ಗ್ಯಾಂಗ್​ಸ್ಟರ್ ಲಾರೆನ್ಸ್​ ಬಿಷ್ಣೋಯ್ ಪ್ರೇಯಸಿಯನ್ನು ಜೀವಂತವಾಗಿ ಸುಟ್ಟು ಹಾಕಿದ್ರಾ?

|

Updated on: Oct 15, 2024 | 8:40 PM

ಗಾಯಕ ಸಿಧು ಮೂಸೆವಾಲಾ, ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಹಿಂದಿರುವ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯ್​ ಪ್ರೇಯಸಿಯನ್ನು ಜೀವಂತವಾಗಿ ಸುಟ್ಟುಹಾಕಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಬ್ಯುಸಿನೆಸ್ ಟುಡೇ ಈ ಕುರಿತು ವರದಿ ಮಾಡಿದೆ

ಗ್ಯಾಂಗ್​ಸ್ಟರ್ ಲಾರೆನ್ಸ್​ ಬಿಷ್ಣೋಯ್ ಪ್ರೇಯಸಿಯನ್ನು ಜೀವಂತವಾಗಿ ಸುಟ್ಟು ಹಾಕಿದ್ರಾ?
ಲಾರೆನ್ಸ್​ ಬಿಷ್ಣೋಯ್
Follow us on

ಗಾಯಕ ಸಿಧು ಮೂಸೆವಾಲಾ, ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಹಿಂದಿರುವ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯ್​ ಪ್ರೇಯಸಿಯನ್ನು ಜೀವಂತವಾಗಿ ಸುಟ್ಟುಹಾಕಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಬ್ಯುಸಿನೆಸ್ ಟುಡೇ ಈ ಕುರಿತು ವರದಿ ಮಾಡಿದೆ, ಲಾರೆನ್ಸ್​ ಬಿಷ್ಣೋಯ್ ಇದೀಗ ಸಬರಮತಿ ಕೇಂದ್ರ ಕಾರಾಗೃಹದಲ್ಲಿದ್ದಾರೆ, ಪಂಜಾಬ್, ಹರ್ಯಾಣ ರಾಜಸ್ಥಾನ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಾದ್ಯಂತ ಹಲವು ಅಪರಾಧ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದ.

ಪೊಲೀಸ್​ ಪೇದೆಯ ಮಗನಾಗಿದ್ದು, ಗ್ಯಾಂಗ್​ಸ್ಟರ್​ ಆಗಿ ಬದಲಾಗಿದ್ಹೇಗೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ, ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಚುನಾವಣೆಯ ಸಂದರ್ಭದಲ್ಲಿ ಆತನ ಗೆಳತಿಯನ್ನು ಜೀವಂತವಾಗಿ ಸುಟ್ಟು ಹಾಕಲಾಗಿತ್ತು, ಪ್ರೇಮ ಕಥೆ ದುರಂತ ಅಂತ್ಯ ಕಂಡಿತ್ತು.

ವರದಿಗಳ ಪ್ರಕಾರ, ಲಾರೆನ್ಸ್ ಬಿಷ್ಣೋಯ್ ಉತ್ತಮ ಕುಟುಂಬದಲ್ಲಿ ಬೆಳೆದವರು ಅವರ ತಂದೆ ಹರ್ಯಾಣ ಪೊಲೀಸ್ ಅಧಿಕಾರಿಯಾಗಿದ್ದು, ಕುಟುಂಬದ ಒಡೆತನದ ಜಮೀನು ಕೋಟಿಗಟ್ಟಲೆ ಬೆಲೆಬಾಳುತ್ತದೆ. ಅವರ ವಿಶೇಷ ಹಿನ್ನೆಲೆಯ ಹೊರತಾಗಿಯೂ, ಬಿಷ್ಣೋಯ್ ಅಂತಿಮವಾಗಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ.

ನ್ಯೂಸ್ 18 ಹಿಂದಿ ಉಲ್ಲೇಖಿಸಿದಂತೆ, ಅಬೋಹರ್‌ನ ಕಾನ್ವೆಂಟ್ ಶಾಲೆಯಲ್ಲಿ ಓದುತ್ತಿದ್ದಾಗ ಬಿಷ್ಣೋಯ್ ಸಹಪಾಠಿಯೊಬ್ಬಳ ಜತೆ ಪ್ರೀತಿಯ ಅಂಕುರವಾಗಿತ್ತು. ಇಬ್ಬರೂ ಉನ್ನತ ವ್ಯಾಸಂಗಕ್ಕಾಗಿ ಚಂಡೀಗಢದ ಡಿಎವಿ ಕಾಲೇಜಿಗೆ ಸೇರಿದಾಗ ಈ ಪ್ರೀತಿಯು ಪರಸ್ಪರ ಸಂಬಂಧಕ್ಕೆ ತಿರುಗಿತು, ಅಲ್ಲಿ  ತಮ್ಮ ಸಂಬಂಧವನ್ನು ಮುಂದುವರೆಸಿದರು.

ಮತ್ತಷ್ಟು ಓದಿ: ಸಲ್ಮಾನ್ ಖಾನ್ ಹತ್ಯೆಗೆಂದು 60 ಶೂಟರ್​ಗಳನ್ನು ನೇಮಿಸಿದ್ದ ಲಾರೆನ್ಸ್ ಬಿಷ್ಣೋಯ್​

ವಿದ್ಯಾರ್ಥಿ ಸಂಘದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಗುಂಪಿನಿಂದ ಸೋತ ನಂತರ, ಲಾರೆನ್ಸ್​ ಕೋಪಗೊಂಡಿದ್ದ.
2011 ರಲ್ಲಿ, ಬಿಷ್ಣೋಯಿ ಅವರ ಗುಂಪು ಮತ್ತು ಅವರ ವಿರೋಧಿಗಳ ನಡುವಿನ ಉದ್ವಿಗ್ನತೆಗಳು ಉಲ್ಬಣಗೊಂಡವು. ಇದು ಹಿಂಸಾತ್ಮಕ ಘಟನೆಗಳಿಗೆ ಕಾರಣವಾಯಿತು.

ಆಕೆಯ ಮರಣದ ನಂತರ, ಬಿಷ್ಣೋಯ್ ಹಲವಾರು ವಿದ್ಯಾರ್ಥಿ ನಾಯಕರ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದ್ದ ಎಂದು ಹೇಳಲಾಗುತ್ತದೆ.  ಇತ್ತೀಚೆಗೆ ನಡೆದ ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಹಿಂದೆ ಲಾರೆನ್ಸ್ ಕೈವಾಡವಿರುವುದು ತಿಳಿದುಬಂದಿದೆ. ಅಷ್ಟೇ ಅಲ್ಲದೆ ಸಲ್ಮಾನ್ ಖಾನ್ ಹತ್ಯೆಗೆ ಆತ 60 ಶೂಟರ್ಸ್​ಗಳನ್ನು ನೇಮಿಸಿಕೊಂಡಿದ್ದ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:28 pm, Tue, 15 October 24