ಭಾರೀ ಟ್ರೆಂಡ್ ಆಗುತ್ತಿದೆ ‘ಲಬುಬು’ ಗೊಂಬೆ, ಏನಿದರ ವಿಶೇಷತೆ? ಇಲ್ಲಿದೆ ನೋಡಿ
ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ 'ಲಬುಬು' ಗೊಂಬೆ. ಇದು ಭಯಾನಕವಾಗಿದ್ದರು, ಇದನ್ನು ಅನೇಕ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಲಕ್ಷ ಲಕ್ಷ ಹಣ ನೀಡಿ ಇದನ್ನು ಕೊಂಡಕೊಳ್ಳುತ್ತಿದ್ದಾರೆ. ಜನರು ತಮ್ಮ ಬ್ಯಾಗ್ ಹಾಗೂ ಕೀಗಳಿಗೆ ಕೀಚೈನ್ಗಳಾಗಿ ಬಳಸುತ್ತಿದ್ದಾರೆ. ಅಷ್ಟಕ್ಕೂ ಈ ಗೊಂಬೆಗೆ ಪ್ರಮುಖ್ಯತೆ ನೀಡಲಾಗುತ್ತಿದೆ. ಇದರ ಅಂತಹ ವಿಶೇಷತೆ ಏನಿದೆ? ಇದರ ಬೆಲೆ ಕೇಳಿದ್ರೆ ಶಾಕ್ ಆಗುವುದು ಗ್ಯಾರಂಟಿ. ಇಲ್ಲಿದೆ ನೋಡಿ.

ಕೆಲವೊಂದು ಗೊಂಬೆಗಳು (dolls) ಆಕರ್ಷಕವಾಗಿ ಹಾಗೂ ಕ್ಯೂಟ್ ಆಗಿರುತ್ತದೆ. ಇನ್ನು ಕೆಲವು ಭಯಾನಕವಾಗಿರುತ್ತದೆ. ಚಿಕ್ಕ ವಯಸ್ಸಿನಲ್ಲಿ ದೊಡ್ಡ ಕಣ್ಣಿನ, ಹಾಗೂ ಪದೇ ಪದೇ ಕಣ್ಣು ಮಿಟುಕಿಸುವ ಗೊಂಬೆಗಳನ್ನು ನೋಡಿರಬಹುದು. ಇದೀಗ ಅಂತಹದೇ ಒಂದು ಭಯಾನಕ ಕಣ್ಣುಗಳನ್ನು ಹೊಂದಿರುವ ಗೊಂಬೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಗೊಂಬೆಯನ್ನು ‘ಲಬುಬು’ (labubu dolls) ಎಂದು ಕರೆಯುತ್ತಾರೆ. ಈ ಗೊಂಬೆ ದೈತ್ಯಾಕಾರದ ಮೊನಚಾದ ಹಲ್ಲುಗಳು ಮತ್ತು ವಿಚಿತ್ರವಾಗಿ ನಗುವನ್ನು ಹೊಂದಿದೆ. ಆದರೆ ಈ ವಿಚಿತ್ರ ಗೊಂಬೆಯನ್ನು ಅನೇಕರು ಇಷ್ಟಪಡುತ್ತಿದ್ದಾರೆ. ಲಬುಬು ಗೊಂಬೆ ಎಷ್ಟು ಟ್ರೆಂಡಿಯಾಗಿದೆಯೆಂದರೆ ಅದರ ಬೆಲೆ ಲಕ್ಷಕ್ಕೆ ತಲುಪಿದೆ. ಇದನ್ನು ಜನರು ತಮ್ಮ ಬ್ಯಾಗ್ ಹಾಗೂ ಕೀಗಳಿಗೆ ಕೀಚೈನ್ಗಳಾಗಿ ಬಳಸುತ್ತಿದ್ದಾರೆ. ಹಾಗಾದರೆ ಈ ಗೊಂಬೆಯ ಹಿಂದೆ ಇರುವ ರಹಸ್ಯ ಏನು, ಯಾಕೆ ಜನ ಇದನ್ನು ಇಷ್ಟೊಂದು ಇಷ್ಟಪಡುತ್ತಿದ್ದಾರೆ? ಇಲ್ಲಿದೆ ನೋಡಿ.
ಲಬುಬು ಗೊಂಬೆ:
ಲಬುಬು ಒಂದು ಕಾಲ್ಪನಿಕ ಪಾತ್ರವಾಗಿದ್ದು, ಇದನ್ನು 2015 ರಲ್ಲಿ ಹಾಂಗ್ ಕಾಂಗ್ ಕಲಾವಿದ ‘ಕೇಸಿಂಗ್ ಲಂಗ್’ ರಚಿಸಿದ್ದು, ಇದು ನಾರ್ಡಿಕ್ ಕಾಲ್ಪನಿಕ ಕಥೆಯಿಂದ ಬಂದಿರುವ ಗೊಂಬೆಯಾಗಿದೆ. ಇದರ ನೋಟವು ಮುದ್ದಾದ ಮತ್ತು ಸ್ಟೈಲಿಶ್ ಎಂದು ಹೇಳಲಾಗಿದೆ. ಜತೆಗೆ ಇದು ಭಯಾನಕವಾಗಿದೆ.
ಜನಪ್ರಿಯತೆ ಪಡೆದ ಲಬುಬು ಗೊಂಬೆ:
ಲಬುಬುವನ್ನು ಚೀನಾದ ಕಂಪನಿ ಪಾಪ್ ಮಾರ್ಟ್ ತಯಾರಿಸುತ್ತಿದ್ದಾರೆ. 2019 ರಲ್ಲಿ ಈ ಕಂಪನಿ ಅದನ್ನು ‘ಬ್ಲೈಂಡ್ ಬಾಕ್ಸ್’ ರೂಪದಲ್ಲಿ ಮಾರಾಟ ಮಾಡಲು ಪ್ರಾರಂಭಿಸಿತು. ಇದನ್ನು ಪೆಟ್ಟಿಗೆಯಲ್ಲಿ ಮಾರಾಟ ಮಾಡಲಾಗುತ್ತದೆ. ಈ ಸಮಯದಲ್ಲಿ ಜನರು ಇದನ್ನು ಲಕ್ಕಿ ಡ್ರಾದಂತೆ ಖರೀದಿ ಮಾಡಲು ಆರಂಭಿಸಿದರು. ಇಲ್ಲಿಂದ ಇದರ ಜನಪ್ರಿಯತೆ ಕ್ರಮೇಣ ಹೆಚ್ಚಾಯಿತು. ಈ ಕಾಲಕ್ಕೂ ಇದು ಹೆಚ್ಚು ಬೇಡಿಕೆಯನ್ನು ಪಡೆದುಕೊಂಡಿದೆ.
ಯಾವ ಕಾರಣಕ್ಕೆ ಇದನ್ನು ಖರೀದಿಸುತ್ತಿದ್ದಾರೆ?
- ಲಬುಬು ಗೊಂಬೆ ನೋಟದಲ್ಲಿ ವಿಶಿಷ್ಟವಾಗಿದೆ ಮತ್ತು ವಿಚಿತ್ರವಾಗಿ ಮುದ್ದಾಗಿದೆ. ಜತೆಗೆ ಇದು ವೈಯಕ್ತಿಕ ಮೌಲ್ಯಗಳನ್ನು ಹಚ್ಚಿಸುತ್ತದೆ.
- ಕೆ-ಪಾಪ್ ತಾರೆ ಲಿಸಾ (ಬ್ಲ್ಯಾಕ್‌ಪಿಂಕ್) ಕೂಡ ಸಾಮಾಜಿಕ ಮಾಧ್ಯಮದಲ್ಲಿ ಲಾಬುಬು ಗೊಂಬೆಯೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ದೊಡ್ಡ ಸೆಲೆಬ್ರಿಟಿಗಳು ಈ ಗೊಂಬೆಯ ಬಗ್ಗೆ ಆಸಕ್ತಿದಾಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
- ದುವಾ ಲಿಪಾ ಮತ್ತು ಬಾಲಿವುಡ್ ನಟಿ ಅನನ್ಯಾ ಪಾಂಡೆ ಈ ಗೊಂಬೆಯನ್ನು ಕೂಡ ಖರೀದಿಸಿದ್ದಾರೆ. ಲಾಬುಬು ಗೊಂಬೆ ಹೊಸ ಫ್ಯಾಷನ್ ಆಗಿದೆ.
- ಕೆಲವರು ಇದನ್ನು ಹೂಡಿಕೆಗಾಗಿ ಖರೀದಿಸುತ್ತಿದ್ದಾರೆ.
ಇದನ್ನೂ ಓದಿ: ಮಾಂಸಕ್ಕೆ ಪರ್ಯಾಯ ಹಲಸಿನ ಗುಜ್ಜೆ, ಸೆಲೆಬ್ರಿಟಿಗಳಿಗೂ ಇದುವೇ ಬೇಕು
ಈ ಗೊಂಬೆಯ ಬೆಲೆ:
ಬೀಜಿಂಗ್‌ನಲ್ಲಿ 131 ಸೆಂ.ಮೀ ಎತ್ತರದ ಲಬುಬು ಗೊಂಬೆಯನ್ನು 1.08 ಮಿಲಿಯನ್ ಯುವಾನ್ ಅಂದರೆ ಭಾರತದಲ್ಲಿ ಸುಮಾರು 1.2 ಕೋಟಿ ರೂ. ಇನ್ನು ಸಣ್ಣ ಸಣ್ಣ ಲಬುಬು ಗೊಂಬೆ ಬೆಲೆ ಈಗ ಲಕ್ಷ ದಾಟಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








