ಯಾವುದೇ ಧರ್ಮ ಇರಲಿ ಇಲ್ಲಿ ಓಂ ಶ್ರೀ ಎಂದು ವಿದ್ಯಾರಂಭ ಮಾಡಲಾಗುತ್ತದೆ, ಇದು ಕೇರಳ:ಶಶಿ ತರೂರ್

ಟ್ವಿಟರ್​​ನಲ್ಲಿ ವಿದ್ಯಾರಂಭದ ಫೋಟೊ ಶೇರ್ ಮಾಡಿದ ತರೂರ್, ತಾನು 9 ಮಕ್ಕಳಿಗೆ ವಿದ್ಯಾರಂಭ ಮಾಡಿದ್ದೇನೆ. ಮೂರು ಭಾಷೆಯಲ್ಲಿ- ದೇವನಾಗರಿ, ಮಲಯಾಳಂ ಮತ್ತು ಇಂಗ್ಲಿಷ್ ನಲ್ಲಿ ಓಂ ಶ್ರೀ ಎಂದು ಬರೆಸಿದೆ.

ಯಾವುದೇ ಧರ್ಮ ಇರಲಿ ಇಲ್ಲಿ ಓಂ ಶ್ರೀ ಎಂದು ವಿದ್ಯಾರಂಭ ಮಾಡಲಾಗುತ್ತದೆ, ಇದು ಕೇರಳ:ಶಶಿ ತರೂರ್
ಶಶಿ ತರೂರ್
Edited By:

Updated on: Oct 05, 2022 | 1:45 PM

ತಿರುವನಂತಪುರಂ: ಕಲಿಕೆಗೆ ಧರ್ಮದ ಅಡ್ಡಿಯಿಲ್ಲ. ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಮಕ್ಕಳಿಗೆ ನಾನು ಮೂರು ಭಾಷೆಯಲ್ಲಿ ಓಂ ಶ್ರೀ ಎಂದು ಬರೆಸಿದೆ. ಇದು ಕೇರಳ (Kerala). ವಿದ್ಯಾರಂಭ ಎಂಬ ಹ್ಯಾಷ್ ಟ್ಯಾಗ್ ಜತೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶಶಿ ತರೂರ್ (Shashi Tharoor) ಅವರು ತಮ್ಮ ಮನೆಯಲ್ಲಿ ನಡೆದ ವಿದ್ಯಾರಂಭದ (Vidyarambham)ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದಾರೆ. ಹಿಂದೂ ಸಂಪ್ರದಾಯ ಪ್ರಕಾರ ಪುಟ್ಟ ಮಕ್ಕಳನ್ನ ಶಾಲೆಗೆ ಸೇರಿಸುವ ಮುನ್ನ  ವಿದ್ಯಾರಂಭ ಮಾಡಿಸಲಾಗುತ್ತದೆ. ಮೊದಲ ಬಾರಿ ಅಕ್ಷರವನ್ನು ಬರೆಸುವುದೇ ವಿದ್ಯಾರಂಭ. ಇದನ್ನು ವಿಜಯದಶಮಿ ದಿನ ಮಾಡಲಾಗುತ್ತದೆ. ಟ್ವಿಟರ್​​ನಲ್ಲಿ ವಿದ್ಯಾರಂಭದ ಫೋಟೊ ಶೇರ್ ಮಾಡಿದ ತರೂರ್, ತಾನು 9 ಮಕ್ಕಳಿಗೆ ವಿದ್ಯಾರಂಭ ಮಾಡಿದ್ದೇನೆ. ಮೂರು ಭಾಷೆಯಲ್ಲಿ- ದೇವನಾಗರಿ, ಮಲಯಾಳಂ ಮತ್ತು ಇಂಗ್ಲಿಷ್ ನಲ್ಲಿ ಓಂ ಶ್ರೀ ಎಂದು ಬರೆಸಿದೆ. ಕೇರಳದಲ್ಲಿನ ಶೈಕ್ಷಣಿಕ ದರವನ್ನು ಹೊಗಳಿದ ತರೂರ್ ,ತಮ್ಮ ಚುನಾವಣಾಕ್ಷೇತ್ರವಾದ ತಿರುವನಂತಪುರಂನ  ಪೂಜಪ್ಪುರದಲ್ಲಿನ ಸರಸ್ವತಿ ಮಂಟಪಕ್ಕೂ ಭೇಟಿ ನೀಡಿದ್ದು, ಅಲ್ಲಿನ ಅನುಭವವನ್ನು ಹಂಚಿಕೊಂಡಿದ್ದಾರೆ.

ನಾನು 2009 ರಿಂದ (ಎರಡು ಸಾಂಕ್ರಾಮಿಕ ವರ್ಷಗಳನ್ನು ಹೊರತುಪಡಿಸಿ), ನಾನು ಪೂಜಾಪುರದ ಸರಸ್ವತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದೇನೆ. ಮಂಟಪದಲ್ಲಿ ಒಂದು ಗಂಟೆ ಕಳೆದು ಪೋಷಕರು  ಮಕ್ಕಳಿಗೆ ವರ್ಣಮಾಲೆಯನ್ನು ಕಲಿಸಿದೆ. ಓದುವ ಮತ್ತು ಬರೆಯುವ ಗೌರವವನ್ನು ಮೊದಲೇ ಹುಟ್ಟುಹಾಕಿರುವುದು ಕೇರಳದ ದೊಡ್ಡ ಶಕ್ತಿ, ”ಎಂದು ಅವರು ಟ್ವೀಟ್ ಮಾಡಿದ್ದಾರೆ.

ತರೂರ್ ಅವರು ಸಿಪಿಐಎಂನ ತಿರುವನಂತಪುರಂನ ಮಾಜಿ ಮೇಯರ್ ಕೆ. ಚಂದ್ರಿಕಾ ಮತ್ತು ಭಾರತೀಯ ಜನತಾ ಪಕ್ಷದ ಕೌನ್ಸಿಲರ್ ಡಾ.ವಿಜಯಲಕ್ಷ್ಮಿ ಅವರೊಂದಿಗೆ ದೇವಸ್ಥಾನಕ್ಕೆ ಬಂದಿದ್ದ ಚಿತ್ರವನ್ನು ಹಂಚಿಕೊಂಡಿದ್ದಾರೆ, ಸಂತೋಷವನ್ನು ವ್ಯಕ್ತಪಡಿಸಿದ ಅವರು ಬದಲಾವಣೆಯ ಉತ್ಸಾಹ ವ್ಯಾಪಕವಾಗಿದೆ  ಎಂದು ಹೇಳಿದರು.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಶಶಿ ತರೂರ್ ಮತ್ತು ಅವರ ಪಕ್ಷದ ಸಹೋದ್ಯೋಗಿ ಮಲ್ಲಿಕಾರ್ಜುನ ಖರ್ಗೆ ಪರಸ್ಪರ ಪೈಪೋಟಿ ನಡೆಸುತ್ತಿದ್ದು, ಅಕ್ಟೋಬರ್ 17 ರಂದು ಮತದಾನ ನಡೆಯಲಿದೆ.