‘ದಿ ಫ್ಯಾಮಿಲಿ ಮ್ಯಾನ್ 2’ನಲ್ಲಿ ನಟಿಸಿದ್ದ ಈ ನಟ ಆತ್ಮಹತ್ಯೆ ಮಾಡಿಕೊಂಡಿದ್ದು ನಿಜಕ್ಕೂ ವಿಚಿತ್ರ
ನಟ ಆಸಿಫ್ ಬಸ್ರಾರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಹಿಮಾಚಲ ಪ್ರದೇಶದ ಧರಮ್ಶಾಲಾದ ಖಾಸಗಿ ಕಟ್ಟದವೊಂದರಲ್ಲಿ ನವೆಂಬರ್ನಲ್ಲಿ ಪತ್ತೆಯಾಗಿತ್ತು.
ದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸೀರಿಸ್ ದೊಡ್ಡಮಟ್ಟದಲ್ಲಿ ಯಶಸ್ಸು ಕಂಡಿದೆ. ಇದನ್ನು ನೋಡಿದವರೆಲ್ಲರೂ ಅದ್ಭುತವಾಗಿದೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಈ ವೆಬ್ ಸೀರಿಸ್ನಲ್ಲಿ ಆಪ್ತಸಮಾಲೋಚಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಆಸಿಫ್ ಬಸ್ರಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೆಬ್ ಸೀರಿಸ್ ನೋಡಿದ ಅನೇಕರು ಅವರನ್ನು ನೆನಪಿಸಿಕೊಂಡಿದ್ದಾರೆ.
ವೆಬ್ ಸೀರಿಸ್ನ ಮುಖ್ಯ ಪಾತ್ರಗಳಾದ ಶ್ರೀಕಾಂತ್ ಮತ್ತು ಸುಚಿತ್ರಾ ಇಬ್ಬರಿಗೂ ಕೌನ್ಸಿಲರ್ ಆಗಿ ಕಾಣಿಸಿಕೊಂಡಿದ್ದು ಇದೇ ಆಸಿಫ್ ಬಸ್ರಾ. ಸುಚಿತ್ರಾ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರಿಗೆ ಕೌನ್ಸಿಲ್ ಮಾಡುವ ಕೆಲಸವನ್ನು ಆಸಿಫ್ ಮಾಡುತ್ತಾರೆ. ತೆರೆಮೇಲೆ ಕೌನ್ಸಿಲರ್ ಆಗಿ ಬುದ್ಧಿವಾದ ಹೇಳಿದ್ದ ಅವರು ನಿಜಜೀವನದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಪಾತ್ರ ಮೆಚ್ಚಿಕೊಂಡಿರುವ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ನಟ ಆಸಿಫ್ ಬಸ್ರಾರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಹಿಮಾಚಲ ಪ್ರದೇಶದ ಧರಮ್ಶಾಲಾದ ಖಾಸಗಿ ಕಟ್ಟದವೊಂದರಲ್ಲಿ ನವೆಂಬರ್ನಲ್ಲಿ ಪತ್ತೆಯಾಗಿತ್ತು. ಆಸಿಫ್ ಬಸ್ರಾ ಹಲವು ಹಿಂದಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸುವ ಮೂಲಕ ತಮ್ಮದೇ ವಿಭಿನ್ನ ಛಾಪು ಮೂಡಿಸಿದ್ದರು. ಲಾಕ್ಡೌನ್ ತಂದೊಡ್ಡಿದ ಸಂಕಷ್ಟದಿಂದ ಆತ್ಮಹತ್ಯೆಗೆ ಶರಣಾಗಿದ್ದರು ಎನ್ನಲಾಗಿದೆ.
Watching #asifbasra on #TheFamilyManSeason2 just gave me a reality check 🙁 Such a wholesome actor ❤️
— Aditya Yadav (@adiityayadav) June 5, 2021
ದಿ ಫ್ಯಾಮಿಲಿ ಮ್ಯಾನ್ 2 ಅದ್ಭುತ ಯಶಸ್ಸು ಕಂಡಿದೆ. ಆದರೆ, ಇದನ್ನು ನೋಡೋಕೆ ಆಸಿಫ್ ಅವರೇ ಇಲ್ಲವಲ್ಲ ಎಂದು ಕೆಲವರು ಹೇಳಿಕೊಂಡಿದ್ದಾರೆ. ಇನ್ನೂ ಕೆಲವರು, ಒಂದು ಅದ್ಭುತ ನಟನನ್ನು ನಾವು ಕಳೆದುಕೊಂಡೆವು ಎಂದು ವೆಬ್ ಸೀರಿಸ್ ನೋಡಿದಮೇಲೆ ನಮಗನ್ನಿಸುತ್ತಿದೆ ಎಂದು ಹೇಳಿದ್ದಾರೆ.
This shot. This scene. Made me a bit emotional. Asif Basra had redefined cameos. Right from Hotel Decent in #JabWeMet RIP Sir!#TheFamilyManSeason2 #TheFamilyMan #AsifBasra pic.twitter.com/wS0WrXMPjm
— food.travel.delhi (@JRajHazarika) June 4, 2021
Also.. What a fine cameo by #AsifBasra in #TheFamilyMan2. His last piece of work.
Rest in Peace Asif Saab.. Jaate jaate ek aakhri chaap chor gaye janab aap.
Jahan bhi hai khush rahiye.. aapka kaam aapko humesha zinda rakhega❤️ pic.twitter.com/F5mi0KzE3H
— Kanav Bali? (@Concussion__Sub) June 5, 2021
ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ, ಹೆಂಡತಿ ಬಿಟ್ಟುಹೋದ ನೋವು; ಇದು ಮನೋಜ್ ಬಾಜಪೇಯಿ ಜೀವನದ ಕಥೆ