ನವದೆಹಲಿ: 4 ವರ್ಷದ ಬಾಲಕಿಯನ್ನು ಚಿರತೆಯೊಂದು ಎತ್ತಿಕೊಂಡು ಹೋಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರದಲ್ಲಿ ನಡೆದಿದೆ. ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಚಿರತೆ ಬಾಲಕಿಯನ್ನು ಎಳೆದುಕೊಂಡು ಹೋಗಿದೆ. ಈ ಅವಘಡದ ಬಗ್ಗೆ ಮಾಹಿತಿ ಪಡೆದ ತಕ್ಷಣ ಆ ಪ್ರದೇಶದ ರೇಂಜ್ ಆಫೀಸರ್ ಉಧಮ್‌ಪುರ ಕಂಟ್ರೋಲ್ ರೂಮ್‌ನಿಂದ ಶೋಧ ತಂಡಗಳನ್ನು ಕಳುಹಿಸಿದ್ದಾರೆ. ಆದರೆ ಇನ್ನೂ ಆ ಬಾಲಕಿಯ ಪತ್ತೆಯಾಗಿಲ್ಲ.
ಉಧಮ್‌ಪುರದಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಒಂದೆರಡು ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ 4 ವರ್ಷದ ಬಾಲಕಿ ಚಿರತೆಗೆ ಬಲಿಯಾದ ಅಹಿತಕರ ಘಟನೆ ನಡೆದಿತ್ತು.
ಜಮ್ಮು ಕಾಶ್ಮೀರದ ಉಧಮ್‌ಪುರದಲ್ಲಿ ಚಿರತೆ ಬಾಯಿಗೆ ಸಿಕ್ಕ ಬಾಲಕಿಯನ್ನು ಇನ್ನೂ ಪತ್ತೆ ಹಚ್ಚಲು ಶೋಧ ತಂಡಗಳಿಗೆ ಸಾಧ್ಯವಾಗಿಲ್ಲ. ಉಧಮ್ಪುರದ ವನ್ಯಜೀವಿ ಇಲಾಖೆಯ ರೇಂಜ್ ಆಫೀಸರ್ ರಾಕೇಶ್ ಶರ್ಮಾ ಈ ಬಗ್ಗೆ ಮಾಹಿತಿ ನೀಡಿದ್ದು, ನಮಗೆ ಮಾಹಿತಿ ದೊರೆಯುತ್ತಿದ್ದಂತೆ, ನಾವು ಉಧಮ್‌ಪುರ ನಿಯಂತ್ರಣ ಕೊಠಡಿಯಿಂದ ಶೋಧ ತಂಡಗಳನ್ನು ಕಳುಹಿಸಿದ್ದೇವೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ. ಇದೊಂದು ಅತ್ಯಂತ ದುರದೃಷ್ಟಕರ ಘಟನೆಯಾಗಿದ್ದು, ಸಂತ್ರಸ್ತೆಯ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ನಾವು ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: Hassan News: ಚಿರತೆ ಸೆರೆ ಹಿಡಿದು ಬೈಕ್ಗೆ ಕಟ್ಟಿಕೊಂಡು ಹೋಗಿ ಅರಣ್ಯ ಇಲಾಖೆಗೆ ಒಪ್ಪಿಸಿದ ಯುವಕ
ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ ಎಂದು ರೇಂಜ್ ಆಫೀಸರ್ ರಾಕೇಶ್ ಶರ್ಮಾ ತಿಳಿಸಿದ್ದು, ಈ ಬಗ್ಗೆ ವಿವಿಧ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಜಾಗೃತಿ ಅಭಿಯಾನದ ಮೂಲಕ ಮುಂಜಾನೆ ಮತ್ತು ಮುಸ್ಸಂಜೆಯ ಸಮಯದಲ್ಲಿ ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರನ್ನು ಒಬ್ಬಂಟಿಯಾಗಿ ಹೋಗಲು ಬಿಡಬೇಡಿ ಎಂದು ನಾವು ಜನರಿಗೆ ವಿನಂತಿಸುತ್ತಿದ್ದೇವೆ ಎಂದಿದ್ದಾರೆ.
Udhampur, J&K | Between 7-8pm, a 4-year-old girl was taken away by a leopard. As we got the information, we dispatched teams from Udhampur control room. We’re here to ensure that such incidents don’t occur in the future. This is a very unfortunate incident, and we will do all the… pic.twitter.com/gabR7L4Tcs
— ANI (@ANI) September 3, 2023
ಕಾಣೆಯಾದ 4 ವರ್ಷದ ಬಾಲಕಿಯನ್ನು ಹುಡುಕಲು ನಿರಂತರವಾಗಿ ಪ್ರಯತ್ನಗಳು ನಡೆಯುತ್ತಿವೆ. ವನ್ಯಜೀವಿ ಅಧಿಕಾರಿಗಳು ಮತ್ತು ಅರಣ್ಯ ರಕ್ಷಕರು ಒಟ್ಟಾಗಿ ಕಾಣೆಯಾದ ಮಗುವನ್ನು ಹುಡುಕುತ್ತಿದ್ದಾರೆ.
ಇದನ್ನೂ ಓದಿ: Leopard: ಗ್ರಾಮಸ್ಥರು ಮತ್ತು ಅರಣ್ಯಾಧಿಕಾರಿಗಳಿಗೆ ತಲೆ ನೋವಾಗಿದ್ದ ಚಿರತೆ ಕೊನೆಗೂ ಸೆರೆ
2021ರ ಜೂನ್ ತಿಂಗಳಲ್ಲಿ ಜಮ್ಮು ಕಾಶ್ಮೀರದ ಬದ್ಗಾಮ್ ಜಿಲ್ಲೆಯ ಓಂಪೋರಾ ಗ್ರಾಮದ 4 ವರ್ಷದ ಬಾಲಕಿ ಅದಾ ತನ್ನ ಮನೆಯ ಅಂಗಳದಲ್ಲಿ ಏಕಾಂಗಿಯಾಗಿ ಆಟವಾಡುತ್ತಿದ್ದಾಗ ಚಿರತೆ ಎಳೆದೊಯ್ದಿತ್ತು. ಆ ಮಗುವಿನ ಛಿದ್ರಗೊಂಡ ದೇಹ ಮರುದಿನ ಅವಳ ಮನೆಯಿಂದ ಸುಮಾರು 1 ಕಿಲೋಮೀಟರ್ ದೂರದಲ್ಲಿರುವ ಕಾಡಿನಲ್ಲಿ ಸಿಕ್ಕಿತ್ತು.
2021ರ ಅಧಿಕೃತ ದಾಖಲೆಗಳ ಪ್ರಕಾರ, 2011ರಿಂದ ಕ್ರೂರ ಕಾಡು ಪ್ರಾಣಿಗಳ ದಾಳಿಯಲ್ಲಿ ಸುಮಾರು 200 ಜನರು ಸಾವನ್ನಪ್ಪಿದ್ದಾರೆ ಮತ್ತು 2 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕಾಶ್ಮೀರವೊಂದರಲ್ಲೇ 100ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಮತ್ತು 1,800ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಜಮ್ಮುವಿನ ಅಂಕಿಅಂಶಗಳ ಪ್ರಕಾರ 100ಕ್ಕೂ ಹೆಚ್ಚು ಸಾವುಗಳು ಮತ್ತು 1800ಕ್ಕೂ ಹೆಚ್ಚು ಜನರು ಕಾಡು ಪ್ರಾಣಿಗಳಿಂದ ಗಾಯಗೊಂಡಿದ್ದಾರೆ.