ಸಲ್ಮಾನ್ ಖಾನ್ ಹತ್ಯೆಗೆಂದು 60 ಶೂಟರ್​ಗಳನ್ನು ನೇಮಿಸಿದ್ದ ಲಾರೆನ್ಸ್ ಬಿಷ್ಣೋಯ್​

ಬಾಲಿವುಡ್ ಸೂಪರ್​ಸ್ಟಾರ್ ಸಲ್ಮಾನ್​ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಲಾರೆನ್ಸ್​ ಬಿಷ್ಣೋಯ್ 60 ಶೂಟರ್​ಗಳನ್ನು ನೇಮಿಸಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಗ್ಯಾಂಗ್​ಸ್ಟರ್ ಲಾರೆನ್ಸ್​ ಬಿಷ್ಣೋಯ್ ಹಲವು ವರ್ಷಗಳಿಂದ ಸಲ್ಮಾನ್ ಖಾನ್ ವಿರುದ್ಧ ದ್ವೇಷ ಬೆಳೆಸಿಕೊಂಡಿದ್ದ. 1998ರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಭಾಗಿಯಾಗಿದ್ದರು.

ಸಲ್ಮಾನ್ ಖಾನ್ Image Credit source: Koimoi
Follow us
|

Updated on: Oct 15, 2024 | 2:04 PM

ಬಾಲಿವುಡ್ ಸೂಪರ್​ಸ್ಟಾರ್ ಸಲ್ಮಾನ್​ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಲಾರೆನ್ಸ್​ ಬಿಷ್ಣೋಯ್ 60 ಶೂಟರ್​ಗಳನ್ನು ನೇಮಿಸಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಗ್ಯಾಂಗ್​ಸ್ಟರ್ ಲಾರೆನ್ಸ್​ ಬಿಷ್ಣೋಯ್ ಹಲವು ವರ್ಷಗಳಿಂದ ಸಲ್ಮಾನ್ ಖಾನ್ ವಿರುದ್ಧ ದ್ವೇಷ ಬೆಳೆಸಿಕೊಂಡಿದ್ದ. 1998ರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಭಾಗಿಯಾಗಿದ್ದರು.

ಲಾರೆನ್ಸ್ ಸೇರಿರುವ ಬಿಷ್ಣೋಯ್ ಸಮುದಾಯವು ಕೃಷ್ಣಮೃಗವನ್ನು ಪವಿತ್ರವೆಂದು ಪರಿಗಣಿಸುತ್ತದೆ, ಇದು ಲಾರೆನ್ಸ್​ ಅಸಮಾಧಾನಕ್ಕೆ ಮೂಲ ಕಾರಣವೆಂದೇ ಹೇಳಬಹುದು. ಜೀ ನ್ಯೂಸ್‌ನ ಇತ್ತೀಚಿನ ವರದಿಯ ಪ್ರಕಾರ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್‌ಗೆ ಅನೇಕ ಬಾರಿ ಬೆದರಿಕೆಗಳನ್ನು ಹಾಕಿದೆ.

ಗ್ಯಾಂಗ್ 60 ಶೂಟರ್​ಗಳನ್ನು ನೇಮಿಸಿಕೊಂಡಿದ್ದು, ಖಾನ್ ಸುರಕ್ಷತೆ ಕುರಿತು ಗಂಭೀರ ಕಳವಳ ಉಂಟಾಗಿದೆ. ಈಗಾಗಲೇ ಪದೇ ಪದೇ ಬೆದರಿಕೆಯೊಡ್ಡುತ್ತಿರುವುದರಿಂದ ಸಲ್ಮಾನ್ ಖಾನ್ ಸುತ್ತ ಮುಂಬೈ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಮತ್ತಷ್ಟು ಓದಿ: ಬಾಬಾ ಸಿದ್ದಿಕಿ ಹಂತಕರಿಗೆ ಶಸ್ತ್ರಾಸ್ತ್ರ ಒದಗಿಸಿದ್ದು ಲಾರೆನ್ಸ್​ ಬಿಷ್ಣೋಯ್​ ಗ್ಯಾಂಗ್​

ಶನಿವಾರ ನಡೆದ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಘಟನೆಯ ನಂತರ ಮುಂಬೈ ಪೊಲೀಸರು ಸಲ್ಮಾನ್ ಖಾನ್ ಭದ್ರತೆಯನ್ನು ತೀವ್ರಗೊಳಿಸಿದ್ದಾರೆ.

ಬಾಬಾ ಸಿದ್ದಿಕಿ ಕಚೇರಿಯಿಂದ ಮನೆಗೆ ಮರಳುತ್ತಿರುವ ಸಮಯದಲ್ಲಿ ದುಷ್ಕರ್ಮಿಗಳು ಆರು ಸುತ್ತಿನ ಗುಂಡು ಹಾರಿಸಿದ್ದರು ಅದರಲ್ಲಿ 3 ಗುಂಡುಗಳು ಸಿದ್ದಿಕಿ ದೇಹ ಹೊಕ್ಕಿದ್ದವು, ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ, ಅವರು ಸಲ್ಮಾನ್​ ಖಾನ್​ಗೂ ಆಪ್ತರಾಗಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸಿದ್ದರಾಮಯ್ಯ ಸರ್ಕಾರ ವಜಾ ಮಾಡಲು ರಾಷ್ಟ್ರಪತಿಗೆ ಮನವಿ: ಬಿವೈ ವಿಜಯೇಂದ್ರ

ಹುಲಿ ಸೆರೆಗೆ ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಾದ್ಯಂತ ಭಾರೀ ಮಳೆ

ವಕ್ಫ್ ಜಮೀನು: ಸಚಿವ ಜಮೀರ್ ಅಹ್ಮದ್​ರನ್ನು ತರಾಟೆಗೆ ತೆಗೆದುಕೊಂಡ ಸಿಟಿ ರವಿ

ಓಕಳೀಪುರ ರೈಲ್ವೆ ಅಂಡರ್​ಪಾಸ್​ನಲ್ಲಿ ನೀರು ನಿಂತು ಜನರ ಪರದಾಟ

ತನಿಖೆಯ ನಂತರ ಪೂರ್ಣ ಮಾಹಿತಿ ನೀಡುತ್ತೇವೆ: ಡಾ ಶರಣಪ್ಪ, ಪೊಲೀಸ್ ಕಮೀಶನರ್

ಬೆಂಗಳೂರಲ್ಲಿ ಧಾರಾಕಾರ ಮಳೆ: ಬೆಳ್ಳಂಬೆಳಗ್ಗೆಯೇ ಶುರುವಾಯ್ತು ರಗಳೆ

ಬೆಂಗಳೂರಲ್ಲಿ ಬೆಳ್ಳಂ ಬೆಳಗ್ಗೆ ಧಾರಾಕಾರ ಮಳೆ; ಕೆಲಸಕ್ಕೆ ಹೋಗುವ ಜನರಿಗೆ ರಗಳ

‘ನಾನು ಅನ್​ಫಿಟ್ ಅನಿಸುತ್ತಿದೆ’; ಕಣ್ಣೀರು ಹಾಕಿದ ಧನರಾಜ್ ಆಚಾರ್

ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಹುಂಡಿ‌ ಎಣಿಕೆ ಕಾರ್ಯ, ಕಾಣಿಕೆಹಣ ಎಷ್ಟಿದೆ?