ಪೂರ್ವ ಲಡಾಖ್ನಲ್ಲಿ ವಿಪರೀತ ಚಳಿ; ಶೇ.90ರಷ್ಟು ಸೈನಿಕರನ್ನು ವಾಪಸ್ ಕರೆಸಿದ ಚೀನಾ
ಈಗ ಪೂರ್ವ ಲಡಾಖ್ನಲ್ಲಿ ಸಿಕ್ಕಾಪಟೆ ಚಳಿ ಬೀಳುತ್ತಿರುವ ಕಾರಣ ಕಳೆದ ಒಂದು ವರ್ಷದಿಂದಲೂ ಅಲ್ಲಿದ್ದವರಲ್ಲಿ ಶೇ.90ರಷ್ಟು ಸೈನಿಕರನ್ನು ವಾಪಸ್ ಕರೆಸಲಾಗಿದೆ. ಅವರ ಬದಲಿಗೆ ಬೇರೆ ಸೈನಿಕರನ್ನು ಅಲ್ಲಿ ನಿಯೋಜಿಸಿದೆ.
ದೆಹಲಿ: ಪೂರ್ವ ಲಡಾಖ್ನಲ್ಲಿ ವಿಪರೀತ ಚಳಿಯ ವಾತಾವರಣ ಇರುವ ಕಾರಣ ಚೀನಾದ ಪೀಪಲ್ ಲಿಬರೇಶನ್ ಆರ್ಮಿ ತನ್ನ ಸೈನ್ಯದ ಶೇ.90ರಷ್ಟು ಸೈನಿಕರನ್ನು ಅಲ್ಲಿಂದ ವಾಪಸ್ ಕರೆಸಿ, ಅವರ ಬದಲಿಗೆ ಬೇರೆ ಸೈನಿಕರನ್ನು ಕಳಿಸಿದೆ. ಕಳೆದ ವರ್ಷ ಭಾರತ ಮತ್ತು ಚೀನಾ ನಡುವೆ ಪೂರ್ವ ಲಡಾಖ್ನಲ್ಲಿ ಘರ್ಷಣೆ ಉಂಟಾಗಿತ್ತು. ಅದಾದ ನಂತರ ಪದೇಪದೆ ಅಲ್ಲಿ ತನ್ನ ಸೈನಿಕರನ್ನು ನಿಯೋಜನೆ ಮಾಡುವ ಕೆಲಸವನ್ನು ಚೀನಾ ಮಾಡುತ್ತಿತ್ತು. ಇಲ್ಲಿಯವರೆಗೆ ಸುಮಾರು 50,000 ಸೈನಿಕರನ್ನು ಚೀನಾ ಪೂರ್ವಲಡಾಖ್ನಲ್ಲಿ ನಿಯೋಜಿಸಿದೆ.
ಈಗ ಪೂರ್ವ ಲಡಾಖ್ನಲ್ಲಿ ಸಿಕ್ಕಾಪಟೆ ಚಳಿ ಬೀಳುತ್ತಿರುವ ಕಾರಣ ಕಳೆದ ಒಂದು ವರ್ಷದಿಂದಲೂ ಅಲ್ಲಿದ್ದವರಲ್ಲಿ ಶೇ.90ರಷ್ಟು ಸೈನಿಕರನ್ನು ವಾಪಸ್ ಕರೆಸಲಾಗಿದೆ. ಅವರ ಬದಲಿಗೆ ಬೇರೆ ಸೈನಿಕರನ್ನು ಅಲ್ಲಿ ನಿಯೋಜಿಸಿದೆ. ಸದ್ಯದ ಚಳಿಯಿಂದಾಗಿ ಅಲ್ಲಿರುವ ಸೈನಿಕರು ತುಂಬ ಕಷ್ಟಪಡುತ್ತಿದ್ದಾರೆ. ಕಳೆದ ಒಂದುವರ್ಷಗಳಿಂದಲೂ ಅವರು ಅಲ್ಲಿಯೇ ಇದ್ದಾರೆ ಎಂದು ಚೀನಾ ಹೇಳಿದೆ. ಭಾರತೀಯ ಯೋಧರಿಗೆ ಹೋಲಿಸಿದರೆ, ಚೀನಾ ಸೈನಿಕರಿಗೆ ಎತ್ತರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಿ ಅನುಭವ ಇರುವುದಿಲ್ಲ. ಅವರು ಸತತವಾಗಿ ಅಲ್ಲಿಯೇ ಇರಲಾರರು.
ಇದನ್ನೂ ಓದಿ: ‘ದಿ ಫ್ಯಾಮಿಲಿ ಮ್ಯಾನ್ 2’ನಲ್ಲಿ ನಟಿಸಿದ್ದ ಈ ನಟ ಆತ್ಮಹತ್ಯೆ ಮಾಡಿಕೊಂಡಿದ್ದು ನಿಜಕ್ಕೂ ವಿಚಿತ್ರ
Peoples Liberation Army has rotated 90 per cent of its troop deployed in eastern Ladakh
Published On - 5:38 pm, Sun, 6 June 21