ಉದ್ಯೋಗ ನೀಡುವುದಾಗಿ ಪಂಜಾಬ್ ಸರ್ಕಾರ ಹುಸಿ ಭರವಸೆ: ಪೆಟ್ರೋಲ್ ಹಿಡಿದು ನೀರಿನ ಟ್ಯಾಂಕ್ ಏರಿದ ಶಿಕ್ಷಕರು
ದೈಹಿಕ ಶಿಕ್ಷಣ ಶಿಕ್ಷಕರಿಗೆ ಸರ್ಕಾರಿ ಶಾಲೆಗಳಲ್ಲಿ ಕೆಲಸ ನೀಡುವುದಾಗಿ ಭರವಸೆ ನೀಡಿ, ಈಗ ಈಡೇರಿಸಲ್ಲವೆಂದು ಪಂಜಾಬ್ ಸರ್ಕಾರದ ವಿರುದ್ಧ ಮಹಿಳಾ ದೈಹಿಕ ಶಿಕ್ಷಕರು ಪ್ರತಿಭಟನೆ ಮಾಡುತ್ತಿದ್ದಾರೆ.
ಮೊಹಾಲಿ: ಪಂಜಾಬ್‍ನಲ್ಲಿ ಎಎಪಿ (AAP) ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೈಹಿಕ ಶಿಕ್ಷಣ ಶಿಕ್ಷಕರಿಗೆ (Physical Training Teacher) ಉದ್ಯೋಗ ನಿಡುವುದಾಗಿ ಎಎಪಿ ಭರವಸೆ ನೀಡಿತ್ತು. ಆದರೆ ಈಗ ಭರವಸೆಯನ್ನು ಈಡೇರಿಸಲ್ಲ ಎಂದು ಮೊಹಾಲಿಯಲ್ಲಿ ಇಬ್ಬರು ಮಹಿಳಾ ದೈಹಿಕ ಶಿಕ್ಷಣ ಶಿಕ್ಷಕರು ಕೈಯಲ್ಲಿ ಪೆಟ್ರೋಲ್ ತುಂಬಿದ ಬಾಟಲ್ ಹಿಡಿದುಕೊಂಡು ನೀರಿನ ಟ್ಯಾಂಕ್ ಏರಿ ಪ್ರತಿಭಟನೆ ಮಾಡುತ್ತಿದ್ದಾರೆ.
ಪಂಜಾಬ್‍ನಲ್ಲಿ ಕಳೆದ ಒಂದು ವರ್ಷದಿಂದ ದೈಹಿಕ ಬೋಧಕ (PTI) ತರಬೇತಿ ಪಡೆದ ಶಿಕ್ಷಕರನ್ನು ಸರ್ಕಾರಿ ಶಾಲೆಗಳಿಗೆ ನೇಮಕ ಮಾಡಿಕೊಳ್ಳುವ ವಿಚಾರವಾಗಿ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ದೈಹಿಕ ಶಿಕ್ಷಣ ಶಿಕ್ಷಕರಿಗೆ ಎಎಪಿ ನಾವು ಅಧಿಕಾರಕ್ಕೆ ಬಂದರೆ ಸರ್ಕಾರಿ ಶಾಲೆಗಳಲ್ಲಿ ಕೆಲಸ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದು 7 ತಿಂಗಳಾದರು ಇನ್ನೂ ಕೆಲಸ ನೀಡಿಲ್ಲ ಎಂದು ಪೆಟ್ರೋಲ್ ತುಂಬಿದ ಬಾಟಲಿಯೊಂದಿಗೆ ಸಿಪ್ಪಿ ಶರ್ಮಾ ಮತ್ತು ವೀರಪಾಲ್ ಕೌರ್ ಎಂಬ ಇಬ್ಬರು ಶಿಕ್ಷಕರು ತಡರಾತ್ರಿ ಮೊಹಾಲಿಯ ಸೊಹಾನಾದಲ್ಲಿರುವ ಸಿಂಗ್ ಶಹೀದನ್ ಗುರುದ್ವಾರದ ಬಳಿ ಇರುವ ನೀರಿನ ಟ್ಯಾಂಕ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
Mohali, Punjab | Demanding jobs as physical training instructors (PTI) in government schools for a year now, two teachers again climb a water tank protesting against the state government pic.twitter.com/iqVCZivTHA
— ANI (@ANI) October 5, 2022
ಈ ಬಗ್ಗೆ ಪ್ರತಿಭಟನಾನಿರತ ಆನಂದಪುರ ಸಾಹಿಬ್ ನಿವಾಸಿ ಸಿಪ್ಪಿ ಶರ್ಮಾ ವೀಡಿಯೋ ಬಿಡುಗಡೆ ಮಾಡಿದ್ದು, ವಿಡಿಯೋದಲ್ಲಿ ನಮಗೆ ಈ ಹಿಂದಿನ ಪಂಜಾಬ್ ಸರ್ಕಾರ ಉದ್ಯೋಗದ ಭರವಸೆ ನೀಡಿತ್ತು. ಆದರೆ ಕೊಟ್ಟಿರಲಿಲ್ಲ. ಈ ವೇಳೆ ಎಎಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಉದ್ಯೋಗ ನೀಡುವುದಾಗಿ ತಿಳಿಸಿತ್ತು. ಇದೀಗ ಎಎಪಿ ಸರ್ಕಾರ ಅಧಿಕಾರಕ್ಕೆ ಬಂದು 7 ತಿಂಗಳು ಕಳೆದಿದೆ. ಇನ್ನೂ ಕೂಡ ನಮಗೆ ಉದ್ಯೋಗ ನೀಡಿಲ್ಲ. ಸರ್ಕಾರ ನಮಗೆ ಸುಳ್ಳು ಭರವಸೆ ನೀಡಿದೆ. ಹಾಗಾಗಿ ನಾವು ಪ್ರತಿಭಟನೆಗೆ ಮುಂದಾಗಿದ್ದೇವೆ. ಸರ್ಕಾರ ನಮ್ಮ ಭರವಸೆ ಈಡೇರಿಸದಿದ್ದರೆ ನಾವು ಇಲ್ಲಿಂದ ಬರುವುದಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ