ಲಖನೌ: ಪಂಜಾಬ್ನ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು(Navjot Singh Sidhu) ಅವರನ್ನು ವಶಕ್ಕೆ ಪಡೆದ ಪೊಲೀಸರು ಸರಸವಾ ವಾಯುಪಡೆ ನಿಲ್ದಾಣಕ್ಕೆ ಕರೆದೊಯ್ದಿದ್ದಾರೆ. ಲಖಿಂಪುರ್ ಖೇರಿ (Lakhimpur Kheri) ಘಟನೆ ಖಂಡಿಸಿ ಸಿಧು ನೇತೃತ್ವದ ಪ್ರತಿಭಟನಾ ಮೆರವಣಿಗೆ ಉತ್ತರ ಪ್ರದೇಶದ ಲಖಿಂಪುರ್ ಖೇರಿ ಕಡೆಗೆ ಹೋಗುತ್ತಿದ್ದಂತೆ ಉತ್ತರಪ್ರದೇಶ-ಹರ್ಯಾಣ ಗಡಿಯಲ್ಲಿರುವ ಶಹಜಹಾನ್ ಪುರದಲ್ಲಿ ತಡೆ ಹಿಡಿಯಲಾಯಿತು. ಸಿಧು ಜೊತೆಗಿದ್ದ ಪಕ್ಷದ ಸದಸ್ಯರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಭಾನುವಾರ ನಡೆದ ಹಿಂಸಾಚಾರದಲ್ಲಿ ರೈತರ ಹತ್ಯೆಯನ್ನು ವಿರೋಧಿಸಿ ಸಿಧು ಪಂಜಾಬ್ನಿಂದ ಲಖಿಂಪುರ್ ಖೇರಿಗೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನಾ ಮೆರವಣಿಗೆಯನ್ನು ಮುನ್ನಡೆಸುತ್ತಿದ್ದರು. ನೂರಾರು ಬೆಂಬಲಿಗರು ಉತ್ತರಪ್ರದೇಶ-ಹರ್ಯಾಣ ಗಡಿಯಲ್ಲಿ ಜಮಾಯಿಸಿ ಸಿಧು ಜೊತೆಗೂಡಿ ಘೋಷಣೆಗಳನ್ನು ಕೂಗಿದರು.
Punjab Congress chief Navjot Singh Sidhu along with party workers & supporters were detained at Yamuna Nagar (Haryana)-Saharanpur (UP) border
They were going to Lakhimpur Kheri in Uttar Pradesh pic.twitter.com/o5ueAUls0f
— ANI (@ANI) October 7, 2021
ಭಾನುವಾರ ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶಿಶ್ ಅವರನ್ನು ಬಂಧಿಸಬೇಕು. ಶುಕ್ರವಾರದೊಳಗೆ ಆಶಿಶ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಅವರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಿಧು ಹೇಳಿದ್ದರು. “ನಾಳೆ (ಶುಕ್ರವಾರ) ವರೆಗೂ ಬಂಧನವಾಗದಿದ್ದರೆ, ಅಥವಾ ಆತ ತನಿಖೆಗೆ ಸೇರದಿದ್ದರೆ, ನಾನು ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದಿ ಸಿಧು ಹೇಳಿದ್ದಾರೆ.
ರೈತರು ಸಲ್ಲಿಸಿದ ಎಫ್ಐಆರ್ ನಲ್ಲಿ ಆಶಿಶ್ ಹೆಸರು ಇನ್ನೂ ಪತ್ತೆಯಾಗಿಲ್ಲ ಎಂದು ಯುಪಿ ಪೊಲೀಸರು ಗುರುವಾರ ಹೇಳಿದ್ದಾರೆ.
#WATCH | En route to violence-hit Lakhimpur Kheri, Punjab Congress chief Navjot Singh Sidhu-led march stopped at Yamuna Nagar (Haryana)- Saharanpur (Uttar Pradesh) border pic.twitter.com/wcqAKSUYuE
— ANI (@ANI) October 7, 2021
ಗುರುವಾರ ಪ್ರತಿಭಟನಾ ಮೆರವಣಿಗೆಯನ್ನು ಆರಂಭಿಸುವ ಮೊದಲು, ಯುಪಿಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಸರ್ಕಾರದ “ನಿಷ್ಕ್ರಿಯತೆ” ಯ ವಿರುದ್ಧ ಸಿಧು ಟೀಕಾ ಪ್ರಹಾರ ಮಾಡಿದ್ದು ಪಂಜಾಬ್ ಕಾಂಗ್ರೆಸ್ ಮತ್ತು ಪಕ್ಷದ ಶಾಸಕರು ಪ್ರತಿಭಟನಾ ನಿರತ ರೈತರಿಗೆ ನೀಡುವುದಾಗಿ ಹೇಳಿದ್ದಾರೆ. “ಕೇಂದ್ರ ಸಚಿವರು ಮತ್ತು ಅವರ ಮಗ ಕಾನೂನು ಮತ್ತು ಸಂವಿಧಾನವನ್ನು ಮೀರಿದ್ದಾರೆಯೇ?” ಎಂದು ಸಿಧು ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಭಾನುವಾರ ನಡೆದ ಘಟನೆಯಲ್ಲಿ ಒಟ್ಟು ಎಂಟು ಜನರು ಪ್ರಾಣ ಕಳೆದುಕೊಂಡಿದ್ದಾರೆ, ಮಿಶ್ರಾ ಅವರ ಬೆಂಗಾವಲಿಗೆ ಸೇರಿದ ಎರಡು ಎಸ್ಯುವಿಗಳು ಲಖಿಂಪುರ್ ಖೇರಿಯಲ್ಲಿ ಪ್ರತಿಭಟನಾಕಾರರ ಮೇಲೆ ಹರಿದು ನಾಲ್ವರು ಪ್ರತಿಭಟನಾಕಾರರು ರೈತರು, ಇಬ್ಬರು ಬಿಜೆಪಿ ಕಾರ್ಯಕರ್ತರು, ಮಿಶ್ರಾ ಅವರ ಚಾಲಕ ಮತ್ತು ಖಾಸಗಿ ಟಿವಿ ಚಾನೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತ ರಮಣ್ ಕಶ್ಯಪ್ ಸಾವಿಗೀಡಾಗಿದ್ದರು.
ಇದನ್ನೂ ಓದಿ: Lakhimpur Kheri Violence: ಲಖಿಂಪುರ್ ಖೇರಿಯಲ್ಲಿ ರೈತರ ಹತ್ಯೆಯ ಮತ್ತೊಂದು ವಿಡಿಯೋ ವೈರಲ್