Leopard: ಅರಣ್ಯಾಧಿಕಾರಿಗಳ ಬೋನಿಗೆ ಬಿದ್ದ ಚಿರತೆ, 16 ತಿಂಗಳ ಮಗುವನ್ನು ಕೊಂದ ಇನ್ನೊಂದು ಚಿರತೆಗಾಗಿ ಶೋಧ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 26, 2022 | 3:44 PM

ಅರಣ್ಯಾಧಿಕಾರಿಗಳು ಹಾಕಿದ್ದ ಬೋನಿಗೆ ಚಿರತೆಯೊಂದು ಬಿದ್ದಿದೆ. ಈ ಚಿರತೆ 16 ತಿಂಗಳ ಮಗುವನ್ನು ಕೊಂದಿದೆ ಎಂದು ಶಂಕಿಸಲಾಗಿದೆ. ಮುಂಬೈನ ಆರೆ ಕಾಲೋನಿಯಲ್ಲಿ ಅರಣ್ಯಾಧಿಕಾರಿಗಳು ಹಾಕಿದ್ದ ಬಲೆಗೆ ಬುಧವಾರ ಚಿರತೆಯೊಂದು ಬಿದಿದ್ದೆ

Leopard: ಅರಣ್ಯಾಧಿಕಾರಿಗಳ ಬೋನಿಗೆ ಬಿದ್ದ ಚಿರತೆ, 16 ತಿಂಗಳ ಮಗುವನ್ನು ಕೊಂದ ಇನ್ನೊಂದು ಚಿರತೆಗಾಗಿ ಶೋಧ
Leopard that fell into forest officials' cage, search for another leopard that killed a 16-month-old child
Follow us on

ಮುಂಬೈ: ಅರಣ್ಯಾಧಿಕಾರಿಗಳು ಹಾಕಿದ್ದ ಬೋನಿಗೆ ಚಿರತೆಯೊಂದು ಬಿದ್ದಿದೆ. ಈ ಚಿರತೆ 16 ತಿಂಗಳ ಮಗುವನ್ನು ಕೊಂದಿದೆ ಎಂದು ಶಂಕಿಸಲಾಗಿದೆ. ಮುಂಬೈನ ಆರೆ ಕಾಲೋನಿಯಲ್ಲಿ ಅರಣ್ಯಾಧಿಕಾರಿಗಳು ಹಾಕಿದ್ದ ಬಲೆಗೆ ಬುಧವಾರ ಚಿರತೆಯೊಂದು ಬಿದಿದ್ದೆ. ಈ ಚಿರತೆಯೂ 16 ತಿಂಗಳ ಬಾಲಕಿಯನ್ನು ಕೊಂದಿದೆ ಎಂದು ಶಂಕಿಸಲಾಗಿದೆ. ಬೆಳಗ್ಗೆ 6 ಗಂಟೆ ಸುಮಾರಿಗೆ ಅರಣ್ಯಾಧಿಕಾರಿಗಳು ಹಾಕಿದ್ದ ಬೋನಿನೊಳಗೆ ಈ ಚಿರತೆ ಬಿದ್ದಿದೆ. ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನ (ಎಸ್‌ಜಿಎನ್‌ಪಿ) ಅಧಿಕಾರಿಗಳು, ತಿಳಿಸಿರುವಂತೆ ಚಿರತೆಯನ್ನು ಹಿಡಿಯಲು ಮೂರು ಬೋನ್‌ಗಳನ್ನು ಇಟ್ಟಿದ್ದರು. ಇಂದು ಬೆಳಿಗ್ಗೆ 6 ಗಂಟೆಗೆ ಅಧಿಕಾರಿಗಳು ಪರಿಶೀಲಿಸಿದಾಗ ಅವರು ಹಾಕಿದ್ದ ಒಂದು ಬೋನಿನಲ್ಲಿ ಚಿರತೆ ಕಂಡುಬಂದಿದೆ.

C55 ಎಂದು ಗುರುತಿಸಲಾದ ಮೂರು ವರ್ಷದ ಗಂಡು ಚಿರತೆಯನ್ನು ಕೆಲವು ವೈದ್ಯಕೀಯ ಪರೀಕ್ಷೆಗಳಿಗಾಗಿ SGNP ಗೆ ಕರೆದೊಯ್ದಿದ್ದು, ಆರೆ ಅರಣ್ಯ ಪ್ರದೇಶದಲ್ಲಿ ಅನೇಕ ಕಡೆ ಈ ಚಿರತೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಇದೀಗ ಬೋನಿಗೆ ಬಿದ್ದಿರುವ ಚಿರತೆಯ ಒಡಹುಟ್ಟಿದ ಸಿ 56 ಎಂಬ ಇನ್ನೊಂದು ಗಂಡು ಚಿರತೆಯ ಚಲನವಲನದ ಮೇಲೆ ನಿಗಾ ಇಟ್ಟಿದ್ದೇವೆ. 16 ತಿಂಗಳ ಮಗುವಿನ ಮೇಲೆ ಈ ಗಂಡು ಚಿರತೆ ನಡೆಸಿದೆ ಎಂಬ ಶಂಕೆ ವ್ಯಕ್ತವಾಗಿದೆ. ಇದೀಗ ಒಂದು ಚಿರತೆಯನ್ನು ಸೆರೆಹಿಡಿಯಲಾಗಿದೆ. ಇನ್ನೊಂದು ಗಂಡು ಚಿರತೆಯ ಚಲನವಲನಗಳ ಬಗ್ಗೆ ಗಮನಿಸಲಾಗುತ್ತಿದೆ, ಅದನ್ನು ತಕ್ಷಣದಲ್ಲಿ ಪತ್ತೆ ಮಾಡಲಾಗುವುದು ಎಂದು ಅರಣ್ಯ ಅಧಿಕಾರಿಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಐತಿಕಾ ಅಖಿಲೇಶ್ ಎಂದು ಗುರುತಿಸಲಾದ 16 ತಿಂಗಳ ಹೆಣ್ಣು ಮಗುವಿನ ಮೇಲೆ ಚಿರತೆ ಗಂಭೀರ ಗಾಯಗಳನ್ನು ಮಾಡಿದೆ. ಮಗುವನ್ನು ಸೆವೆನ್ ಹಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಮಗುವನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಪೋಸ್ಟ್‌ಮಾರ್ಟಮ್ ವರದಿಯ ಪ್ರಕಾರ, ಮಗು ತೀವ್ರ ರಕ್ತಸ್ರಾವದಿಂದ ಬಲಿಯಾಗಿದೆ, ಏಕೆಂದರೆ ಚಿರತೆಯ ದಾಳಿಯಿಂದ ಮಗುವಿನ ಮೈ ಮೇಲೆ ಗಂಭೀರ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನು ಓದಿ: Video: ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಕರಿ ಚಿರತೆ

ಚಿರತೆ ಚಟುವಟಿಕೆಗಳ ಮೇಲೆ ನಿಗಾ ಇಡಲು ಘಟನೆ ನಡೆದ ಪ್ರದೇಶದಲ್ಲಿ ಸುಮಾರು 12 ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ರಾತ್ರಿ ಮತ್ತು ಮುಂಜಾನೆ ಮಕ್ಕಳನ್ನು ಹೊರಗೆ ಕಳುಹಿಸದಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಮೂಲಗಳ ಪ್ರಕಾರ, ಕಳೆದ ಒಂದು ತಿಂಗಳಲ್ಲಿ ಚಿರತೆ ಈ ಪ್ರದೇಶದಲ್ಲಿ ಮನುಷ್ಯರ ಮೇಲೆ ದಾಳಿ ಮಾಡಿರುವುದು ಇದು ಎರಡನೇ ಬಾರಿ. ಸುಮಾರು ಮೂರು ವಾರಗಳ ಹಿಂದೆ, 9 ವರ್ಷದ ಬಾಲಕ ತನ್ನ ತಂದೆಯೊಂದಿಗೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ಚಿರತೆ ದಾಳಿ ಮಾಡಿತ್ತು.

Published On - 3:44 pm, Wed, 26 October 22