ಪಾಟ್ನಾ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಗಸ್ಟ್ ವೇಳೆಗೆ ಪತನವಾಗಬಹುದು ಎಂದು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಅವಧಿಗೂ ಮುನ್ನ ಚುನಾವಣೆಗೆ ಸಿದ್ಧರಾಗುವಂತೆ ತನ್ನ ಪಕ್ಷದ ಸದಸ್ಯರಿಗೆ ಸೂಚನೆ ನೀಡಿರುವ ಲಾಲೂ ಯಾದವ್ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
“ಎಲ್ಲಾ ಪಕ್ಷದ ಕಾರ್ಯಕರ್ತರು ಚುನಾವಣೆಗೆ ಸಿದ್ಧರಾಗಿರಲು ನಾನು ಮನವಿ ಮಾಡುತ್ತೇನೆ. ಏಕೆಂದರೆ ಯಾವುದೇ ಸಮಯದಲ್ಲಿ ಚುನಾವಣೆಗಳು ನಡೆಯಬಹುದು. ದೆಹಲಿಯಲ್ಲಿ ಮೋದಿ ಸರ್ಕಾರವು ತುಂಬಾ ದುರ್ಬಲವಾಗಿದೆ. ಆಗಸ್ಟ್ ವೇಳೆಗೆ ಈಗಿನ ಸರ್ಕಾರ ಪತನವಾಗಬಹುದು” ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ಇದನ್ನೂ ಓದಿ: ಲೋಕಸಭೆಯಲ್ಲಿ ಮೋದಿ ಮಾಡಿದ ಭಾಷಣದಲ್ಲಿರುವ ತಪ್ಪುಗಳನ್ನು ಉಲ್ಲೇಖಿಸಿ ಸ್ಪೀಕರ್ಗೆ ಪತ್ರ ಬರೆದ ಕಾಂಗ್ರೆಸ್
ತಂದೆಯ ಮಾತುಗಳನ್ನು ಪ್ರತಿಧ್ವನಿಸುತ್ತಾ, ಲಾಲು ಪ್ರಸಾದ್ ಯಾದವ್ ಅವರ ಮಗ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಕೂಡ ಬಿಹಾರದಲ್ಲಿ ಶೀಘ್ರ ವಿಧಾನಸಭಾ ಚುನಾವಣೆಯ ಸಾಧ್ಯತೆಯನ್ನು ಸೂಚಿಸಿದ್ದಾರೆ. ಡಿಸೆಂಬರ್ 2024 ಅಥವಾ 2025ರ ಆರಂಭದಲ್ಲಿ ಚುನಾವಣೆ ನಡೆದರೂ ಬಿಹಾರದಲ್ಲಿ ಮಹಾಘಟಬಂಧನ್ (ಇಂಡಿಯಾ ಮೈತ್ರಿ) ಸರ್ಕಾರ ರಚನೆಯಾಗುವ ಸಾಧ್ಯತೆಯನ್ನು ಅವರು ಒತ್ತಿ ಹೇಳಿದ್ದಾರೆ.
#WATCH | Former Bihar CM and RJD chief Lalu Prasad Yadav says, “I appeal to all party workers to be ready, as elections can happen anytime. Modi’s government in Delhi is very weak and it can fall by August…” pic.twitter.com/WHK832xH62
— ANI (@ANI) July 5, 2024
ಇದನ್ನೂ ಓದಿ: ಕೀರ್ ಸ್ಟಾರ್ಮರ್ ಗೆಲುವಿಗೆ ನರೇಂದ್ರ ಮೋದಿ ಅಭಿನಂದನೆ; ರಿಷಿ ಸುನಕ್‌ಗೆ ಥ್ಯಾಂಕ್ಸ್ ಎಂದ ಪ್ರಧಾನಿ
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 292 ಸ್ಥಾನಗಳನ್ನು ಗೆದ್ದಿತ್ತು. ಆಪ್ ಮೈತ್ರಿಕೂಟ – ಇಂಡಿಯಾ ಬಣ 232 ಸ್ಥಾನಗಳನ್ನು ಗಳಿಸಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ