AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮಾಚಲ ಪ್ರದೇಶದ ಬಿಲಾಸ್​​ಪುರದಲ್ಲಿರುವ ಏಮ್ಸ್ ಜೀವ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ: ಮೋದಿ

ವಿಜಯದಶಮಿಯ ಶುಭ ಮುಹೂರ್ತದಲ್ಲಿ ಹಿಮಾಚಲ ಪ್ರದೇಶದ ಜನರಿಗೆ ಸಾವಿರಾರುಕೋಟಿ ಮೌಲ್ಯದ ಆರೋಗ್ಯ, ಶಿಕ್ಷಣ,ಉದ್ಯೋಗ ಮತ್ತು ಮೂಲಸೌಕರ್ಯದ ಯೋಜನೆಗಳಿಗೆ ಚಾಲನೆ ನೀಡುವ ಅವಕಾಶ ನನಗೆ ಸಿಕ್ಕಿದೆ ಎಂದು ಮೋದಿ ಹೇಳಿದ್ದಾರೆ.

ಹಿಮಾಚಲ ಪ್ರದೇಶದ ಬಿಲಾಸ್​​ಪುರದಲ್ಲಿರುವ ಏಮ್ಸ್ ಜೀವ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ: ಮೋದಿ
ನರೇಂದ್ರ ಮೋದಿ
TV9 Web
| Edited By: |

Updated on:Oct 05, 2022 | 2:51 PM

Share

ಹಿಮಾಚಲ ಪ್ರದೇಶದ (Himachal Pradesh) ಬಿಲಾಸ್​​ಪುರದಲ್ಲಿ ಬಹು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಬುಧವಾರ) ಶಂಕು ಸ್ಥಾಪನೆ ಮಾಡಿದ್ದಾರೆ. ಮೊದಲು ಏಮ್ಸ್ ಎಂದರೆ ದೆಹಲಿಗೆ ಹೋಗಬೇಕಿತ್ತು. ಆದರೆ ಪ್ರಧಾನಿ ಮೋದಿ ಹಿಮಾಚಲದ ಜನರ ನೋವನ್ನು ಅರ್ಥಮಾಡಿಕೊಂಡರು ಮತ್ತು ಬಿಲಾಸ್‌ಪುರದಲ್ಲಿ (Bilaspur )ಏಮ್ಸ್ ತಂದರು. ಯಾರ ನಾಯಕತ್ವ ನಮಗೆ ಶಕ್ತಿ ನೀಡಿದೆ ಎಂದು ಇದು ಯಾವಾಗಲೂ ನೆನಪಿಸುತ್ತದೆ ಎಂದು ಬಿಲಾಸ್‌ಪುರದಲ್ಲಿ ಹಿಮಾಚಲ ಪ್ರದೇಶ ಸಿಎಂ ಜೈರಾಮ್ ಠಾಕೂರ್ ಹೇಳಿದ್ದಾರೆ. ಹಿಮಾಚಲ ಪ್ರದೇಶದ ಬಿಲಾಸ್‌ಪುರದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ವಿಜಯದಶಮಿಯ ಸಂದರ್ಭದಲ್ಲಿ ನಿಮಗೆ ಮತ್ತು ಇಡೀ ದೇಶವಾಸಿಗಳಿಗೆ ಶುಭಾಶಯಗಳು ಎಂದಿದ್ದಾರೆ. ಈ ಪವಿತ್ರ ಹಬ್ಬವು ಅಮೃತ ಕಾಲದಲ್ಲಿ ದೇಶವು ಸಂಕಲ್ಪ ಕೈಗೊಂಡಿರುವ ‘ಪಂಚ ಪ್ರಾಣ’ಗಳ ಮೇಲೆ ನಡೆಯಲು ಹೊಸ ಶಕ್ತಿಯನ್ನು ನೀಡುತ್ತದೆ, ಪ್ರತಿಯೊಂದು ದುಷ್ಟತನವನ್ನು ನಿವಾರಿಸುತ್ತದೆ ಎಂದು ಪ್ರಧಾನಿ ಹೇಳಿದರು. ವಿಜಯದಶಮಿಯ ಶುಭ ಮುಹೂರ್ತದಲ್ಲಿ ಹಿಮಾಚಲ ಪ್ರದೇಶದ ಜನರಿಗೆ ಸಾವಿರಾರುಕೋಟಿ ಮೌಲ್ಯದ ಆರೋಗ್ಯ, ಶಿಕ್ಷಣ,ಉದ್ಯೋಗ ಮತ್ತು ಮೂಲಸೌಕರ್ಯದ ಯೋಜನೆಗಳಿಗೆ ಚಾಲನೆ ನೀಡುವ ಅವಕಾಶ ನನಗೆ ಸಿಕ್ಕಿದೆ ಎಂದು ಮೋದಿ ಹೇಳಿದ್ದಾರೆ. ಕಳೆದ 8 ವರ್ಷಗಳಲ್ಲಿ ನಾವು ದೇಶದ ಸಣ್ಣಪುಟ್ಟ ಪ್ರದೇಶಗಳಿಗೆ ಅಭಿವೃದ್ಧಿ ಕಾರ್ಯ ತಲುಪಿಸುವುದಕ್ಕೆ ಕಾರ್ಯ ಪ್ರವೃತ್ತರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

ಏಮ್ಸ್  ಬಿಲಾಸ್‌ಪುರ್ ಹಿಮಾಚಲದಲ್ಲಿ ಕೈಗೆಟುಕುವ ಆರೋಗ್ಯ ಸೇವೆಯ ಪ್ರವೇಶವನ್ನು ಹೆಚ್ಚಿಸುವುದಲ್ಲದೆ ಪರಿಸರ ಸ್ನೇಹಿಯಾಗಿದೆ. ಇದನ್ನು ‘ಗ್ರೀನ್ ಏಮ್ಸ್’ ಎಂದು ಕರೆಯಲಾಗುತ್ತದೆ . ಇಂದು ಹಿಮಾಚಲವು ಕೇಂದ್ರೀಯ ವಿಶ್ವವಿದ್ಯಾನಿಲಯವನ್ನು ಹೊಂದಿದೆ, ಐಐಟಿಗಳು, ಐಐಐಟಿಗಳು ಮತ್ತು ಐಐಎಂಗಳಂತಹ ಪ್ರತಿಷ್ಠಿತ ಸಂಸ್ಥೆಗಳನ್ನು ಹೊಂದಿದೆ. ದೇಶದ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯದ ಅತಿದೊಡ್ಡ ಸಂಸ್ಥೆಯಾದ ಏಮ್ಸ್ ಈಗ ಬಿಲಾಸ್‌ಪುರದ ವೈಭವವನ್ನು ಹೆಚ್ಚಿಸುತ್ತಿದೆ. ರಾಷ್ಟ್ರದ ರಕ್ಷಣಾ ಪಡೆಗಳಿಗೆ ಕೊಡುಗೆ ನೀಡುವ ವೀರರಿಗೆ ದೇಶದಾದ್ಯಂತ ಹೆಸರುವಾಸಿಯಾಗಿರುವ ಹಿಮಾಚಲ, ಏಮ್ಸ್ ಉದ್ಘಾಟನೆಯ ನಂತರ ಜೀವ ರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದಿದ್ದಾರೆ ಪ್ರಧಾನಿ

ಬೃಹತ್ ಔಷಧಿ ಪಾರ್ಕ್‌ಗಳಿಗೆ ಆಯ್ಕೆಯಾಗಿರುವ ದೇಶದ 3 ರಾಜ್ಯಗಳಲ್ಲಿ ಹಿಮಾಚಲವೂ ಒಂದಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.  ಮೆಡಿಕಲ್ ಡಿವೈಸ್  ಪಾರ್ಕ್​​ಗೆ  ಆಯ್ಕೆಯಾದ 4 ರಾಜ್ಯಗಳಲ್ಲಿ ಹಿಮಾಚಲವೂ ಒಂದಾಗಿದೆ. ನಲಗಢದಲ್ಲಿ ಮೆಡಿಕಲ್ ಡಿವೈಸ್  ಪಾರ್ಕ್ ಶಿಲಾನ್ಯಾಸ ಇದರ ಭಾಗವಾಗಿದೆ ಎಂದರು. ಹಿಮಾಚಲದ ಇನ್ನೊಂದು ಮುಖವಿದೆ, ಅದರಲ್ಲಿ ಅಭಿವೃದ್ಧಿಯ ಅನಂತ ಸಾಧ್ಯತೆಗಳು ಇಲ್ಲಿ ಅಡಗಿವೆ. ಇದು ವೈದ್ಯಕೀಯ ಪ್ರವಾಸೋದ್ಯಮದ ಭಾಗವಾಗಿದೆ. ಇಲ್ಲಿನ ವಾತಾವರಣ, ಇಲ್ಲಿನ ವಾತಾವರಣ, ಇಲ್ಲಿನ ಗಿಡಮೂಲಿಕೆಗಳು ಉತ್ತಮ ಆರೋಗ್ಯಕ್ಕೆ ಅತ್ಯಂತ ಸೂಕ್ತ ಎಂದು ಮೋದಿ ಹೇಳಿದ್ದಾರೆ.

Published On - 2:43 pm, Wed, 5 October 22

ಗಿಲ್ಲಿ ನನಗೆ ಹೊಡೆದಾಗ ಖುಷಿ ಆಗುತ್ತಿತ್ತು, ಎಂಜಾಯ್ ಮಾಡಿದೆ: ರಕ್ಷಿತಾ
ಗಿಲ್ಲಿ ನನಗೆ ಹೊಡೆದಾಗ ಖುಷಿ ಆಗುತ್ತಿತ್ತು, ಎಂಜಾಯ್ ಮಾಡಿದೆ: ರಕ್ಷಿತಾ
ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು
ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು
ಗಿಲ್ಲಿ ಪಕ್ಕ ರಕ್ಷಿತಾ ಅಲ್ಲ, ನಾನು ಇರಬೇಕಿತ್ತು: ಕಾವ್ಯಾ ಅಸಮಾಧಾನದ ಮಾತು
ಗಿಲ್ಲಿ ಪಕ್ಕ ರಕ್ಷಿತಾ ಅಲ್ಲ, ನಾನು ಇರಬೇಕಿತ್ತು: ಕಾವ್ಯಾ ಅಸಮಾಧಾನದ ಮಾತು
ಬಿಗ್​​ಬಾಸ್​​ ಸಂಭಾವನೆ, ಆದ ಖರ್ಚು ಮತ್ತು ಪಿಆರ್ ಬಗ್ಗೆ ಕಾವ್ಯಾ ಮಾತು
ಬಿಗ್​​ಬಾಸ್​​ ಸಂಭಾವನೆ, ಆದ ಖರ್ಚು ಮತ್ತು ಪಿಆರ್ ಬಗ್ಗೆ ಕಾವ್ಯಾ ಮಾತು
ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ
ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ
ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು?
ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು?
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ಲಕ್ಕುಂಡಿ: ಉತ್ಖನನ ವೇಳೆ ಮನೆಯೊಂದರಲ್ಲಿ ಪುರಾತನ ದೇವಸ್ಥಾನ ಪತ್ತೆ!
ಲಕ್ಕುಂಡಿ: ಉತ್ಖನನ ವೇಳೆ ಮನೆಯೊಂದರಲ್ಲಿ ಪುರಾತನ ದೇವಸ್ಥಾನ ಪತ್ತೆ!