ರವೀಂದ್ರ ಮ್ಹಾತ್ರೆ ಹಂತಕ ಯಾರು? ನ್ಯೂಸ್ 9 ಪ್ಲಸ್‌ನ ತನಿಖಾ ಸಾಕ್ಷ್ಯಚಿತ್ರ ಬಿಚ್ಚಿಟ್ಟ ಸತ್ಯಗಳು ಇವು

Ravindra Mhatre: ಫೆಬ್ರವರಿ 3, 1984 ರಂದು ಬರ್ಮಿಂಗ್ಹ್ಯಾಮ್‌ನಲ್ಲಿರುವ ಭಾರತದ ಕಾನ್ಸುಲೇಟ್‌ನಲ್ಲಿ ಸಹಾಯಕ ಕಮಿಷನರ್ ರವೀಂದ್ರ ಮ್ಹಾತ್ರೆ ಅವರನ್ನು ಅಪಹರಿಸಲಾಯಿತು. ಅಜ್ಞಾತ ಗುಂಪು, ಕಾಶ್ಮೀರ ಲಿಬರೇಶನ್ ಆರ್ಮಿ ಅಪಹರಣದ ಹೊಣೆಗಾರಿಕೆಯನ್ನು ವಹಿಸಿಕೊಂಡಿದೆ. ಆಮೇಲೆ ನಡೆದಿದ್ದು ಏನು? ರವೀಂದ್ರ ಮ್ಹಾತ್ರೆ ಹಂತಕರು ಯಾರು?

Follow us
ರಶ್ಮಿ ಕಲ್ಲಕಟ್ಟ
| Updated By: ಡಾ. ಭಾಸ್ಕರ ಹೆಗಡೆ

Updated on:Dec 09, 2023 | 3:09 PM

ದೆಹಲಿ ಡಿಸೆಂಬರ್ 09:  ಭಾರತದ ಮೊದಲ ಓಟಿಟಿ (OTT)  ನ್ಯೂಸ್ 9 ಪ್ಲಸ್‌ನ (News9 Plus) ತನಿಖಾ ಸಾಕ್ಷ್ಯಚಿತ್ರವು ಮೊದಲ ಬಾರಿಗೆ ‘ಮರ್ಡರ್ ಆಫ್ ಆನ್ ಇಂಡಿಯನ್ ಡಿಪ್ಲೊಮ್ಯಾಟ್’ (Murder of an Indian Diplomat) ಎಂಬ ಶೀರ್ಷಿಕೆಯಡಿ ಯುನೈಟೆಡ್ ಕಿಂಗ್‌ಡಂನ ಬರ್ಮಿಂಗ್‌ಹ್ಯಾಮ್‌ನಲ್ಲಿ ಹತ್ಯೆಗೀಡಾದ ರವೀಂದ್ರ ಮ್ಹಾತ್ರೆ (Ravindra Mhatre) ಹಂತಕನ ಮಾಹಿತಿ ಬಹಿರಂಗಪಡಿಸಿದೆ. ಕಳೆದ ಕೆಲವು ತಿಂಗಳುಗಳಿಂದ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ಬ್ರಿಟನ್‌ನಲ್ಲಿರುವ ಭಾರತೀಯ ರಾಜತಾಂತ್ರಿಕರಿಗೆ ಖಲಿಸ್ತಾನ ಪರ ಪ್ರತ್ಯೇಕತಾವಾದಿಗಳಿಂದ ಬೆದರಿಕೆಗಳು ಬರುತ್ತಿವೆ. ವಿದೇಶದಲ್ಲಿರುವ ಭಾರತೀಯ ರಾಜತಾಂತ್ರಿಕರ ವಿರುದ್ಧ “ಬೆದರಿಕೆಯ ವಾತಾವರಣ” ವನ್ನು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಖಂಡಿಸಿದ್ದಾರೆ. ನ್ಯೂಸ್ 9 ಪ್ಲಸ್, ಬೆದರಿಕೆಯ ಜಾಡನ್ನು ಅನುಸರಿಸಲು ನಿರ್ಧರಿಸಿದ್ದು, ಯುಕೆಯಲ್ಲಿ ಭಾರತೀಯ ರಾಜತಾಂತ್ರಿಕನ 40 ವರ್ಷದಿಂದ ಬಗೆಹರಿಯದ ಹತ್ಯೆ ಪ್ರಕರಣದ ತನಿಖೆ ನಡೆಸಿತು. ನ್ಯೂಸ್ 9 ಪ್ಲಸ್ ವಿಶ್ವದ ಮೊದಲ ನ್ಯೂಸ್ ಒಟಿಟಿ ಆಗಿದೆ.

ಫೆಬ್ರವರಿ 3, 1984 ರಂದು ಬರ್ಮಿಂಗ್ಹ್ಯಾಮ್‌ನಲ್ಲಿರುವ ಭಾರತದ ಕಾನ್ಸುಲೇಟ್‌ನಲ್ಲಿ ಸಹಾಯಕ ಕಮಿಷನರ್ ರವೀಂದ್ರ ಮ್ಹಾತ್ರೆ ಅವರನ್ನು ಅಪಹರಿಸಲಾಯಿತು. ಅಜ್ಞಾತ ಗುಂಪು, ಕಾಶ್ಮೀರ ಲಿಬರೇಶನ್ ಆರ್ಮಿ (KLA) ಅಪಹರಣದ ಹೊಣೆಗಾರಿಕೆಯನ್ನು ವಹಿಸಿಕೊಂಡಿದೆ. ಇದು ದೆಹಲಿಯ ತಿಹಾರ್ ಜೈಲಿನಲ್ಲಿರುವ ಭಯೋತ್ಪಾದಕ ಮಕ್ಬೂಲ್ ಬಟ್, ಆತನ ಇಬ್ಬರು ಸಹಚರರು ಮತ್ತು ಇತರ ಏಳು ಭಯೋತ್ಪಾದಕರನ್ನು ಬಿಡುಗಡೆ ಮಾಡಬೇಕು ಮತ್ತು 1 ಮಿಲಿಯನ್ ಪೌಂಡ್ ಹಣ ನೀಡಬೇಕು ಎಂದು ಒತ್ತಾಯಿಸಿದೆ.

ಫೆಬ್ರವರಿ 5 ರಂದು, ಮ್ಹಾತ್ರೆ ಅವರ ದೇಹವು ಅವರ ತಲೆಯ ಮೇಲೆ ಎರಡು ಗುಂಡಿನ ಗಾಯಗಳೊಂದಿಗೆ ಪತ್ತೆಯಾಗಿದೆ. ಯುಎಸ್ ಪೊಲೀಸರು ಕೆಲವು ಅಪಹರಣಕಾರರನ್ನು ಬಂಧಿಸಿ ಆರೋಪ ಹೊರಿಸಿದರೂ, ಮುಖ್ಯ ಸಂಚುಕೋರ ಮತ್ತು ಕೊಲೆಗಾರನನ್ನು ಎಂದಿಗೂ ಬಂಧಿಸಲಾಗಿಲ್ಲ. 40 ವರ್ಷಗಳ ನಂತರ, ನ್ಯೂಸ್ 9 ಪ್ಲಸ್ ತನಿಖೆಯು ಕೊಲೆಗಾರ ಮತ್ತು ಅವನ ಸ್ಥಳವನ್ನು ಪತ್ತೆಹಚ್ಚಿದೆ. “ಯುಕೆ ಮತ್ತು ಭಾರತವು ರವೀಂದ್ರ ಮ್ಹಾತ್ರೆ ಹಂತಕನನ್ನು ನ್ಯಾಯಾಂಗದ ಮುಂದೆ ತರಲು ವಿಫಲವಾಗಿದೆ. ಹಾಗಾಗಿ ನಾವು ಮಧ್ಯ ಪ್ರವೇಶಿಸಿ ಅವರ ಕೆಲಸವನ್ನು ಮಾಡಬೇಕಾಯಿತು ಎಂದು ಟಿವಿ9 ನೆಟ್‌ವರ್ಕ್ ಎಕ್ಸಿಕ್ಯೂಟಿವ್ ಎಡಿಟರ್, ನ್ಯಾಷನಲ್ ಸೆಕ್ಯುರಿಟಿ ಮತ್ತು ಸ್ಟ್ರಾಟೆಜಿಕ್ ಅಫೇರ್ಸ್ ಆದಿತ್ಯ ರಾಜ್ ಕೌಲ್ ಹೇಳಿದ್ದಾರೆ.

ನಮ್ಮ ತಿಂಗಳ ಅವಧಿಯ ತನಿಖೆಯು ಬಹಳಷ್ಟು ಅಡಚಣೆಗಳನ್ನು ದೂರಮಾಡಿದೆ. ಅಂತಿಮವಾಗಿ ನಾವು ಕಳೆದ 40 ವರ್ಷಗಳಿಂದ ತಲೆಮರೆಸಿಕೊಂಡಿರುವ ಭಯೋತ್ಪಾದಕ ಮತ್ತು ಕೊಲೆಗಾರನ ಸ್ಥಳ ಮತ್ತು ಸ್ಥಿತಿಯನ್ನು ಬಹು ಮೂಲಗಳಿಂದ ದೃಢೀಕರಿಸಲು ಸಾಧ್ಯವಾಯಿತು. ಇಂದಿಗೂ ಸಹ, ಮ್ಹಾತ್ರೆ ಹತ್ಯೆಗಾಗಿ ಅವರನ್ನು ಬಂಧಿಸಲಾಗುವುದು ಅಥವಾ ಕೊಲ್ಲಲಾಗುವುದು ಎಂದು ಅವರು ಭಯಪಡುತ್ತಾರೆ ಎಂದು ಕೌಲ್ ಹೇಳಿದ್ದಾರೆ.

ಇದನ್ನೂ ಓದಿ: ನಿಮ್ಮ ಮಗಳಾಗಿದ್ದರೆ ರಾಜಕೀಯಕ್ಕೆ ಬರಲು ಸಲಹೆ ನೀಡುತ್ತಿದ್ದಿರೇ? ಸೋನಿಯಾ ಪ್ರಶ್ನೆಗೆ ನರಸಿಂಹ ರಾವ್ ಉತ್ತರ ಹೇಗಿತ್ತು ನೋಡಿ!

ಬ್ರಿಟನ್‌ನಲ್ಲಿರುವ ಭಾರತದ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಮ್ಹಾತ್ರೆ ಅವರಿಗೆ ಸಂಭವಿಸಿದ್ದು ಯಾರಿಗಾದರೂ ಸಂಭವಿಸಬಹುದು. ವಿಶ್ವಾದ್ಯಂತ ರಾಜತಾಂತ್ರಿಕರನ್ನು ಯಾವ ರೀತಿ ನೋಡಲಾಗುತ್ತದೆ ಎಂಬುದನ್ನು ಇದು ತೋರಿಸುತ್ತದೆ ಎಂದಿದ್ದಾರೆ. ಪ್ರಪಂಚದಾದ್ಯಂತದ ಭಾರತೀಯ ರಾಜತಾಂತ್ರಿಕರಿಗೆ ಇತ್ತೀಚಿನ ಬೆದರಿಕೆಗಳ ಹಿನ್ನಲೆಯಲ್ಲಿ ದೊರೈಸ್ವಾಮಿ ಅವರು ಜಗತ್ತಿನ ಕೆಲವು ಭಾಗಗಳಲ್ಲಿ ಕೇವಲ ತಮ್ಮ ರಾಜತಾಂತ್ರಿಕರಿಗೆ ಬೆದರಿಕೆ ಇದೆ ಎಂಬುದು ಮಾತ್ರವಲ್ಲ, ನಮ್ಮ ರಾಜತಾಂತ್ರಿಕರಿಗೆ ಅವರ ದೇಶಗಳಲ್ಲಿಯೂ ಬೆದರಿಕೆ ಇದೆ. ವಿಯೆನ್ನಾ ಕನ್ವೆನ್ಷನ್‌ನಲ್ಲಿ ಸೂಚಿಸಿದಂತೆ ರಾಜತಾಂತ್ರಿಕರನ್ನು ರಕ್ಷಿಸುವ ಅವರ ಬದ್ಧತೆಯನ್ನು ಅವರು ಪಾಲಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ್ದಾರೆ .

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:55 pm, Sat, 9 December 23