ದೆಹಲಿ, ಅ.4: ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಾಗೂ ಅವರ ಪತ್ನಿ ರಾಬ್ರಿ ದೇವಿ ಮತ್ತು ಅವರ ಪುತ್ರ, ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ಗೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಯುಪಿಎ ಒಕ್ಕೂಟ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದ ಲಾಲು ಪ್ರಸಾದ್ ಯಾದವ್ ಅವರು ರೈಲ್ವೆ ಉದ್ಯೋಗಕ್ಕಾಗಿ ಭೂ ಹಗರಣ ಮಾಡಿದರು ಎಂದು ಜುಲೈನಲ್ಲಿ ಜಾರಿ ನಿರ್ದೇಶನಾಲಯವು ಅವರ ಮೇಲೆ ಪ್ರಕರಣ ದಾಖಲಿಸಿಕೊಂಡಿತ್ತು. ಇದರ ಜತೆಗೆ ಅವರ ಆಸ್ತಿಯನ್ನು ಕೂಡ ಜಪ್ತಿ ಮಾಡಿತ್ತು. ಈ ಜಪ್ತಿಯಲ್ಲಿ ಅವರ ಮಗ, ಪ್ರಸ್ತುತ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೂ ನೋಟಿಸ್ ನೀಡಿ ಜಪ್ತಿ ಮಾಡಿತ್ತು. ನಂತರ ಬಿಹಾರ ಮಾಜಿ ಮುಖ್ಯಮಂತ್ರಿಯಾಗಿದ್ದ ಲಾಲು ಪ್ರಸಾದ್ ಯಾದವ್ ಅವರ ಪತ್ನಿ ರಾಬ್ರಿ ದೇವಿ ಅವರಿಗೂ ನೋಟಿಸ್ ನೀಡಿ, ಪ್ರಕರಣ ದಾಖಲಿಸಿತ್ತು.
2004ರಿಂದ 2009 ಅವಧಿಯವರೆಗೆ ರೈಲ್ವೆ ಸಚಿವರಾಗಿದ್ದ ಲಾಲು ಪ್ರಸಾದ್ ಯಾದವ್ ಅವರು ರೈಲ್ವೆಯ ವಿವಿಧ ವಲಯಗಳಲ್ಲಿನ ಗ್ರೂಪ್ ಡಿ ಹುದ್ದೆಗಳ ಬದಲಿಗೆ ತಮ್ಮ ಕುಟುಂಬ ಸದಸ್ಯರ ಹೆಸರಿಗೆ ಭೂ ಆಸ್ತಿಯನ್ನು ವರ್ಗಾಯಿಸಲು ಹಣ ಪಡೆದಿದ್ದಾರೆ ಎಂದು ಸಿಬಿಐ ಹೇಳಿದೆ. ರೈಲ್ವೆ ಅಧಿಕಾರಿಗಳು ತರಾತುರಿಯಾಗಿ ಈ ಅವರ ಆದೇಶವನ್ನು ಪಾಲಿಸಿ ಲಾಲು ಪ್ರಸಾದ್ ಯಾದವ್ ಕುಟುಂಬಕ್ಕೆ ರೈಲ್ವೆ ಭೂಮಿಯನ್ನು ವರ್ಗಾಯಿಸಲಾಗಿದೆ ಎಂದು ಸಿಬಿಐ ವರದಿಯಲ್ಲಿ ಹೇಳಿದೆ.
ಇದನ್ನೂ ಓದಿ:ದೆಹಲಿ ಮದ್ಯ ನೀತಿ ಪ್ರಕರಣ: ಎಎಪಿಯ ಸಂಸದ ಸಂಜಯ್ ಸಿಂಗ್ ಮನೆ ಮೇಲೆ ಇಡಿ ದಾಳಿ
ಪಾಟ್ನಾದ ಹಲವಾರು ನಿವಾಸಿಗಳಿಗೆ ಮತ್ತು ಕಂಪನಿಗಳನ್ನು ತಮ್ಮ ನಿಯಂತ್ರಣದಲ್ಲಿಡಲು ರಾಜಧಾನಿಯಲ್ಲಿರುವ ಭೂಮಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ರಾಬ್ರಿ ದೇವಿ ಮತ್ತು ಪುತ್ರಿಯರಾದ ಮಿಸಾ ಭಾರತಿ ಮತ್ತು ಹೇಮಾ ಯಾದವ್ ಅವರ ಹೆಸರಿನಲ್ಲಿ ಪತ್ರಗಳ ಮೂಲಕ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅಂತಹ ನೇಮಕಾತಿಗಳಿಗೆ ಯಾವುದೇ ಜಾಹೀರಾತು ಅಥವಾ ಯಾವುದೇ ಸಾರ್ವಜನಿಕ ಸೂಚನೆಯನ್ನು ನೀಡಲಾಗಿಲ್ಲ ಎಂದು ಸಿಬಿಐ ಹೇಳಿಕೊಂಡಿದೆ. ಆದರೂ ಪಾಟ್ನಾದ ನಿವಾಸಿಗಳ ನೇಮಕಗೊಂಡವರನ್ನು ಮುಂಬೈ, ಜಬಲ್‌ಪುರ, ಕೋಲ್ಕತ್ತಾ, ಜೈಪುರ ಮತ್ತು ಹಾಜಿಪುರದ ವಿವಿಧ ವಲಯ ರೈಲ್ವೆಗಳಲ್ಲಿ ಬದಲಿಯಾಗಿ ನೇಮಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:14 am, Wed, 4 October 23