಫಾರ್ಮ್​ಗಳಲ್ಲಿ ರಿಯಾಯಿತಿ ದರದ ಟಿಕೆಟ್ ಕಾಯ್ದಿರಿಸಬಹುದಾಗಿದೆ. ವಿಮಾನಯಾನ ಕಂಪನಿಯ ಅಧಿಕೃತ ಏಜೆಂಟ್​ಗಳು, ಆನ್​​ಲೈನ್ ತಾಣಗಳ ಮೂಲಕವೂ ಕಾಯ್ದಿರಿಸಬಹುದಾಗಿದೆ.

Air India Discount Offers: ಕೇವಲ 1,705 ರೂ.ಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಕೇ? ಇಂದೇ ಟಿಕೆಟ್ ಕಾಯ್ದಿರಿಸಿ
ಏರ್ ಇಂಡಿಯಾ ವಿಮಾನ (ಸಂಗ್ರಹ ಚಿತ್ರ)
Follow us
Ganapathi Sharma
|

Updated on:Jan 23, 2023 | 11:29 AM

ಮುಂಬೈ: ಕಡಿಮೆ ದುಡ್ಡಿಗೆ ವಿಮಾನ ಪ್ರಯಾಣ ನಿಮ್ಮದಾಗಬೇಕೇ? ಹಾಗಿದ್ದರೆ ಇಂದೇ ಏರ್ ಇಂಡಿಯಾ (Air India) ವಿಮಾನ ಪ್ರಯಾಣದ ಟಿಕೆಟ್ ಖರೀದಿಸಿ. ದೇಶೀಯ ವಿಮಾನಯಾನ ಕಂಪನಿಯು ‘ಫ್ಲೈ ಏರ್ ಇಂಡಿಯಾ ಸೇಲ್ (FLYAI SALE)’ ಅಂಗವಾಗಿ ರಿಯಾಯಿತಿ ದರದಲ್ಲಿ (Discount Offer) ಟಿಕೆಟ್ ಸೌಲಭ್ಯವನ್ನು ಘೋಷಿಸಿದ್ದು, ಫೆಬ್ರವರಿ 1ರಿಂದ ಸೆಪ್ಟೆಂಬರ್ 30ರ ವರೆಗೆ ಪ್ರಯಾಣಿಸಲು ಅವಕಾಶವಿದೆ. ಆದರೆ, ಇಂದೇ (ಜನವರಿ 23) ಟಿಕೆಟ್ ಕಾಯ್ದಿರಿಸಬೇಕು. ಸೀಮಿತ ಆಸನಗಳಿಗೆ ಮಾತ್ರ ರಿಯಾಯಿತಿ ದರದ ಕೊಡುಗೆ ಲಭ್ಯವಿರಲಿದೆ. ಈ ವಿಚಾರವಾಗಿ ಏರ್ ಇಂಡಿಯಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಜನವರಿ 23ರ ಬೆಳಗ್ಗೆಯಿಂದ ರಾತ್ರಿವರೆಗೆ ಬುಕಿಂಗ್ ಮಾಡಬಹುದು ಎಂದು ಮಾಹಿತಿ ನೀಡಿದೆ. ಯಾವ ನಗರಗಳಿಗೆಲ್ಲ ರಿಯಾಯಿತಿ ದರದ ಸೌಲಭ್ಯವಿದೆ ಎಂಬುದನ್ನೂ ಪ್ರಕಟಣೆಯಲ್ಲಿ ವಿವರಿಸಲಾಗಿದೆ. ಒಂದು ಬಾರಿಯ ಪ್ರಯಾಣಕ್ಕೆ ಮಾತ್ರ ಈ ಕೊಡುಗೆ ಅನ್ವಯವಾಗಲಿದೆ.

ಬುಕಿಂಗ್ ಮಾಡುವುದು ಹೇಗೆ?

ಏರ್ ಇಂಡಿಯಾ ಪತ್ರಿಕಾ ಪ್ರಕಟಣೆ ಪ್ರಕಾರ, ಕಂಪನಿಯ ಎಲ್ಲ ಬುಕಿಂಗ್​ ಪ್ಲಾಟ್​ಫಾರ್ಮ್​ಗಳಲ್ಲಿ ರಿಯಾಯಿತಿ ದರದ ಟಿಕೆಟ್ ಕಾಯ್ದಿರಿಸಬಹುದಾಗಿದೆ. ವಿಮಾನಯಾನ ಕಂಪನಿಯ ಅಧಿಕೃತ ಏಜೆಂಟ್​ಗಳು, ಆನ್​​ಲೈನ್ ತಾಣಗಳ ಮೂಲಕವೂ ಕಾಯ್ದಿರಿಸಬಹುದಾಗಿದೆ. ಈ ರಿಯಾಯಿತಿ ದರದ ಕೊಡುಗೆಯು ದೇಶೀಯ ಎಕಾನಮಿ ದರ್ಜೆಯ ಪ್ರಯಾಣಕ್ಕೆ ಮಾತ್ರ ಅನ್ವಯವಾಗಲಿದೆ. 1,705 ರೂ.ನಿಂದ ರಿಯಾಯಿತಿ ದರದ ಟಿಕೆಟ್ ಲಭ್ಯವಾಗಿದೆ. ದೇಶೀಯ 49 ನಿಲ್ದಾಣಗಳಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ದೊರೆಯಲಿದೆ.

ಯಾವ ನಗರಗಳಿಗೆಲ್ಲ ರಿಯಾಯಿತಿ ದರದ ಟಿಕೆಟ್ ಲಭ್ಯ?

ದಿಮಾಪುರದಿಂದ ಗುವಾಹಟಿಗೆ 1,783 ರೂ, ದೆಹಲಿಯಿಂದ ಮುಂಬೈಗೆ 5,075 ರೂ, ಚೆನ್ನೈಯಿಂದ ದೆಹಲಿಗೆ 5,895 ರೂ, ಬೆಂಗಳೂರಿನಿಂದ ಮುಂಬೈಗೆ 2,319 ರೂ, ದೆಹಲಿಯಿಂದ ಉದಯಪುರಕ್ಕೆ 3,680 ರೂ, ದೆಹಲಿಯಿಂದ ಗೋವಾಕ್ಕೆ 5,656 ರೂ, ದೆಹಲಿಯಿಂದ ಪೋರ್ಟ್ ಬಿಹಾರಕ್ಕೆ 8,690 ರೂ, ದೆಹಲಿಯಿಂದ ಶ್ರೀನಗರಕ್ಕೆ 3,730 ರೂ, ಅಹಮದಾಬಾದ್​ನಿಂದ ಮುಂಬೈಗೆ 1,806 ರೂ, ಗೋವಾದಿಂದ ಮುಂಬೈಗೆ 2,830 ರೂ.ನಲ್ಲಿ ಪ್ರಯಾಣಿಸಬಹುದು ಎಂದು ಏರ್ ಇಂಡಿಯಾ ಪ್ರಕಟಣೆ ತಿಳಿಸಿದೆ.

ವಿಮಾನಯಾನ ಕ್ಷೇತ್ರವು ಕೋವಿಡ್ ಸಂಕಷ್ಟದಿಂದ ಚೇತರಿಕೆ ಕಾಣುತ್ತಿರುವ ಸಂದರ್ಭದಲ್ಲೇ ಏರ್ ಇಂಡಿಯಾ ವಿಶೇಷ ರಿಯಾಯಿತಿ ದರದ ಕೊಡುಗೆ ಘೋಷಿಸಿದೆ. ಇತ್ತೀಚೆಗಷ್ಟೇ ಟಾಟಾ ಸಮೂಹವು ಏರ್​ ಇಂಡಿಯಾವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:10 am, Mon, 23 January 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್