‘ಕೊರೊನಾ ಮಾರ್ಗಸೂಚಿಗಳನ್ನು ಬೇಗ ತೆರವುಗೊಳಿಸುವುದರಿಂದ ಲಸಿಕೆ ಪಡೆಯದವರಿಗೆ ಅಪಾಯ ಉಂಟಾಗಬಹುದು’

| Updated By: ganapathi bhat

Updated on: Jun 08, 2021 | 4:59 PM

ಅತ್ಯಂತ ವೇಗವಾಗಿ ಕೊವಿಡ್ ಮಾರ್ಗಸೂಚಿ ಕೈಬಿಡುವ ನಿರ್ಧಾರ ಲಸಿಕೆ ಹಾಕಿಸಿಕೊಳ್ಳದವರಿಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಹೇಳಿದ್ದಾರೆ.

‘ಕೊರೊನಾ ಮಾರ್ಗಸೂಚಿಗಳನ್ನು ಬೇಗ ತೆರವುಗೊಳಿಸುವುದರಿಂದ ಲಸಿಕೆ ಪಡೆಯದವರಿಗೆ ಅಪಾಯ ಉಂಟಾಗಬಹುದು’
ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ
Follow us on

ಕೊರೊನಾ ವೈರಾಣು ರೂಪಾಂತರ ಹೊಂದಿ ಮತ್ತೆ ಅಪಾಯ ಸೃಷ್ಟಿಸುತ್ತಿದೆ ಎಂದು ನಾವು ತಿಳಿದೇ ಇದ್ದೇವೆ. ಭಾರತದಲ್ಲಿ ಡೆಲ್ಟಾ ರೂಪಾಂತರಿ ವೈರಾಣು ಇಷ್ಟೆಲ್ಲಾ ಸಮಸ್ಯೆ ತಂದೊಡ್ಡಿದೆ. ಇದೀಗ ಮತ್ತೆ ಲಾಕ್​ಡೌನ್ ಸಂಪೂರ್ಣ ಸಡಿಲಗೊಳಿಸಿ, ಕೊರೊನಾ ಮಾರ್ಗಸೂಚಿಗಳನ್ನು ಕಡೆಗಣಿಸುವುದು ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೋಸ್ ಅಧನೊಮ್ ಗೆಬ್ರೆಯೆಸಸ್ ಸೋಮವಾರ ಎಚ್ಚರಿಸಿದ್ದಾರೆ. ಅತ್ಯಂತ ವೇಗವಾಗಿ ಕೊವಿಡ್ ಮಾರ್ಗಸೂಚಿ ಕೈಬಿಡುವ ನಿರ್ಧಾರ ಲಸಿಕೆ ಹಾಕಿಸಿಕೊಳ್ಳದವರಿಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಎಎನ್​ಐ ವರದಿ ಪ್ರಕಾರ, ವಿಶ್ವ ಆರೋಗ್ಯ ಸಂಸ್ಥೆಯ ಆರು ವಲಯಗಳ ಪೈಕಿ ಮೂರರಲ್ಲಿ ಕಳೆದ ವಾರ ದಾಖಲಾದ ಮರಣ ಪ್ರಮಾಣ ಅಧಿಕವಾಗಿದೆ. ಆಫ್ರಿಕಾ, ಅಮೆರಿಕಾ ಮತ್ತು ಪಶ್ಚಿಮ ಫೆಸಿಫಿಕ್​ನಲ್ಲಿ ಸಾವಿನ ಸಂಖ್ಯೆ ಹೆಚ್ಚಳವಾಗಿದೆ. ಹಲವು ರಾಷ್ಟ್ರಗಳು ಗಂಭೀರ ಪರಿಸ್ಥಿತಿಯನ್ನೇ ಎದುರಿಸುತ್ತಿದೆ. ಈ ವೇಳೆ, ಅತಿ ಹೆಚ್ಚು ಲಸಿಕೀಕರಣ ಆದ ದೇಶಗಳು ಕಠಿಣ ಮಾರ್ಗಸೂಚಿಗಳನ್ನು ಹಿಂತೆಗೆಯುವ ಮಾತನಾಡುತ್ತಿವೆ ಎಂದು ಟೆಡ್ರೋಸ್ ಹೇಳಿದ್ದಾರೆ.

ಜಿ7 ದೇಶಗಳ ನಾಯಕರು ಇಂಗ್ಲೆಂಡ್​ನಲ್ಲಿ ಈ ವಾರ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ವಿಶ್ವಸಂಸ್ಥೆಯ ಉದ್ದೇಶದಂತೆ ಪ್ರತೀ ರಾಷ್ಟ್ರದ ಕನಿಷ್ಠ ಪಕ್ಷ ಶೇಕಡಾ 10ರಷ್ಟು ಜನರು ಸಪ್ಟೆಂಬರ್​ನ ಒಳಗೆ ಲಸಿಕೆ ಪಡೆಯುವಂತಾಗಬೇಕು. ಹಾಗೂ ಶೇಕಡಾ 30ರಷ್ಟು ಜನರು ಈ ವರ್ಷಾಂತ್ಯದ ಒಳಗಾಗಿ ಲಸಿಕೆ ಪಡೆಯಬೇಕು. ಅದಕ್ಕೆ ಜಿ7 ರಾಷ್ಟ್ರಗಳು ಸಹಕಾರ ಕೊಡಬಹುದು ಎಂದು ಟೆಡ್ರೋಸ್ ಅಭಿಪ್ರಾಯ, ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಈ ಗುರಿ ಸಾಧಿಸಲು ಸಪ್ಟೆಂಬರ್ ವೇಳೆಗೆ ಹೆಚ್ಚುವರಿ 250 ಮಿಲಿಯನ್ ಡೋಸ್ ಲಸಿಕೆ ಬೇಕು. ಹಾಗೂ ಜೂನ್, ಜುಲೈ ತಿಂಗಳಿಗೆ ಕೂಡ ಲಸಿಕೆ ಬೇಕು ಎಂದು ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲು, ಜಪಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ಒಳಗೊಂಡ ಸಮಿತಿಯ ಶೃಂಗಸಭೆಯನ್ನು ಉದ್ದೇಶಿಸಿ ಹೇಳಿದ್ದಾರೆ. ಈ ಏಳು ರಾಷ್ಟ್ರಗಳು ಲಸಿಕೀಕರಣದ ಗುರಿಯನ್ನು ತಲುಪಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಸೋಂಕು ಮೊದಲನೇ ಅಲೆ ಕಡಿಮೆ ಆದಾಗ ಕೊವಿಡ್ ಸಾಂಕ್ರಾಮಿಕ ಕೊನೆಗೊಂಡಿತು ಎಂದು ಬಹುತೇಕ ಎಲ್ಲರೂ ಅಂದುಕೊಂಡಿದ್ದರು. ಆದರೆ, ಲಾಕ್​ಡೌನ್ ಸಂಪೂರ್ಣ ತೆರವಾಗಿ, ಜನಜೀವನ ಸಹಜಸ್ಥಿತಿಗೆ ಬಂದ ಈ ವರ್ಷ ಮತ್ತೆ ಕೊರೊನಾ ಎರಡನೇ ಅಲೆಯ ಸಂಕಷ್ಟ ಎದುರಿಸುವಂತಾಯಿತು. ಮತ್ತೆ ಲಾಕ್​ಡೌನ್ ಕೊವಿಡ್ ಪ್ರಕರಣಗಳ ಹೆಚ್ಚಳ, ಸಾವು- ನೋವು ಅಪಾರ ಪ್ರಮಾಣದಲ್ಲಿ ಕಂಡುಬಂತು. ಮೊದಲನೇ ಅಲೆಗೆ ಹೋಲಿಸಿದರೆ ಎರಡನೇ ಅಲೆಯಲ್ಲೇ ಹೆಚ್ಚು ಕಷ್ಟ ಅನುಭವಿಸಬೇಕಾಯಿತು.

ಇದನ್ನೂ ಓದಿ: ಶ್ರೀಮಂತ ರಾಷ್ಟ್ರಗಳು ಬಡ ದೇಶಗಳಿಗೆ ಲಸಿಕೆ ನೀಡಲು ನೆರವಾಗಬೇಕು: ಜಿ7 ಉದ್ದೇಶಿಸಿ ಬೋರಿಸ್ ಜಾನ್ಸನ್ ಮನವಿ

ಕೊರೊನಾ ಲಸಿಕೆ ಖರೀದಿ ನೀತಿಯಲ್ಲಿ ಬದಲಾವಣೆ: ಸರ್ಕಾರಕ್ಕೆಷ್ಟು ವೆಚ್ಚ? ಕಂಪನಿಗಳ ಆದಾಯ ಎಷ್ಟು ಖೋತಾ? ಇಲ್ಲಿದೆ ಲೆಕ್ಕಾಚಾರ