ಅಮರಾವತಿ, ಡಿ.9: ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ತಮ್ಮ ಕುಟುಂಬದ ಜತೆಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಲಾಲು ಪ್ರಸಾದ್ ಯಾದವ್ ಜತೆಗೆ ಅವರ ಪತ್ನಿ ರಾಬ್ರಿ ದೇವಿ, ಅವರ ಪುತ್ರ ಹಾಗೂ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಅವರ ಕುಟುಂಬ ಜತೆಗೆ ಶನಿವಾರ ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಲಾಲು ಪ್ರಸಾದ್ ಯಾದವ್ ಮತ್ತು ಅವರು ಕುಟುಂಬ ದೇವಸ್ಥಾನದಲ್ಲಿ ನಡೆಸಲಾದ ಸುಪ್ರಭಾತಂ ಸೇವೆಯಲ್ಲಿ ಭಾಗವಹಿಸಿದರು. ಈ ಬಗ್ಗೆ ಲಾಲು ಪ್ರಸಾದ್ ಯಾದವ್ ಅವರು ಪುತ್ರ ತೇಜಸ್ವಿ ಯಾದವ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
आज सवेरे आंध्र प्रदेश के तिरुमाला पर्वत स्थित उत्कृष्ट शिल्प कौशल के अद्भुत उदाहरण एवं भक्ति, विश्वास और श्रद्धा के प्रतीक भगवान श्री तिरुपति बालाजी मंदिर में सपरिवार पूजा-अर्चना व दिव्य दर्शन कर सकारात्मक ऊर्जा एवं आशीर्वाद प्राप्त किया तथा गर्भगृह में विराजमान भगवान वेंकटेश्वर… pic.twitter.com/dtJhGlxe4s
— Tejashwi Yadav (@yadavtejashwi) December 9, 2023
ನಾನು ಮತ್ತು ನನ್ನ ಕುಟುಂಬ, ನನ್ನ ತಾಯಿ, ತಂದೆ, ಸಹೋದರ, ನನ್ನ ಹೆಂಡತಿ ಮತ್ತು ನನ್ನ ಮಗಳು, ಕಾತ್ಯಾಯನಿಯೊಂದಿಗೆ ಭಗವಾನ್ ಬಾಲಾಜಿಯ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇವೆ. ನನ್ನ ಮಗಳ ಮುಂಡನ ಸಂಸ್ಕಾರವನ್ನು ಇಲ್ಲಿ ನಡೆಸಿದ್ದೇವೆ, ಎಲ್ಲರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದ್ದೇವೆ. ದೇಶವು ಪ್ರಗತಿಯಾಗಲಿ ಮತ್ತು ಎಲ್ಲರೂ ಅಭಿವೃದ್ಧಿ ಹೊಂದಲಿ ಎಂದು ದೇವರಲ್ಲಿ ಪ್ರಾರ್ಥಸಿದ್ದೇವೆ ಎಂದು ತೇಜಸ್ವಿ ಯಾದವ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಭಾರತ ಮತ್ತು ಇಂಡಿಯಾ ನಡುವಿನ ವ್ಯತ್ಯಾಸ ವಿವರಿಸುವ ಲಾಲು ಪ್ರಸಾದ್ ಯಾದವ್ ಹಳೇ ವಿಡಿಯೊ ವೈರಲ್
ತೇಜಸ್ವಿ ಯಾದವ್ ದಂಪತಿಗಳ ಮದುವೆ ವಾರ್ಷಿಕೋತ್ಸವದ ಪ್ರಯುಕ್ತ ಈ ಭೇಟಿ ನೀಡಲಾಗಿದೆ ಎಂದು ಹೇಳಿದ್ದಾರೆ. ಶುಕ್ರವಾರ ಬಿಹಾರದಿಂದ ಹೊರಟು, ಶನಿವಾರ ಬೆಳಿಗ್ಗೆ ಬಾಲಾಜಿಯ ದರ್ಶನ ಮಾಡಲಾಗಿದೆ. ನಾವು ದೇವರಲ್ಲಿ ರಾಜ್ಯದ ಜನರಿಗೆ ಸುಖ, ಶಾಂತಿ, ಸಮೃದ್ಧಿ ಮತ್ತು ಕಲ್ಯಾಣ ಮಾಡಲಿ ಎಂದು ಪ್ರಾರ್ಥಿಸಿದ್ದೇವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ