ಶ್ರೀಮಂತ ರಾಷ್ಟ್ರಗಳು ಬಡ ದೇಶಗಳಿಗೆ ಲಸಿಕೆ ನೀಡಲು ನೆರವಾಗಬೇಕು: ಜಿ7 ಉದ್ದೇಶಿಸಿ ಬೋರಿಸ್ ಜಾನ್ಸನ್ ಮನವಿ
ಬ್ರಿಟನ್ ಈವರೆಗೆ 500 ಮಿಲಿಯನ್ಗೂ ಅಧಿಕ ಡೋಸ್ ಕೊವಿಡ್-19 ಲಸಿಕೆಯನ್ನು ಆರ್ಡರ್ ಮಾಡಿದೆ. ಆದರೆ, ಬ್ರಿಟನ್ ಜನಸಂಖ್ಯೆ ಸುಮಾರು 67 ಮಿಲಿಯನ್ ಮಾತ್ರ ಇದೆ. ಉಳಿದಂತೆ ಲಸಿಕೆಯನ್ನು ಇತರ ಅಗತ್ಯ ಇರುವ ರಾಷ್ಟ್ರಗಳಿಗೆ ನೀಡುವುದಾಗಿ ಬ್ರಿಟನ್ ಹೇಳಿದೆ.
ಲಂಡನ್: ಕೊರೊನಾ ವಿರುದ್ಧ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ಲಸಿಕೆ ನೀಡಬೇಕು. 2022ರ ಅಂತ್ಯದ ಒಳಗಾಗಿ ವಿಶ್ವದ ಎಲ್ಲಾ ರಾಷ್ಟ್ರಗಳ ಜನರು ಲಸಿಕೆ ಪಡೆದವರಾಗಿರಬೇಕು. ಈ ನೆಲೆಯಲ್ಲಿ ಜಿ7 ರಾಷ್ಟ್ರಗಳು (ಗ್ರೂಪ್ ಆಫ್ ಸೆವೆನ್) ಕಾರ್ಯೋನ್ಮುಖವಾಗಬೇಕು ಎಂದು ಬ್ರಿಟೀಷ್ ಪ್ರಧಾನಿ ಬೋರಿಸ್ ಜಾನ್ಸನ್ ಶನಿವಾರ ಹೇಳಿದ್ದಾರೆ.
ಬೋರಿಸ್ ಜಾನ್ಸನ್, ಸುಮಾರು ಎರಡು ವರ್ಷಗಳಲ್ಲಿ ಮೊದಲ ಜಿ7 ಶೃಂಗಸಭೆಯನ್ನು ಆಯೋಜಿಸಲಿದ್ದಾರೆ. ಆ ವೇಳೆ, ಗ್ಲೋಬಲ್ ವ್ಯಾಕ್ಸಿನೇಷನ್ ಉದ್ದೇಶ ಹೊಂದಿರುವ ಬಗ್ಗೆ ಎಲ್ಲರ ಪ್ರತಿಜ್ಞೆ ಪಡೆಯುವುದಾಗಿ ಅವರು ತಿಳಿಸಿದ್ದಾರೆ. ಮುಂದಿನ ವರ್ಷದ ಅಂತ್ಯದ ಒಳಗಾಗಿ ಜಗತ್ತಿನ ಎಲ್ಲರಿಗೂ ಕೊವಿಡ್ ವಿರುದ್ಧದ ಲಸಿಕೆ ನೀಡುವುದು ವೈದ್ಯಕೀಯ ಇತಿಹಾಸದಲ್ಲಿ ಏಕೈಕ ದೊಡ್ಡ ಸಾಧನೆಯಾಗಲಿದೆ. ಜಿ7 ರಾಷ್ಟ್ರಗಳ ನಾಯಕರು ಈ ಸಾಂಕ್ರಾಮಿಕವನ್ನು ಕೊನೆಗೊಳಿಸಬೇಕು. ಈ ಅನಾಹುತ ಮತ್ತೆ ಮುಂದುವರಿಯಬಾರದು ಎಂದು ಅವರು ಕೇಳಿಕೊಂಡಿದ್ದಾರೆ.
ಜರ್ಮನಿ, ಫ್ರಾನ್ಸ್, ಯುನೈಟೆಡ್ ಸ್ಟೇಟ್ಸ್, ಇಟಲಿ, ಜಪಾನ್, ಯುರೋಪಿಯನ್ ಒಕ್ಕೂಟ ಮತ್ತು ಕೆನಡಾ ದೇಶಗಳು ಮೂರು ದಿನದ ಶೃಂಗಸಭೆಯಲ್ಲಿ ಸೇರಲಿವೆ. ಈ ಸಭೆಯಲ್ಲಿ ಭಾಗಿಯಾಗುವ ಮೂಲಕ, ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಮೊದಲ ವಿದೇಶ ಪ್ರವಾಸ ಕೈಗೊಂಡಂತಾಗಲಿದೆ.
ಒಂದೆಡೆ ಶ್ರೀಮಂತ ರಾಷ್ಟ್ರಗಳು ತಮ್ಮ ಬಹುದೊಡ್ಡ ಜನಸಂಖ್ಯೆಗೆ ಲಸಿಕೆ ನೀಡುತ್ತಿದೆ. ಮತ್ತೊಂದೆಡೆ, ಬಡ ದೇಶಗಳು ಲಸಿಕೆ ಪಡೆಯಲು ಸಾಧ್ಯವಾಗಿಲ್ಲ. ವೈದ್ಯಕೀಯ ತಜ್ಞರ ಪ್ರಕಾರ ಹೆಚ್ಚು ಹೆಚ್ಚು ಜನರು ಲಸಿಕೆ ಪಡೆಯದೆ ಹೋದರೆ, ವೈರಾಣು ರೂಪಾಂತರಿ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಲಂಡನ್ನಲ್ಲಿ ಹಣಕಾಸು ಸಚಿವರ ಸಭೆಯಲ್ಲಿ ಭಾಗಿಯಾಗಲಿರುವ ಯುನೈಟೆಡ್ ಸ್ಟೇಟ್ಸ್ನ ಹಣಕಾಸು ಕಾರ್ಯದರ್ಶಿ ಜನೆಟ್ ಯೆಲೆನ್, ಶ್ರೀಮಂತ ದೇಶಗಳು ಲಸಿಕೆ ಕೊಂಡುಕೊಳ್ಳಲು ಆಗದ ಬಡ ದೇಶಗಳಲಿಗೆ ಲಸಿಕೆ ನೀಡಬೇಕು ಎಂದು ಹೇಳಿದ್ದಾರೆ. ಬ್ರಿಟನ್ ಈವರೆಗೆ 500 ಮಿಲಿಯನ್ಗೂ ಅಧಿಕ ಡೋಸ್ ಕೊವಿಡ್-19 ಲಸಿಕೆಯನ್ನು ಆರ್ಡರ್ ಮಾಡಿದೆ. ಆದರೆ, ಬ್ರಿಟನ್ ಜನಸಂಖ್ಯೆ ಸುಮಾರು 67 ಮಿಲಿಯನ್ ಮಾತ್ರ ಇದೆ. ಉಳಿದಂತೆ ಲಸಿಕೆಯನ್ನು ಇತರ ಅಗತ್ಯ ಇರುವ ರಾಷ್ಟ್ರಗಳಿಗೆ ನೀಡುವುದಾಗಿ ಬ್ರಿಟನ್ ಹೇಳಿದೆ.
ಇದನ್ನೂ ಓದಿ: Corona Vaccine: ಕೊರೊನಾ ಲಸಿಕೆ ಪಡೆಯುವ ಮೊದಲು ಮತ್ತು ನಂತರ ಪಾಲಿಸಬೇಕಾದ ಅಂಶಗಳೇನು? ಇಲ್ಲಿದೆ ವಿವರ
ನೂರಕ್ಕೆ ನೂರು ಲಸಿಕೆ ಪಡೆದ ಬೀದರ್ ಜಿಲ್ಲೆಯ ಎರಡು ಗ್ರಾಮ; ಮೂಢನಂಬಿಕೆಯಿಂದ ಹೊರ ಬಂದು ಇತರರಿಗೆ ಮಾದರಿ
Published On - 3:25 pm, Sun, 6 June 21