Liquor Policy Case: ಮದ್ಯ ನೀತಿ ಹಗರಣ ವಿಚಾರಣೆ ಕುರಿತು ಮನೀಶ್ ಸಿಸೋಡಿಯಾ ಮನವಿಗೆ ಒಪ್ಪಿದ ಸಿಬಿಐ

|

Updated on: Feb 19, 2023 | 12:14 PM

ಮದ್ಯ ನೀತಿ ಹಗರಣದ ವಿಚಾರಣೆ ಕುರಿತಂತೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಲ್ಲಿಸಿದ ಮನವಿಯನ್ನು ಸಿಬಿಐ ಸ್ವೀಕರಿಸಿದೆ.

Liquor Policy Case: ಮದ್ಯ ನೀತಿ ಹಗರಣ ವಿಚಾರಣೆ ಕುರಿತು ಮನೀಶ್ ಸಿಸೋಡಿಯಾ ಮನವಿಗೆ ಒಪ್ಪಿದ ಸಿಬಿಐ
ಮಿನೀಶ್ ಸಿಸೋಡಿಯಾ
Follow us on

ಮದ್ಯ ನೀತಿ ಹಗರಣದ ವಿಚಾರಣೆ ಕುರಿತಂತೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಲ್ಲಿಸಿದ ಮನವಿಯನ್ನು ಸಿಬಿಐ ಸ್ವೀಕರಿಸಿದೆ. ಸದ್ಯದಲ್ಲೇ ಹೊಸದಾಗಿ ಸಮನ್ಸ್ ಜಾರಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಸೋಡಿಯಾ ಅವರು ದೆಹಲಿಯ ಬಜೆಟ್ ಸಿದ್ಧಪಡಿಸುವಲ್ಲಿ ನಿರತರಾಗಿರುವ ಕಾರಣ ಫೆಬ್ರವರಿ ಅಂತ್ಯದವರೆಗೆ ತನಗೆ ಕಾಲಾವಕಾಶ ನೀಡುವಂತೆ ತನಿಖಾ ಸಂಸ್ಥೆಗೆ ಮನವಿ ಮಾಡಿದ್ದರು. ದೆಹಲಿಯ ಬಜೆಟ್ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ ಮತ್ತು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಹೆಚ್ಚು ಸಮಯಗಳ ಕಾಲ ಕೆಲಸ ಮಾಡುತ್ತಿದ್ದೇನೆ ಎಂದರು.

ಬಂಧನಕ್ಕೆ ಹೆದರುವುದಿಲ್ಲ, ಯಾವುದೇ ಪ್ರಶ್ನೆಗಳಿಂದ ಓಡಿಹೋಗುವುದಿಲ್ಲ ಎಂದಿದ್ದಾರೆ. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಆಮ್ ಆದ್ಮಿ ಪಕ್ಷ ನೇತೃತ್ವದ ಸರ್ಕಾರದಲ್ಲಿ ಅಬಕಾರಿ ಇಲಾಖೆಯ ಉಸ್ತುವಾರಿ ಹೊಂದಿದ್ದಾರೆ. ಈ ಹಿಂದೆ ಕಳೆದ ವರ್ಷ ಅಕ್ಟೋಬರ್ 17ರಂದು ಸಿಸೋಡಿಯಾ ಅವರನ್ನು ವಿಚಾರಣೆ ನಡೆಸಲಾಯಿತು.

ಪ್ರಕರಣದಲ್ಲಿ ಅವರ ಮನೆ ಮತ್ತು ಬ್ಯಾಂಕ್ ಲಾಕರ್​ಗಳನ್ನು ಶೋಧಿಸಲಾಗಿತ್ತು. ದೆಹಲಿ ಅಬಕಾರಿ ನೀತಿ 2021-22ನ್ನು ರೂಪಿಸುವ ಮತ್ತು ಅನುಷ್ಠಾನಗೊಳಿಸುವ ದೊಡ್ಡ ಪಿತೂರಿ ಮತ್ತು ಪ್ರಕರಣದಲ್ಲಿ ಹಣ ಎಲ್ಲಿಂದ ಬಂತು ಎಂಬುದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತ್ತಷ್ಟು ಓದಿ: Liquor Policy Case: ಮದ್ಯ ನೀತಿ ಹಗರಣ ವಿಚಾರಣೆ, ಸಿಬಿಐನಿಂದ ಸಮಯ ಕೋರಿದ ಮನೀಶ್ ಸಿಸೋಡಿಯಾ

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಿದ ಸುಮಾರು ಮೂರು ತಿಂಗಳ ನಂತರ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಕರೆಯಲಾಗಿದೆ. ಸಿಸೋಡಿಯಾ ಮತ್ತು ಇತರೆ ಶಂಕಿತರ ವಿರುದ್ಧ ತನಿಖೆ ಇನ್ನೂ ನಡೆಯುತ್ತಿರುವುದರಿಂದ ಚಾರ್ಜ್​ಶೀಟ್​ನಲ್ಲಿ ಆರೋಪಿ ಎಂದು ಹೆಸರಿಸಲಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೆಹಲಿಯ ಮದ್ಯ ನೀತಿ ಪ್ರಕರಣದಲ್ಲಿ ವಿಚಾರಣೆಗಾಗಿ ಸಿಬಿಐ ಮುಂದೆ ಹಾಜರಾಗಲು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಮಯ ಕೋರಿದ್ದಾರೆ. ಫೆಬ್ರವರಿ 27ರ ನಂತರ ಹಾಜರಾಗುವುದಾಗಿ ಕೇಳಿದ್ದರು. ಇಂದು ಸಿಬಿಐನಿಂದ ವಿಚಾರಣೆಗಾಗಿ ನನಗೆ ನೋಟಿಸ್ ಬಂದಿದೆ, ದೆಹಲಿಯ ಬಜೆಟ್​ ಸಿದ್ಧಪಡಿಸುವ ಕಾರಣ ಫೆಬ್ರವರಿ ನಂತರ ಯಾವುದೇ ದಿನ ಸಮಯ ನೀಡುವಂತೆ ಅವರಿಗೆ ಮವಿ ಮಾಡಿದ್ದೇನೆ ಬಜೆಟ್ ತಯಾರಿ ಅಂತಿಮ ಹಂತದಲ್ಲಿದ್ದು, ಫೆಬ್ರವರಿ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published On - 12:12 pm, Sun, 19 February 23