ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ, ಹೆಂಡತಿ ಬಿಟ್ಟುಹೋದ ನೋವು; ಇದು ಮನೋಜ್​ ಬಾಜ​​ಪೇಯಿ ಜೀವನದ ಕಥೆ

ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ, ಹೆಂಡತಿ ಬಿಟ್ಟುಹೋದ ನೋವು; ಇದು ಮನೋಜ್​ ಬಾಜ​​ಪೇಯಿ ಜೀವನದ ಕಥೆ
ಮನೋಜ್​ ಬಾಜಪೇಯಿ

ಸಾಕಷ್ಟು ಸಿನಿಮಾಗಳಲ್ಲಿ ನಟಿಸೋ ಅವಕಾಶ ಕೈ ತಪ್ಪಿ ಹೋಗಿತ್ತು. ನಂತರ ನಿಧಾನವಾಗಿ ನೆಲೆ ಕಂಡುಕೊಂಡರು. ಇನ್ನು, ಮನೋಜ್​ ಅವರು ದೆಹಲಿ ಮೂಲದ ಹುಡುಗಿಯನ್ನು ಮದುವೆ ಕೂಡ ಆದರು.

Rajesh Duggumane

|

Apr 23, 2022 | 8:39 AM

 ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸೀರಿಸ್​ ಮೂಲಕ ಮನೋಜ್​ ಬಾಜ​ಪೇಯಿ​ ತಾವು ಎಂತಹ ಆ್ಯಕ್ಟರ್​ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಅವರ ನಟನೆ ನೋಡಿ ಫಿದಾ ಆದವರ ಸಂಖ್ಯೆ ದೊಡ್ಡದಿದೆ. ಆದರೆ, ಮನೋಜ್​ ಅವರ ಬದುಕು ಅಷ್ಟು ಸಲಭದ್ದಾಗಿರಲಿಲ್ಲ. ಅವರು ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬಂದಿದ್ದರು.

ಮನೋಜ್​ ಬಿಹಾರದ ಸಣ್ಣ ಹಳ್ಳಿಯಲ್ಲಿ ಹುಟ್ಟಿದವರು. ಗುಡಿಸಲಲ್ಲಿ ನಡೆಸುತ್ತಿದ್ದ ಶಾಲೆಗೆ ಮನೋಜ್​ ತೆರಳುತ್ತಿದ್ದರು. ಅವರಿಗೆ ಅಮಿತಾಭ್​ ಎಂದರೆ ಬಹಳ ಇಷ್ಟ. ಆಗಲೇ ನಟನೆ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. 17ನೇ ವಯಸ್ಸಿಗೆ ದೆಹಲಿಗೆ ಬಂದರು. ಅಲ್ಲಿ ಕಾಲೇಜಿಗೆ ಹೋಗುವುದರ ಜತೆಗೆ ಥಿಯೇಟರ್​ಗೂ ತೆರಳಿ ನಟನೆ ಕಲಿಯಲು ಆರಂಭಿಸಿದರು. ನಂತರ ಈ ವಿಚಾರ ಮನೆಯವರಿಗೆ ಹೇಳಿದಾಗ ಅವರು ಖುಷಿಪಟ್ಟರು.

‘ಪ್ರತಿಷ್ಠಿತ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಕ್ಕೆ ಸೇರಬೇಕೆಂಬುದು ನನ್ನ ಕನಸಾಗಿತ್ತು. ಆದರೆ, ಅದು ಸಾಧ್ಯವಾಗದ ಕಾರಣ ನಾನು ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮಾಡಿದ್ದೆ. ನಾನು ಬಹಳ ಹತ್ತಿರವೂ ಹೋಗಿದ್ದೆ. ಈ ವಿಚಾರ ನನ್ನ ಗೆಳೆಯರಿಗೆ ಗೊತ್ತಾಗಿತ್ತು. ಹೀಗಾಗಿ, ಅವರು ನನ್ನನ್ನು ಬಿಟ್ಟು ಹೋಗುತ್ತಲೇ ಇರಲಿಲ್ಲ. ಅವರು ನನಗೆ ಸ್ಫೂರ್ತಿ ನೀಡಿದರು ಎಂದಿದ್ದಾರೆ ಮನೋಜ್​.

ಸಾಕಷ್ಟು ಸಿನಿಮಾಗಳಲ್ಲಿ ನಟಿಸೋ ಅವಕಾಶ ಕೈ ತಪ್ಪಿ ಹೋಗಿತ್ತು. ನಂತರ ನಿಧಾನವಾಗಿ ನೆಲೆ ಕಂಡುಕೊಂಡರು. ಇನ್ನು, ಮನೋಜ್​ ಅವರು ದೆಹಲಿ ಮೂಲದ ಹುಡುಗಿಯನ್ನು ಮದುವೆ ಕೂಡ ಆದರು. ಆದರೆ, ಮನೋಜ್​ ಕಷ್ಟದ ದಿನಗಳಲ್ಲಿ ಹೆಂಡತಿ ಬಿಟ್ಟು ಹೋದರು. ನಂತರ ನಟಿ ಶಬಾನಾ ರಾಜಾ ಅವರನ್ನು ಮನೋಜ್​ ಮದುವೆ ಆದರು.

ಜೂನ್​ 4ರಂದು ದಿ ಫ್ಯಾಮಿಲಿ ಮ್ಯಾನ್​ 2 ರಿಲೀಸ್​ ಆಗಿದೆ. ಈ ವೆಬ್​ ಸೀರಿಸ್​ ನೋಡಿದ ನಂತರದಲ್ಲಿ ಮನೋಜ್​ ನಟನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೆಬ್​ ಸೀರಿಸ್​ ಮೂಲಕ ಮನೋಜ್​ ಅವರು ತಾವು ಯಾರೆಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಇದನ್ನೂ ಓದಿ: The Family Man 2 Review: ಲೈಂಗಿಕ ದೌರ್ಜನ್ಯ ನಡೆದರೂ ಸುಮ್ಮನಿರುವ ರಾಜಿ ಹಿಂದಿದೆ ಒಂದು ಕ್ರೌರ್ಯದ ಮುಖ

Follow us on

Related Stories

Most Read Stories

Click on your DTH Provider to Add TV9 Kannada