ಸಾಲ ಮಾಡಿ ನರ್ಸಿಂಗ್ ಓದಿಸಿದ ಪತಿ, ರಾತ್ರೋ ರಾತ್ರಿ ಪ್ರಿಯಕರನ ಜತೆ ಓಡಿ ಹೋಗಿ ಮದುವೆಯಾದ ಹೆಂಡತಿ

2020ರಲ್ಲಿ ಮದುವೆ, ಪತ್ನಿಗೆ ಓದುವ ಆಸೆ, ನಾನ್ಯಾಕೆ ಅದಕ್ಕೆ ಅಡ್ಡಿ ಬರಲಿ, ಆಕೆಯೂ ಓದಿ ಕೆಲಸ ಮಾಡಿ ಹೆಸರುಗಳಿಸಲಿ ಎನ್ನುವ ನಿಸ್ವಾರ್ಥ ಪ್ರೀತಿ ಪತಿಯದ್ದು. ಹಾಗಾಗಿ ಸಾಲ ಮಾಡಿ ಪತ್ನಿಗೆ ನರ್ಸಿಂಗ್ ವಿದ್ಯಾಭ್ಯಾಸ ಮಾಡಿಸಿದ್ದ. ಇದೀಗ ಪತ್ನಿ ಪ್ರಿಯಕರನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಾಳೆ.   ಈ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ.  ಉತ್ತರ ಪ್ರದೇಶದ ಜ್ಯೋತಿ ಮೌರ್ಯ ಅವರ ಪ್ರಕರಣಕ್ಕೆ ಸ್ವಲ್ಪ ಹೋಲುತ್ತದೆ. ಒಂದೇ ಒಂದು ವ್ಯತ್ಯಾಸವೆಂದರೆ ಈ ಪ್ರಕರಣದಲ್ಲಿ ಮಹಿಳೆಗೆ ಕೆಲಸ ಸಿಕ್ಕಿಲ್ಲ.

ಸಾಲ ಮಾಡಿ ನರ್ಸಿಂಗ್ ಓದಿಸಿದ ಪತಿ, ರಾತ್ರೋ ರಾತ್ರಿ ಪ್ರಿಯಕರನ ಜತೆ ಓಡಿ ಹೋಗಿ ಮದುವೆಯಾದ ಹೆಂಡತಿ
ನರ್ಸ್​Image Credit source: Star Peace
Follow us
ನಯನಾ ರಾಜೀವ್
|

Updated on:Oct 04, 2023 | 12:46 PM

2020ರಲ್ಲಿ ಮದುವೆ, ಪತ್ನಿಗೆ ಓದುವ ಆಸೆ, ನಾನ್ಯಾಕೆ ಅದಕ್ಕೆ ಅಡ್ಡಿ ಬರಲಿ, ಆಕೆಯೂ ಓದಿ ಕೆಲಸ ಮಾಡಿ ಹೆಸರುಗಳಿಸಲಿ ಎನ್ನುವ ನಿಸ್ವಾರ್ಥ ಪ್ರೀತಿ ಪತಿಯದ್ದು. ಹಾಗಾಗಿ ಸಾಲ ಮಾಡಿ ಪತ್ನಿಗೆ ನರ್ಸಿಂಗ್ ವಿದ್ಯಾಭ್ಯಾಸ ಮಾಡಿಸಿದ್ದ. ಇದೀಗ ಪತ್ನಿ ಪ್ರಿಯಕರನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಾಳೆ.   ಈ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ.  ಉತ್ತರ ಪ್ರದೇಶದ ಜ್ಯೋತಿ ಮೌರ್ಯ ಅವರ ಪ್ರಕರಣಕ್ಕೆ ಸ್ವಲ್ಪ ಹೋಲುತ್ತದೆ. ಒಂದೇ ಒಂದು ವ್ಯತ್ಯಾಸವೆಂದರೆ ಈ ಪ್ರಕರಣದಲ್ಲಿ ಮಹಿಳೆಗೆ ಕೆಲಸ ಸಿಕ್ಕಿಲ್ಲ.

ಪತಿಯ ಆರೋಪವೇನು?: ಈ ಘಟನೆ ಕುರಿತು ಪತಿ ಟಿಂಕು ಕುಮಾರ್ ಯಾದವ್ ಮಾತನಾಡಿ, ಸೆ.19ರಂದು ಪತ್ನಿಗೆ ಮನೆಗೆ ಹೋಗುವ ನೆಪದಲ್ಲಿ ಕಾಲೇಜು ಬಿಟ್ಟಿದ್ದರೂ ಮನೆಗೆ ಬಂದಿರಲಿಲ್ಲ. ನಂತರ ತಾನು ಗೊಡ್ಡಾನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ವಿವಾಹಿತ ಮಹಿಳೆ ಬುಧೋನಾ ಗೊಡ್ಡಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಯುವಕ ದಿಲ್ಖುಷ್ ರಾವತ್ ಜತೆ ಓಡಿ ಹೋಗಿದ್ದಾರೆ ಎನ್ನುವುದು ತಿಳಿದುಬಂದಿದೆ. ದೆಹಲಿಗೆ ಹೋಗಿ ಯಾವುದೋ ದೇವಸ್ಥಾನದಲ್ಲಿ ಮದುವೆಯಾಗಿದ್ದೇನೆ ಎಂದು ಫೋಟೊಗಳನ್ನು ಕಳುಹಿಸಿದ್ದಾಳೆ ಎಂದು ಟಿಂಕು ಹೇಳಿದ್ದಾರೆ.

ಕೂಲಿ ಮಾಡಿ ಸಾಲ ಮಾಡಿ ನರ್ಸಿಂಗ್ ಕಾಲೇಜಿಗೆ ಕಳುಹಿಸಿ ಓದಿಸಿದರೂ ಆಕೆ ತನಗೆ ಮೋಸ ಮಾಡಿ ಓಡಿ ಹೋಗಿದ್ದಾಳೆ ಎಂದು ಭಾರವಾದ ಮನಸ್ಸಿನಿಂದ ನೋವು ಹಂಚಿಕೊಂಡಿದ್ದಾರೆ.

ಸಾಲ ಮಾಡಿ ನರ್ಸಿಂಗ್ ಪ್ರವೇಶ ಪಡೆದಿದ್ದಳು: ನವೆಂಬರ್ 2020ರಲ್ಲಿ ಟಿಂಕು ಕುಮಾರ್ ಯಾದವ್ ಅವರು ಪ್ರಿಯಾ ಕುಮಾರಿ ಅವರನ್ನು ಸಾಂಪ್ರದಾಯಿಕವಾಗಿ ವಿವಾಹವಾದರು. ಟಿಂಕು ಕೂಲಿ ಕೆಲಸ ಮಾಡುತ್ತಿದ್ದು, ಪತ್ನಿಯ ಆಸೆಯಂತೆ ಆಕೆಯನ್ನು ಶಕುಂತಲಾ ನರ್ಸಿಂಗ್ ಕಾಲೇಜಿಗೆ ಸೇರಿಸಿದ್ದ. ಇದರಲ್ಲಿ ಪತಿ ಒಟ್ಟು 2.5 ಲಕ್ಷ ಸಾಲ ಪಡೆದು ಹಾಸ್ಟೆಲ್ ಶುಲ್ಕದ ಜತೆ ವಸತಿ, ಊಟದ ವ್ಯವಸ್ಥೆ ಮಾಡಿದ್ದಾನೆ. ಅವರ ಗೊಡ್ಡಾದಲ್ಲಿ ಅಂತಿಮ ವರ್ಷದ ನರ್ಸಿಂಗ್ ಓದುತ್ತಿದ್ದರು. ಅಂತಿಮ ಪರೀಕ್ಷೆಯು ಕೆಲವೇ ದಿನಗಳಲ್ಲಿ ನಡೆಯಲಿದೆ.

ಮತ್ತಷ್ಟು ಓದಿ: ಗಂಡನನ್ನ ಬಿಟ್ಟು ಓಡಿ ಬಂದಿದ್ದ ಮಹಿಳೆ ಪ್ರಿಯಕರನ ಜೊತೆ ದುರಂತ ಅಂತ್ಯಕಂಡಳು: ಮಕ್ಕಳು ಅನಾಥ

ವಿವಾಹಿತ ಮಹಿಳೆಯ ಪ್ರಿಯಕರ ನಿರುದ್ಯೋಗಿ: ಪ್ರಿಯಾ ಕುಮಾರಿ ಪ್ರಿಯಕರ ನಿರುದ್ಯೋಗಿ, ಹುಡುಗಿಯ ಮನೆ ಹಾಗೂ ಪ್ರಿಯಕರನ ಮನೆ ಒಂದೇ ಗ್ರಾಮದಲ್ಲಿದೆ. ಈ ಕುರಿತು ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಎರಡು ಕುಟುಂಬಗಳ ನಡುವೆ ಸಣ್ಣ ಘರ್ಷಣೆಯೂ ಕೂಡ ನಡೆದಿದೆ.

ಇಂಥದ್ದೇ ಘಟನೆ ನಡೆದಿತ್ತು ಕಷ್ಟಪಟ್ಟು ಓದಿಸಿದ್ದ ಗಂಡನ ಮೇಲೆ ವರದಕ್ಷಿಣೆ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದಳು. ತನ್ನ ಹೆಂಡತಿಯನ್ನು ಉಪವಿಭಾಗದ ಮ್ಯಾಜಿಸ್ಟ್ರೇಟ್ ಆಗಲು ಕಷ್ಟಪಟ್ಟು ಓದಿಸಿದ ಪತಿ, ಆದರೆ ಹೆಂಡತಿ ಬೇರೆಯವರನ್ನು ಪ್ರೀತಿಸಿ ತನ್ನ ಪತಿಗೆ ಮೋಸ ಮಾಡಿರೋ ವಿಚಾರ ಹಲವರನ್ನು ಕೆರಳಿಸಿದೆ. ಅಲೋಕ್ ಮೌರ್ಯ, ಯುಪಿಯ ಪ್ರಯಾಗರಾಜ್‌ನಲ್ಲಿ ಪಂಚಾಯತ್ ರಾಜ್ ಇಲಾಖೆಯಲ್ಲಿ ನಾಲ್ಕನೇ ದರ್ಜೆಯ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದರು.

2010ರಲ್ಲಿ ಅಲೋಕ್ ಮೌರ್ಯ ಹಾಗೂ ಜ್ಯೋತಿ ಮೌರ್ಯ ಇಬ್ಬರಿಗೆ ಮದುವೆಯಾಗಿತ್ತು. 2015ರಲ್ಲಿ ಜ್ಯೋತಿ ಮೌರ್ಯ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಬಳಿಕ ಅಲೋಕ್ ತನ್ನ ಹೆಂಡತಿಯ ಶಿಕ್ಷಣವನ್ನು ಪೂರ್ಣಗೊಳಿಸಲು ಹಗಲಿರುಳು ಶ್ರಮಿಸಿದರು. ಪ್ರಯಾಗ್‌ರಾಜ್‌ನಲ್ಲಿ, ಉತ್ತಮ ಕೋಚಿಂಗ್ ಸೆಂಟರ್‌ಗೆ ಸೇರಿಸಿದರು. ಜ್ಯೋತಿ, ಮಹಿಳೆಯರಲ್ಲಿ ಮೂರನೇ ರ‍್ಯಾಂಕ್ ಮತ್ತು ಪಬ್ಲಿಕ್ ಸರ್ವಿಸ್ ಕಮಿಷನ್‌ನಲ್ಲಿ 16 ನೇ ಸ್ಥಾನ ಗಳಿಸಿ ಎಸ್‌ಡಿಎಂ ಆಗಿ ನೇಮಕಗೊಂಡಿದ್ದಾರೆ. ಈಗ ಪತಿಯನ್ನೇ ಜೈಲಿಗಟ್ಟಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:40 pm, Wed, 4 October 23

ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ