ಸುಧಾರಿಸದ ಲಾಲು ಪ್ರಸಾದ್​ ಯಾದವ್ ಆರೋಗ್ಯ: ಏಮ್ಸ್​ ಆಸ್ಪತ್ರೆಗೆ ಶಿಫ್ಟ್?​

| Updated By: ಸಾಧು ಶ್ರೀನಾಥ್​

Updated on: Jan 23, 2021 | 2:17 PM

ಶ್ವಾಸಕೋಶದ ಸೋಂಕು ಕಾಣಿಸಿಕೊಂಡ ಕಾರಣ ಲಾಲು ಅವರನ್ನು​ ರಾಂಚಿಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.  ಆದರೆ, ಆರೋಗ್ಯ ಸುಧಾರಿಸದ ಕಾರಣ ಲಾಲೂ ಅವರನ್ನು ಏಮ್ಸ್​ಗೆ ಕಳುಹಿಸಲು ನಿರ್ಧರಿಸಲಾಗಿದೆ.

ಸುಧಾರಿಸದ ಲಾಲು ಪ್ರಸಾದ್​ ಯಾದವ್ ಆರೋಗ್ಯ: ಏಮ್ಸ್​ ಆಸ್ಪತ್ರೆಗೆ ಶಿಫ್ಟ್?​
ಲಾಲು ಪ್ರಸಾದ್​ ಯಾದವ್
Follow us on

ಪಾಟ್ನಾ: ಮೇವು ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ರಾಷ್ಟ್ರೀಯ ಜನತಾ ದಳದ (ಆರ್​ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್​ ಯಾದವ್​ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಅವರನ್ನು, ದೆಹಲಿಯ ಏಮ್ಸ್​​ ಆಸ್ಪತ್ರೆಗೆ ಸ್ಥಳಾಂತರ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಶ್ವಾಸಕೋಶದ ಸೋಂಕು ಕಾಣಿಸಿಕೊಂಡ ಕಾರಣ ಲಾಲು ಅವರನ್ನು​ ರಾಂಚಿಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.  ಆದರೆ, ಆರೋಗ್ಯ ಸುಧಾರಿಸದ ಕಾರಣ ಅವರನ್ನು ಏಮ್ಸ್​ಗೆ ಕಳುಹಿಸಲು ನಿರ್ಧರಿಸಲಾಗಿದೆ. ಕೋರ್ಟ್​​ನಿಂದ ಒಪ್ಪಿಗೆ ಪಡೆಯಲು ಲಾಲು ಕುಟುಂಬ ಮುಂದಾಗಿದೆ.

ಬಿಹಾರ ಮುಖ್ಯಮಂತ್ರಿಯಾಗಿದ್ದಾಗ ಲಾಲು ಬಹುದೊಡ್ಡ ಮೇವು ಹಗರಣ ಮಾಡಿದ್ದರು. ಲಾಲು 1995 ಡಿಸೆಂಬರ್​ ಹಾಗೂ 1996 ಜನವರಿ ತಿಂಗಳಲ್ಲಿ ದುಮಕಾ ಖಜಾನೆಯಿಂದ 3.76 ಕೋಟಿ ಹಣ ತೆಗೆದಿದ್ದರು. ಈ ಪ್ರಕರಣದಲ್ಲಿ ಲಾಲುಗೆ 7 ವರ್ಷ ಜೈಲು ಶಿಕ್ಷೆಯಾಗಿತ್ತು.

ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಆರ್​ಜೆಡಿ ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್​ ಯಾದವ್​ ಜಾಮೀನು ಅರ್ಜಿ ವಿಚಾರಣೆಯನ್ನು ಜಾರ್ಖಂಡ್ ಹೈಕೋರ್ಟ್​​ ಡಿಸೆಂಬರ್ ಅಂತ್ಯದಲ್ಲಿ 6 ವಾರ ಮುಂದೂಡಿತ್ತು.

 

ಲಾಲು ಪ್ರಸಾದ್ ಯಾದವ್‌ಗೆ ಅನಾರೋಗ್ಯ, ರಾಂಚಿಯ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ