AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದರ್ಭ ತೊರೆದು ಮತ್ತೆ ತವರು ತಂಡ ಸೇರಲು ನಿರ್ಧರಿಸಿದ ಕನ್ನಡಿಗ ಕರುಣ್ ನಾಯರ್

Karun Nair Returns to Karnataka: ಭಾರತೀಯ ಕ್ರಿಕೆಟ್ ತಂಡದ ಆಟಗಾರ ಕರುಣ್ ನಾಯರ್ ಅವರು ವಿದರ್ಭ ಕ್ರಿಕೆಟ್ ತಂಡವನ್ನು ತೊರೆದು ತಮ್ಮ ತವರು ರಾಜ್ಯವಾದ ಕರ್ನಾಟಕಕ್ಕೆ ಮರಳಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ವಿದರ್ಭ ತಂಡ ರಣಜಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕರುಣ್, ಇದೀಗ ಮತ್ತೊಮ್ಮೆ ತಮ್ಮ ತವರು ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕರುಣ್​ ಜೊತೆಗೆ, ಜಿತೇಶ್ ಶರ್ಮಾ ಕೂಡ ವಿದರ್ಭ ತಂಡವನ್ನು ತೊರೆಯುತ್ತಿದ್ದಾರೆ.

ವಿದರ್ಭ ತೊರೆದು ಮತ್ತೆ ತವರು ತಂಡ ಸೇರಲು ನಿರ್ಧರಿಸಿದ ಕನ್ನಡಿಗ ಕರುಣ್ ನಾಯರ್
Karun Nair, Jitesh Sharma
ಪೃಥ್ವಿಶಂಕರ
|

Updated on:Jun 19, 2025 | 11:02 PM

Share

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಟೆಸ್ಟ್ ಸರಣಿ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಮೊದಲ ಟೆಸ್ಟ್ ಪಂದ್ಯದಿಂದ ಪ್ರಾರಂಭವಾಗುವ ಸರಣಿಯೊಂದಿಗೆ ಟೀಂ ಇಂಡಿಯಾದಲ್ಲಿ ಕನ್ನಡಿಗ ಕರುಣ್ ನಾಯರ್ (Karun Nair) ಅವರ ಎರಡನೇ ಇನ್ನಿಂಗ್ಸ್ ಕೂಡ ಆರಂಭವಾಗಲಿದೆ. 8 ವರ್ಷಗಳ ಹಿಂದೆ ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ಕರುಣ್​ಗೆ ಆ ಬಳಿಕ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಆದಾಗ್ಯೂ ಛಲ ಬಿಡದ ಕರುಣ್, ದೇಶಿ ಕ್ರಿಕೆಟ್​ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುವ ಮೂಲಕ ಮತ್ತೆ ಟೀಂ ಇಂಡಿಯಾದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಅಲ್ಲದೆ ಮೊದಲ ಟೆಸ್ಟ್ ಪಂದ್ಯದಲ್ಲಿ ತಂಡದ ಆಡುವ ಹನ್ನೊಂದರ ಬಳಗದಲ್ಲೂ ಕರುಣ್​ಗೆ ಅವಕಾಶ ಸಿಗಲಿದೆ ಎಂದು ಹೇಳಲಾಗುತ್ತಿದೆ. ಇದರ ನಡುವೆ ಕರುಣ್ ಅವರು ದೇಶೀಯ ಕ್ರಿಕೆಟ್​ನಲ್ಲಿ ತಂಡ ಬದಲಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ರಾಜ್ಯ ತಂಡದಿಂದ ಕೈಬಿಡಲಾಯಿತು

ವಾಸ್ತವವಾಗಿ ಕನ್ನಡಿಗ ಕರುಣ್ ನಾಯರ್ ಕರ್ನಾಟಕ ತಂಡದೊಂದಿಗೆ ತಮ್ಮ ದೇಶಿ ಕ್ರಿಕೆಟ್ ವೃತ್ತಿಜೀವನವನ್ನು ಆರಂಭಿಸಿದರು. ಕರ್ನಾಟಕ ತಂಡದಲ್ಲಿ ವರ್ಷಗಳ ಕಾಲ ಆಡಿದ ಕರುಣ್ ಸತತವಾಗಿ ವೈಫಲ್ಯ ಅನುಭವಿಸಿದರು. ಹೀಗಾಗಿ ಅವರನ್ನು ರಾಜ್ಯ ತಂಡದಿಂದ ಕೈಬಿಡಲಾಯಿತು. ಆ ಬಳಿಕ ವಿದರ್ಭ ತಂಡವನ್ನು ಸೇರಿಕೊಂಡ ಕರುಣ್, ದೇಶಿ ಕ್ರಿಕೆಟ್​ನಲ್ಲಿ ತಮ್ಮ ಅಮೋಘ ಪ್ರದರ್ಶನದ ಮೂಲಕ ವಿದರ್ಭ್ ತಂಡವನ್ನು ಹಲವು ಐತಿಹಾಸಿಕ ಗೆಲುವುಗಳಿಗೆ ಮುನ್ನಡೆಸಿದರು. ಇದರ ಜೊತೆಗೆ ತಮ್ಮ ಆಟದಲ್ಲೂ ಸುಧಾರಣೆ ಕಂಡುಕೊಂಡಿದ್ದರು.

ಆದರೀಗ ಕ್ರಿಕ್‌ಬಜ್ ವರದಿಯ ಪ್ರಕಾರ, ಕರುಣ್ ನಾಯರ್ ಮುಂದಿನ ದೇಶೀಯ ಸೀಸನ್ ಆರಂಭಕ್ಕೂ ಮುನ್ನ ವಿದರ್ಭ ತಂಡವನ್ನು ತೊರೆಯಲು ನಿರ್ಧರಿಸಿದ್ದಾರೆ. ಕೇವಲ ಎರಡು ವರ್ಷಗಳ ಹಿಂದೆ ವಿದರ್ಭ ತಂಡವನ್ನು ಸೇರಿಕೊಂಡಿದ್ದ ಕರುಣ್ 2023-24 ಮತ್ತು 2024-25 ರ ಆವೃತ್ತಿಗಳಲ್ಲಿ ವಿದರ್ಭ ತಂಡದ ಭಾಗವಾಗಿದ್ದರು. ಅಲ್ಲದೆ ಕಳೆದ ರಣಜಿ ಟ್ರೋಫಿಯಲ್ಲಿ ತಂಡದ ಪರ ರನ್​ಗಳ ಶಿಖರ ಕಟ್ಟಿದ್ದ ಕರುಣ್, ವಿದರ್ಭ ತಂಡವನ್ನು ರಣಜಿ ಚಾಂಪಿಯನ್‌ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ತವರಿಗೆ ಮರಳಲಿರುವ ಕರುಣ್ ನಾಯರ್

ವರದಿಯ ಪ್ರಕಾರ, ವಿದರ್ಭ ತಂಡವನ್ನು ತೊರೆಯಲಿರುವ ಕರುಣ್ ನಾಯರ್ ತಮ್ಮ ತವರು ಕರ್ನಾಟಕ ತಂಡಕ್ಕೆ ಮತ್ತೊಮ್ಮೆ ಸೇರಲಿದ್ದಾರೆ. ಎರಡು ವರ್ಷಗಳ ಹಿಂದೆ, ಕಳಪೆ ಫಾರ್ಮ್ ಕಾರಣದಿಂದಾಗಿ ಅವರನ್ನು ಕರ್ನಾಟಕ ತಂಡದಿಂದ ಕೈಬಿಡಲಾಗಿತ್ತು. ಇದಾದ ನಂತರವೇ ಅವರು ವಿದರ್ಭ ಸೇರಿದ್ದರು. ಕಳೆದ ರಣಜಿ ಸೀಸನ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಕರುಣ್ 4 ಶತಕ ಸೇರಿದಂತೆ ಒಟ್ಟು 863 ರನ್ ಕಲೆಹಾಕಿದ್ದರು. ಫೈನಲ್‌ನಲ್ಲಿಯೂ ಪಂದ್ಯ ಗೆಲ್ಲುವ ಇನ್ನಿಂಗ್ಸ್ ಆಡಿದ್ದ ಕರುಣ್ 88 ರನ್‌ ಬಾರಿಸಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಲ್ಲದೆ, ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ 5 ಶತಕಗಳನ್ನು ಬಾರಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದರು. ಆದಾಗ್ಯೂ, ಫೈನಲ್‌ನಲ್ಲಿ ಸೋಲುವ ಮೂಲಕ ವಿದರ್ಭ ತಂಡವು ಪ್ರಶಸ್ತಿಯಿಂದ ವಂಚಿತವಾಗಿತ್ತು.

IND vs ENG: ಮೊದಲ ಟೆಸ್ಟ್​ಗೂ ಮುನ್ನ ಕನ್ನಡಿಗ ಕರುಣ್ ಇಂಜುರಿ ಬಗ್ಗೆ ಹೊರಬಿತ್ತು ಬಿಗ್​ ಅಪ್​ಡೇಟ್

ವಿದರ್ಭಕ್ಕೆ ಶಾಕ್ ನೀಡಿದ ಜಿತೇಶ್

ಕರುಣ್ ನಾಯರ್ ಜೊತೆಗೆ ಮತ್ತೊಬ್ಬ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಕೂಡ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ತೊರೆಯುತ್ತಿದ್ದಾರೆ ಎಂದು ವರದಿಯಾಗಿದೆ. ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಂತಹ ಎರಡು ಪ್ರಮುಖ ವೈಟ್ ಬಾಲ್ ಟೂರ್ನಿಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಜಿತೇಶ್ ಶರ್ಮಾ ಕೂಡ ಮುಂದಿನ ಸೀಸನ್‌ನಿಂದ ಹೊಸ ತಂಡವನ್ನು ಸೇರಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2025 ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಿತೇಶ್ ಶರ್ಮಾ ಈಗ ಹೊಸ ಸೀಸನ್‌ನಲ್ಲಿ ಬರೋಡಾ ಕ್ರಿಕೆಟ್ ತಂಡವನ್ನು ಸೇರಲಿದ್ದಾರೆ ಎಂದು ವರದಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:00 pm, Thu, 19 June 25

ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!