
ಭೋಪಾಲ್: ಮಹಾಮಾರಿ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಎಲ್ಲೆಡೆ ಆಹಾರಕ್ಕೆ ಹಾಹಾಕಾರ ಶುರುವಾಗಿದೆ. ಇಂಥಾ ಸಂದಿಗ್ಧ ಸಮಯದಲ್ಲಿ ಮಧ್ಯಪ್ರದೇಶದ ಶಾಜಾಪುರದಲ್ಲಿ ಸಂಗ್ರಹಿಸಿದ್ದ ಗೋಧಿಯು ಮಳೆಯಿಂದ ಹಾಳಾಗಿದೆ.
ನ್ಯಾಯಬೆಲೆ ಗೋಧಿ ಖರೀದಿ ಕೇಂದ್ರಗಳಿಗೆ ಕಳುಹಿಸುವ ಉದ್ದೇಶದಿಂದ ಸುಮಾರು 25 ಕೇಂದ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗೋಧಿಯನ್ನು ಸಂಗ್ರಹಿಸಲಾಗಿತ್ತು. ಆದ್ರೆ ಮಧ್ಯಪ್ರದೇಶದಲ್ಲಿ ಭಾರೀ ಮಳೆಯಾದ ಪರಿಣಾಮ ಸಂಗ್ರಹಿಸಿದ್ದ ಗೋಧಿಯು ನೀರುಪಾಲಾಗಿದೆ.