‘ರಣವಿಕ್ರಮ’ ನಟಿ ಅಂಜಲಿ ಗುಟ್ಟಾಗಿ ಮದುವೆ ಆಗ್ತಾರಾ? ಜೋರಾಗಿ ಹಬ್ಬಿದೆ ಗುಸುಗುಸು

‘ರಣವಿಕ್ರಮ’ ನಟಿ ಅಂಜಲಿ ಗುಟ್ಟಾಗಿ ಮದುವೆ ಆಗ್ತಾರಾ? ಜೋರಾಗಿ ಹಬ್ಬಿದೆ ಗುಸುಗುಸು
ಅಂಜಲಿ

ಸದ್ಯಕ್ಕಂತೂ ಲಾಕ್​ಡೌನ್​ ಕಾರಣದಿಂದ ಎಲ್ಲ ಸಿನಿಮಾ ಕೆಲಸಗಳು ಸ್ಥಗಿತಗೊಂಡಿವೆ. ಶೂಟಿಂಗ್​ಗೆ ಬಹುತೇಕ ಕಡೆಗಳಲ್ಲಿ ಅನುಮತಿ ಇಲ್ಲ. ಹಾಗಾಗಿ ಈ ಬಿಡುವಿನ ಸಂದರ್ಭದಲ್ಲಿ ನಟಿ ಅಂಜಲಿ ಹಸೆಮಣೆ ಏರುತ್ತಾರೆ ಎಂಬ ಗಾಳಿ ಸುದ್ದಿ ಹಬ್ಬಿದೆ.

Madan Kumar

| Edited By: Rajesh Duggumane

Jun 06, 2021 | 3:07 PM

ಈ ಲಾಕ್​ಡೌನ್​ ಸಂದರ್ಭದಲ್ಲಿ ಅನೇಕ ಸೆಲೆಬ್ರಿಟಿಗಳು ಗುಟ್ಟಾಗಿ ಹಸೆಮಣೆ ಏರುತ್ತಿದ್ದಾರೆ. ಕನ್ನಡದ ನಟಿ ಪ್ರಣಿತಾ ಸುಭಾಷ್​, ಬಾಲಿವುಡ್​ ಬೆಡಗಿ ಯಾಮಿ ಗೌತಮ್​ ಇತ್ತೀಚೆಗಷ್ಟೇ ಸೀಕ್ರೆಟ್​ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಫೋಟೋ ವೈರಲ್​ ಆದ ಬಳಿಕವೇ ಆ ವಿಷಯ ಬಹಿರಂಗ ಆಯಿತು. ಈಗ ಬಹುಭಾಷಾ ನಟಿ ಅಂಜಲಿ ಬಗ್ಗೆಯೂ ಅನುಮಾನ ಕಾಡಲಾರಂಭಿಸಿದೆ. ಕನ್ನಡದಲ್ಲಿ ಪುನೀತ್​ ರಾಜ್​ಕುಮಾರ್​ ಜೊತೆ ‘ರಣವಿಕ್ರಮ’ ಸಿನಿಮಾದಲ್ಲಿ ನಟಿಸಿದ್ದ ಅಂಜಲಿ ಮದುವೆ ಬಗ್ಗೆ ಗಾಸಿಪ್​ ಹಬ್ಬಿದೆ.

ತಮಿಳು ನಟ ಜೈ ಜೊತೆ ಅಂಜಲಿ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಮಾತಿದೆ. ಎರಡು ವರ್ಷಗಳ ಕಾಲ ಅವರು ಲಿವ್​ ಇನ್​ ರಿಲೇಶನ್​ಶಿಪ್​ನಲ್ಲಿ ಇದ್ದ ಬಗ್ಗೆಯೂ ಸುದ್ದಿ ಹರಡಿತ್ತು. ಸದ್ಯಕ್ಕಂತೂ ಲಾಕ್​ಡೌನ್​ ಕಾರಣದಿಂದ ಎಲ್ಲ ಸಿನಿಮಾ ಕೆಲಸಗಳು ಸ್ಥಗಿತಗೊಂಡಿವೆ. ಶೂಟಿಂಗ್​ಗೆ ಬಹುತೇಕ ಕಡೆಗಳಲ್ಲಿ ಅನುಮತಿ ಇಲ್ಲ. ಹಾಗಾಗಿ ಈ ಬಿಡುವಿನ ಸಂದರ್ಭದಲ್ಲಿ ಅಂಜಲಿ ಕೂಡ ಹಸೆಮಣೆ ಏರುತ್ತಾರೆ ಎಂಬ ಗಾಳಿ ಸುದ್ದಿ ಹಬ್ಬಿದೆ. ಆದರೆ ಈ ಮಾತಿನಲ್ಲಿ ಹುರುಳಿಲ್ಲ ಎಂದು ಕೂಡ ಹೇಳಲಾಗುತ್ತಿದೆ. ಆದರೂ ಸ್ವತಃ ಅಂಜಲಿ ಸ್ಪಷ್ಟನೆ ನೀಡುವವರೆಗೆ ಯಾವುದನ್ನೂ ನಂಬುವಂತಿಲ್ಲ.

ಈ ವರ್ಷ ತೆರೆಕಂಡ ‘ವಕೀಲ್​ ಸಾಬ್’​ ಸಿನಿಮಾದಲ್ಲಿ ಅಂಜಲಿ ನಟಿಸಿದ್ದರು. ಪವನ್​ ಕಲ್ಯಾಣ್​ ಜೊತೆ ತೆರೆಹಂಚಿಕೊಳ್ಳುವ ಅವಕಾಶವನ್ನು ಅವರು ಚೆನ್ನಾಗಿ ಉಪಯೋಗಿಸಿಕೊಂಡಿದ್ದರು. ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಈ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ತಮ್ಮ ಮದುವೆ ಗಾಸಿಪ್​ ಬಗ್ಗೆ ಮಾತನಾಡಿದ್ದರು. ‘ಈಗ ನಾನು ಕೆಲಸದ ಮೇಲೆ ಗಮನ ಹರಿಸಿದ್ದೇನೆ. ಮದುವೆ ಪ್ಲ್ಯಾನ್​ ಸದ್ಯಕ್ಕಂತೂ ಇಲ್ಲ. ನಟನೆಗೆ ಹೆಚ್ಚು ಪ್ರಾಮುಖ್ಯತೆ ಇರುವಂತಹ ಸಿನಿಮಾಗಳಲ್ಲಿ ನಟಿಸಬೇಕು ಎಂದುಕೊಂಡಿದ್ದೇನೆ’ ಅಂತ ಅವರು ಹೇಳಿದ್ದರು. ಅಷ್ಟರ ನಂತರವೂ ಪದೇಪದೇ ಅವರ ಮದುವೆ ಗಾಸಿಪ್​ ಯಾಕೆ ಹಬ್ಬುತ್ತಿದೆಯೋ ಗೊತ್ತಿಲ್ಲ.

ಕಳೆದ ವರ್ಷ ತೆರೆಕಂಡ ‘ಪಾವ ಕಥೈಗಳ್​’ ಸಿನಿಮಾದಲ್ಲಿ ಅಂಜಲಿ ಬೋಲ್ಡ್​ ಆಗಿ ಕಾಣಿಸಿಕೊಂಡು ಸುದ್ದಿ ಆಗಿದ್ದರು. ನೆಟ್​ಫ್ಲಿಕ್ಸ್​ನಲ್ಲಿ ನೇರವಾಗಿ ಈ ಸಿನಿಮಾ ತೆರೆಕಂಡಿತ್ತು.

ಇದನ್ನೂ ಓದಿ:

ಮದುವೆಯಾದ ಪ್ರಣಿತಾಗೆ ಶುಭಕೋರಿದ ಶಿಲ್ಪಾ ಶೆಟ್ಟಿ; ಇಬ್ಬರ ನಡುವೆ ಗೆಳೆತನ ಬೆಳೆದಿದ್ದು ಹೇಗೆ?

Pranitha Marriage: ಪ್ರಣಿತಾ ಮದುವೆ ಬಳಿಕ ರಮ್ಯಾ ಕಡೆಗೆ ಪ್ರಶ್ನೆ ಎಸೆದ ಅಭಿಮಾನಿಗಳು​; ಏನಿದು ಲಿಂಕ್​?

Follow us on

Related Stories

Most Read Stories

Click on your DTH Provider to Add TV9 Kannada