Gandaberunda: ಕನ್ನಡತನ ಮೆರೆದ ಬ್ರಿಟನ್​​ ಪ್ರಧಾನಿಯ ಪತ್ನಿ; ಅಕ್ಷತಾ ಮೂರ್ತಿ ಸರದಲ್ಲಿ ಕರ್ನಾಟಕ ಲಾಂಛನ

ದೀಪಾವಳಿಯ ಆಚರಣೆಯ ವೇಳೆ ಅಕ್ಷತಾ ಮೂರ್ತಿ ನೀಲಿ ಬಣ್ಣದ ಸೀರೆಯುಟ್ಟು ವಿಶೇಷವಾದ ಹಾರವೊಂದನ್ನು ಧರಿಸಿದ್ದು, ಇದೀಗಾ ಎಲ್ಲರ ಗಮನ ಸೆಳೆದಿದೆ. 500 ವರ್ಷಗಳಿಗೂ ಹೆಚ್ಚು ಕಾಲ ಮೈಸೂರಿನ ಇತಿಹಾಸದ ಭಾಗವಾಗಿರುವ ಮತ್ತು ಕರ್ನಾಟಕದ ಹೆಮ್ಮೆಯ ಲಾಂಛನವಾಗಿರುವ ‘ಗಂಡಭೇರುಂಡ’ವನ್ನು ಕೊರಳಲ್ಲಿ ಧರಿಸಿ ಅಕ್ಷತಾ ಮೂರ್ತಿಯವರು ತಮ್ಮ ತವರೂರಾದ ಕರ್ನಾಟಕಕ್ಕೆ ಗೌರವ ಸಲ್ಲಿಸಿದ್ದಾರೆ. ಆದ್ದರಿಂದ "ಗಂಡಭೇರುಂಡ" ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವೊಂದು ಇಂಟರೆಸ್ಟಿಂಗ್​ ಸಂಗತಿಗಳು ಇಲ್ಲಿವೆ.

Gandaberunda: ಕನ್ನಡತನ ಮೆರೆದ ಬ್ರಿಟನ್​​ ಪ್ರಧಾನಿಯ ಪತ್ನಿ; ಅಕ್ಷತಾ ಮೂರ್ತಿ ಸರದಲ್ಲಿ ಕರ್ನಾಟಕ ಲಾಂಛನ
Gandaberunda NecklaceImage Credit source: instagram
Follow us
ಅಕ್ಷತಾ ವರ್ಕಾಡಿ
|

Updated on:Nov 15, 2023 | 4:38 PM

ಯುಕೆ ಪ್ರಧಾನಿ ರಿಷಿ ಸುನಕ್ ತಮ್ಮ ಪತ್ನಿ ಅಕ್ಷತಾ ಮೂರ್ತಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ಲಂಡನ್​​​ನ ತಮ್ಮ ನಿವಾಸವಾದ ಡೌನಿಂಗ್ ಸ್ಟ್ರೀಟ್‌ನಲ್ಲಿ ದೀಪಾವಳಿಯನ್ನು ಆಚರಿಸಿದ್ದು ಎಲ್ಲೆಡೆ ಭಾರೀ ವೈರಲ್ ಆಗಿತ್ತು ​​. ವಿದೇಶದಲ್ಲಿದ್ದರೂ ಕೂಡ ತಮ್ಮ ಹಿಂದೂ ಸಂಪ್ರದಾಯದ ಆಚಾರ ವಿಚಾರಗಳನ್ನು ಎಲ್ಲೂ ಬಿಡದ ರಿಷಿ ಸುನಕ್ ದಂಪತಿಗಳು. ದೀಪಾವಳಿಯ ಆಚರಣೆಯ ವೇಳೆ ಅಕ್ಷತಾ ಮೂರ್ತಿ ನೀಲಿ ಬಣ್ಣದ ಸೀರೆಯುಟ್ಟು ವಿಶೇಷವಾದ ಹಾರವೊಂದನ್ನು ಧರಿಸಿದ್ದು, ಇದೀಗಾ ಎಲ್ಲರ ಗಮನ ಸೆಳೆದಿದೆ. 500 ವರ್ಷಗಳಿಗೂ ಹೆಚ್ಚು ಕಾಲ ಮೈಸೂರಿನ ಇತಿಹಾಸದ ಭಾಗವಾಗಿರುವ ಮತ್ತು ಕರ್ನಾಟಕದ ಹೆಮ್ಮೆಯ ಲಾಂಛನವಾಗಿರುವ ‘ಗಂಡಭೇರುಂಡ’ವನ್ನು ಕೊರಳಲ್ಲಿ ಧರಿಸಿ ಅಕ್ಷತಾ ಮೂರ್ತಿಯವರು ತಮ್ಮ ತವರೂರಾದ ಕರ್ನಾಟಕಕ್ಕೆ ಗೌರವ ಸಲ್ಲಿಸಿದ್ದಾರೆ. ಆದ್ದರಿಂದ “ಗಂಡಭೇರುಂಡ” ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವೊಂದು ಇಂಟರೆಸ್ಟಿಂಗ್​ ಸಂಗತಿಗಳು ಇಲ್ಲಿವೆ.

“ಗಂಡಬೇರುಂಡ” ಅಥವಾ “ಭೇರುಂಡ” ಹಿಂದೂ ಪುರಾಣಗಳಲ್ಲಿ ಎರಡು ತಲೆಯ ಪಕ್ಷಿಯಾಗಿದ್ದು, ಇದನ್ನು ವಿಷ್ಣುವಿನ ರೂಪವೆಂದು ಪರಿಗಣಿಸಲಾಗಿದೆ. ವಿಷ್ಣುವು ತನ್ನ ಭಕ್ತ ಪ್ರಹ್ಲಾದನ ತಂದೆಯಾದ ಹಿರಣ್ಯಕಶ್ಯಪನನ್ನು ಕೊಲ್ಲಲು ನರಸಿಂಹನ ಅವತಾರವನ್ನು ತಾಳಿದ, ಆದರೆ ಹಿರಣ್ಯಕಶ್ಯಪನ ವಧೆಯ ನಂತರವೂ ಕೂಡ ನರಸಿಂಹನ ಕೋಪವು ಕಡಿಮೆಯಾಗಲಿಲ್ಲ. ಈ ಸಮಯದಲ್ಲಿ ದೇವತೆಗಳು ತಮ್ಮ ರಕ್ಷಣೆಗಾಗಿ ಶಿವನನ್ನು ಪ್ರಾರ್ಥಿಸುತ್ತಾರೆ. ಅದರಂತೆ, ನರಸಿಂಹನನ್ನು ಒಲಿಸಿಕೊಳ್ಳಲು ಶಿವನು ಶರಬ (ಆನೆ-ತಲೆಯ ಸಿಂಹ) ರೂಪವನ್ನು ತಾಳುತ್ತಾರೆ. ಆಗ ವಿಷ್ಣು ಶರಬನನ್ನು ಎದುರಿಸಲು ಗಂಡಭೇರುಂಡ ಅವತಾರವನ್ನು ತಾಳಿದ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.

ಇದನ್ನೂ ಓದಿ: ಬ್ರಿಟನ್​​ನ ‘ಬೆಸ್ಟ್​​​​ ಡ್ರೆಸ್ಡ್ ಫಾರ್ ಫ್ಯಾಶನ್’​ ಪಟ್ಟ ಮುಡಿಗೇರಿಸಿಕೊಂಡ ಅಕ್ಷತಾ ಮೂರ್ತಿ

ಕರ್ನಾಟಕದ ಅಧಿಕೃತ ಲಾಂಛನವಾಗಿರುವ ‘ಗಂಡಭೇರುಂಡ’ದ ಬಗ್ಗೆ ಹೇಳುವುದಾದರೆ 12ನೇ ಶತಮಾನದಿಂದಲೂ ರಾಜ್ಯ ಲಾಂಛನವಾಗಿ ಬಳಸಲಾಗುತ್ತಿದೆ. ಹೊಯ್ಸಳ ಅರಸ 3ನೇ ನರಸಿಂಹನ ಕಾಲದಲ್ಲಿ ಕೆಲವು ಶಿಲಾನ್ಯಾಸಗಳ ಮೇಲೆ ‘ಗಂಡಭೇರುಂಡ’ ಇರುವುದನ್ನು ಕಾಣಬಹುದು. ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಸಮಯದಲ್ಲಿ ಮೈಸೂರಿನ ಮೊದಲ ರಾಜ ಯದುರಾಯ ಒಡೆಯರ್ ತಮ್ಮ ಧ್ವಜದ ಮೇಲೆ ‘ಗಂಡಭೇರುಂಡ’ವನ್ನು ಪ್ರತಿಷ್ಠಾಪಿಸಿದರು. ಸ್ವಾತಂತ್ರ್ಯದ ನಂತರ, ಮೈಸೂರು ಧ್ವಜವನ್ನು ಕಾರ್ನಾಟಕ ಎಂದು ಹೆಸರಿಸಿದ ನಂತರ ಗಂಡಬೇರುಂಡವು ರಾಜ್ಯದ ಅಧಿಕೃತ ಲಾಂಛನವಾಯಿತು. ಪ್ರಸ್ತುತ, ಇದು ಕರ್ನಾಟಕ ಸರ್ಕಾರದ ಅಧಿಕೃತ ಲಾಂಛನವಾಗಿದೆ. ರಾಜ್ಯದ ಉಭಯ ಸದನಗಳ ಶಾಸಕರು ಅಧಿವೇಶನಗಳಿಗೆ ಹಾಜರಾಗುವಾಗ ಗಂಡಭೇರುಂಡವನ್ನು ಚಿತ್ರಿಸುವ ಚಿನ್ನದ ಲೇಪಿತ ಲೋಹದ ಬ್ಯಾಡ್ಜ್‌ಗಳನ್ನು ಧರಿಸಿರುವುದನ್ನು ನೀವು ಕಾಣಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 4:38 pm, Wed, 15 November 23