IND vs ENG: ಭಾರತ- ಇಂಗ್ಲೆಂಡ್ ಲೀಡ್ಸ್ ಟೆಸ್ಟ್ಗೆ ಮಳೆಯ ಆತಂಕ; ಇಲ್ಲಿದೆ 5 ದಿನಗಳ ಹವಾಮಾನ ವರದಿ
India vs England Leeds Weather Forecast: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಜೂನ್ 20 ರಿಂದ ಲೀಡ್ಸ್‌ನಲ್ಲಿ ಆರಂಭವಾಗಲಿದೆ. AccuWeather.com ಪ್ರಕಾರ, ಲೀಡ್ಸ್‌ನಲ್ಲಿ ಮಳೆಯ ಸಾಧ್ಯತೆ ಹೆಚ್ಚಿದೆ. ಮೊದಲ ಮತ್ತು ಮೂರನೇ ದಿನ ಕಡಿಮೆ ಮಳೆಯ ಸಾಧ್ಯತೆ ಇದ್ದರೆ, ಎರಡನೇ, ನಾಲ್ಕನೇ ಮತ್ತು ಐದನೇ ದಿನ ಮಳೆಯ ಪ್ರಮಾಣ ಹೆಚ್ಚಿದೆ. ಈ ಪಂದ್ಯದ ಫಲಿತಾಂಶ ಎರಡೂ ತಂಡಗಳ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಗಳ ಮೇಲೆ ಪರಿಣಾಮ ಬೀರಲಿದೆ.

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಜೂನ್ 20 ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ಲೀಡ್ಸ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯಕ್ಕಾಗಿ ಎರಡೂ ತಂಡಗಳು ಕಠಿಣ ಅಭ್ಯಾಸ ನಡೆಸಿವೆ. ಭಾರತದ ಬೌಲಿಂಗ್ ಬಲಿಷ್ಠವಾಗಿರುವಂತೆ ತೋರುತ್ತಿದ್ದರೆ, ಇತ್ತ ಇಂಗ್ಲೆಂಡ್‌ನ ಬ್ಯಾಟಿಂಗ್ ವಿಭಾಗದಲ್ಲಿ ಅನುಭವಿಗಳ ದಂಡೆ ಇದೆ. ಹೀಗಾಗಿ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ. ಆದಾಗ್ಯೂ ಈ ಮೊದಲ ಪಂದ್ಯಕ್ಕೆ ಮಳೆಯ ಆತಂಕ ಎದುರಾಗಿದೆ. AccuWeather.com ವರದಿಯ ಪ್ರಕಾರ, ಜೂನ್‌ನಲ್ಲಿ ಲೀಡ್ಸ್‌ನಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಐದು ದಿನಗಳ ಕಾಲ ನಡೆಯುವ ಈ ಪಂದ್ಯದಲ್ಲಿ ಯಾವ ದಿನ ಮಳೆ ಬೀಳುತ್ತದೆ ಎಂಬುದರ ವಿವರ ಇಲ್ಲಿದೆ.
ಐದು ದಿನಗಳ ಹವಾಮಾನ ವರದಿ
ಮೊದಲ ದಿನ ಮಳೆಯಾಗುವ ಸಾಧ್ಯತೆ ಶೇ. 5 ರಿಂದ 10 ರಷ್ಟು ಇದೆ. ತಾಪಮಾನ ಗರಿಷ್ಠ 17 ಡಿಗ್ರಿ ಮತ್ತು ಕನಿಷ್ಠ 31 ಡಿಗ್ರಿ ಇರುವ ಸಾಧ್ಯತೆ ಇದೆ. ಎರಡನೇ ದಿನ, ಅಂದರೆ ಜೂನ್ 21 ರಂದು ಮಳೆಯಾಗುವ ಸಾಧ್ಯತೆ ಶೇ. 60 ರಷ್ಟು ಇದೆ. ಇದರಿಂದಾಗಿ, ಈ ದಿನ ಆಟಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಮೂರನೇ ದಿನ ಮಳೆಯಾಗುವ ಸಾಧ್ಯತೆ ಶೇ. 5 ರಿಂದ 10 ರಷ್ಟು ಇದೆ. ಇದರರ್ಥ ಮೂರನೇ ದಿನ ಪಂದ್ಯ ಯಾವ ತೊಂದರೆಯೂ ಇಲ್ಲದೆ ನಡೆಯಲಿದೆ.
ಆದಾಗ್ಯೂ ನಾಲ್ಕನೇ ದಿನ ಮಳೆಯಾಗುವ ಸಾಧ್ಯತೆ ಶೇ. 25-30 ರಷ್ಟು ಇದೆ. ಆದ್ದರಿಂದ, ಈ ದಿನದಂದು ಆಟಕ್ಕೆ ಮಳೆ ಅಡ್ಡಿಯಾಗಬಹುದು. ಐದನೇ ಮತ್ತು ಕೊನೆಯ ದಿನವೂ ಶೇ. 25-30 ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ, ಮಳೆ ಭಾರೀ ಪ್ರಮಾಣದಲ್ಲಿ ಸುರಿದರೆ, ಪಂದ್ಯ ಡ್ರಾ ಆಗಬಹುದು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಪಂದ್ಯ ಡ್ರಾ ಆದರೆ, ಅದು ಎರಡೂ ತಂಡಗಳ ಗೆಲುವಿನ ಶೇಕಡಾವಾರು ಮೇಲೆ ಪರಿಣಾಮ ಬೀರುತ್ತದೆ.
IND vs ENG: 6 ಲೆಜೆಂಡರಿ ಆಟಗಾರರೇ ತಂಡದಲಿಲ್ಲ..! ಲೀಡ್ಸ್ ಟೆಸ್ಟ್ ಗೆಲ್ಲುತ್ತಾ ಟೀಂ ಇಂಡಿಯಾ?
ಟೀಂ ಇಂಡಿಯಾ ದಾಖಲೆ ಉತ್ತಮವಾಗಿಲ್ಲ
ಹೆಂಡಿಗ್ಲಾಟ್‌ನಲ್ಲಿ ಟೀಂ ಇಂಡಿಯಾದ ದಾಖಲೆ ಉತ್ತಮವಾಗಿಲ್ಲ. ಈ ಮೈದಾನದಲ್ಲಿ ಟೀಂ ಇಂಡಿಯಾ ಒಟ್ಟು 7 ಪಂದ್ಯಗಳನ್ನು ಆಡಿದ್ದು, ಕೇವಲ ಎರಡು ಪಂದ್ಯಗಳನ್ನು ಮಾತ್ರ ಗೆದ್ದಿದ್ದರೆ, ನಾಲ್ಕು ಪಂದ್ಯಗಳಲ್ಲಿ ಸೋಲನ್ನು ಎದುರಿಸಿದೆ. ಉಳಿದಂತೆ ಒಂದು ಪಂದ್ಯ ಡ್ರಾ ಆಗಿದೆ. ಮತ್ತೊಂದೆಡೆ, ಭಾರತ ಮತ್ತು ಇಂಗ್ಲೆಂಡ್ ನಡುವೆ ಒಟ್ಟು 136 ಟೆಸ್ಟ್ ಪಂದ್ಯಗಳು ನಡೆದಿವೆ. ಈ ಪೈಕಿ ಭಾರತ 35 ಪಂದ್ಯಗಳನ್ನು ಗೆದ್ದಿದ್ದರೆ, ಇಂಗ್ಲೆಂಡ್ 51 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಉಳಿದಂತೆ 50 ಪಂದ್ಯಗಳು ಡ್ರಾ ಆಗಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
