ಹರಾಜಾಗುತ್ತಿದೆ ಯಾರೂ ಕೇಳಿರದ ಪ್ರಭಾಸ್​ ಸಿನಿಮಾ ಹಾಡು; ಭಾರತಲ್ಲೇ ಇದು ಮೊದಲ ಪ್ರಯೋಗ

ಹರಾಜಾಗುತ್ತಿದೆ ಯಾರೂ ಕೇಳಿರದ ಪ್ರಭಾಸ್​ ಸಿನಿಮಾ ಹಾಡು; ಭಾರತಲ್ಲೇ ಇದು ಮೊದಲ ಪ್ರಯೋಗ
ಪ್ರಭಾಸ್​

ಪ್ರಭಾಸ್​ ನಟನೆಯ ಸಾಹೋ ಸಿನಿಮಾಗೆ ಗಿಬ್ರಾನ್​ ಸೇರಿ ಹಲವು ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದರು. ಆ ಚಿತ್ರಕ್ಕಾಗಿ ಒಂದು ಹೀರೋ ಥೀಮ್​ ಸಾಂಗ್​ ಕಂಪೋಸ್​ ಮಾಡಲಾಗಿತ್ತು.

Madan Kumar

| Edited By: Rajesh Duggumane

Jun 06, 2021 | 4:29 PM

ಎಲ್ಲ ಕಡೆ ಕೊರೊನಾ ವೈರಸ್​ ಕಾಟ ಕೊಡುತ್ತಿದೆ. ದೇಶಾದ್ಯಂತ ಜನರು ಕಷ್ಟಪಡುತ್ತಿದ್ದಾರೆ. ಈ ಹೊತ್ತಿನಲ್ಲಿ ಅನೇಕ ಸೆಲೆಬ್ರಿಟಿಗಳು ತಮ್ಮ ಕೈಲಾದ ರೀತಿಯಲ್ಲಿ ಜನರ ಸಹಾಯಕ್ಕೆ ನಿಂತಿದ್ದಾರೆ. ಸ್ಟಾರ್​ ನಟರು ನೇರವಾಗಿ ಮತ್ತು ತಮ್ಮ ಅಭಿಮಾನಿ ಸಂಘಗಳ ಮೂಲಕ ಜನಪರ ಕಾರ್ಯ ಮಾಡುತ್ತಿದ್ದಾರೆ. ಅದೇ ರೀತಿ ಸಂಗೀತ ನಿರ್ದೇಶಕ ಗಿಬ್ರಾನ್​ ಕೂಡ ಸಮಾಜಮುಖಿ ಕೆಲಸ ಮಾಡಲು ಸಜ್ಜಾಗಿದ್ದಾರೆ. ಆದರೆ ಅವರ ಹಾದಿ ಹೊಸದಾಗಿದೆ. ತಾವೇ ಸಿದ್ಧಪಡಿಸಿರುವ ಒಂದು ಹಾಡನ್ನು ಹರಾಜು ಹಾಕಲು ಅವರು ಮುಂದಾಗಿದ್ದಾರೆ. ಅದರಿಂದ ಬಂದ ಹಣವನ್ನು ಕೊವಿಡ್​ ವಿರುದ್ಧದ ಹೋರಾಟಕ್ಕೆ ಬಳಸಲಿದ್ದಾರೆ.

ಅಷ್ಟಕ್ಕೂ ಗಿಬ್ರಾನ್​ ಹರಾಜು ಹಾಕಲಿರುವ ಹಾಡು ಯಾವುದು? ಪ್ರಭಾಸ್​ ನಟನೆಯ ಸಾಹೋ ಸಿನಿಮಾದ್ದು. ಹೌದು, ಪ್ರಭಾಸ್​ ನಟನೆಯ ಸಾಹೋ ಸಿನಿಮಾಗೆ ಗಿಬ್ರಾನ್​ ಸೇರಿ ಹಲವು ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದರು. ಆ ಚಿತ್ರಕ್ಕಾಗಿ ಒಂದು ಹೀರೋ ಥೀಮ್​ ಸಾಂಗ್​ ಕಂಪೋಸ್​ ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ ಆ ಹಾಡನ್ನು ಬಳಸಿಕೊಳ್ಳಲಿಲ್ಲ ಮತ್ತು ರಿಲೀಸ್​ ಕೂಡ ಮಾಡಲಿಲ್ಲ. ಅದೇ ಗೀತೆಯನ್ನು ಈಗ ಹರಾಜು ಹಾಕಲು ಗಿಬ್ರಾನ್​ ನಿರ್ಧರಿಸಿದ್ದಾರೆ.

‘ಹರಾಜಿನಿಂದ ಬರುವ ಹಣದಲ್ಲಿ ಶೇ.50ರಷ್ಟನ್ನು ತಮಿಳುನಾಡು ಸಿಎಂ ರಿಲೀಫ್​ ಫಂಡ್​ಗೆ ದೇಣಿಗೆಯಾಗಿ ನೀಡುತ್ತೇನೆ. ಕೊರೊನಾ ವೈರಸ್​ ಮತ್ತು ಲಾಕ್​ಡೌನ್​ನಿಂದ ಕೆಲಸ ಇಲ್ಲದೆ ಕಷ್ಟಪಡುತ್ತಿರುವ ಸಂಗೀತಗಾರರಿಗೂ ಸಹಾಯ ಮಾಡುತ್ತೇನೆ. ಎನ್​ಎಫ್​ಟಿ (non-fungible token) ವೆಬ್​ಸೈಟ್​ ಮೂಲಕ ಈ ರೀತಿ ಹಾಡು ಹರಾಜು ಆಗುತ್ತಿರುವುದು ಭಾರತದಲ್ಲಿ ಇದೇ ಮೊದಲು’ ಎಂದು ಗಿಬ್ರಾನ್​ ಹೇಳಿದ್ದಾರೆ.

‘ಈವರೆಗೂ ನಾನು ಮತ್ತು ನಿರ್ದೇಶಕ ಸುಜೀತ್​ ಹೊರತುಪಡಿಸಿ ಆ ಹಾಡನ್ನು ಯಾರೂ ಕೇಳಿಲ್ಲ. ಹಾಡು ಮೂಡಿಬಂದಿರುವ ರೀತಿ ಬಗ್ಗೆ ನಮಗೆ ತುಂಬ ಸಂತಸ ಇದೆ’ ಎಂದಿದ್ದಾರೆ ಗಿಬ್ರಾನ್​. ಯಾರೂ ಕೇಳಿರದ ಈ ಹಾಡನ್ನು ಹರಾಜಿನಲ್ಲಿ ಯಾರು ಕೊಂಡುಕೊಳ್ಳಲಿದ್ದಾರೆ? ಎಷ್ಟು ಹಣ ಸಂಗ್ರಹ ಆಗಲಿದೆ ಎಂಬ ಕೌತುಕ ಎಲ್ಲರಲ್ಲೂ ಮೂಡಿದೆ.

ಕೊವಿಡ್​ ಸಂದರ್ಭದಲ್ಲಿ ಅಜಿತ್​ ಕುಮಾರ್​, ಸೂರ್ಯ, ಯಶ್​, ಉಪೇಂದ್ರ, ಅಮಿತಾಭ್​ ಬಚ್ಚನ್​, ಅಕ್ಷಯ್​ ಕುಮಾರ್​ ಸೇರಿದಂತೆ ಹಲವಾರು ನಟರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಹರ್ಷಿಕಾ ಪೂಣಚ್ಚ, ಭುವನ್​ ಪೊನ್ನಣ್ಣ, ಅರ್ಜುನ್​ ಗೌಡ ಮುಂತಾದವರು ಕೊರೊನಾ ಸೋಂಕಿತರ ಕುಟುಂಬದವರಿಗೆ ಹಲವು ರೀತಿಯಲ್ಲಿ ನೆರವಾಗುತ್ತಿದ್ದಾರೆ.

ಇದನ್ನೂ ಓದಿ:

ಪ್ರಭಾಸ್​ ಚಿತ್ರದಲ್ಲಿ 10 ಬಾಲಿವುಡ್​ ಸೆಲೆಬ್ರಿಟಿಗಳು; ಸಂಭಾವನೆ ಮೊತ್ತವೇ 200 ಕೋಟಿ! ಯಾವುದು ಈ ಸಿನಿಮಾ?​

ಪ್ರಭಾಸ್​ ಸಿನಿಮಾದಲ್ಲಿ ಬಿಗ್​ ಬಾಸ್​ ಸ್ಪರ್ಧಿಗೆ ಅವಕಾಶ? ಜೋರಾಗಿ ಹಬ್ಬಿದ್ದ ಗಾಸಿಪ್​ನ ಅಸಲಿಯತ್ತು ಇಲ್ಲಿದೆ

Follow us on

Related Stories

Most Read Stories

Click on your DTH Provider to Add TV9 Kannada