Draupadi Murmu: ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ತಮಿಳುನಾಡಿಗೆ ಮೊದಲ ಭೇಟಿ; ಮಹಾಶಿವರಾತ್ರಿ ಪ್ರಾರ್ಥನೆಯಲ್ಲಿ ಭಾಗಿ

Mahashivaratri Celebrations At Isha: ಮಹಾಶಿವರಾತ್ರಿಯು ಕತ್ತಲನ್ನು ಅಂತ್ಯಗೊಳಿಸಿ ಬೆಳಕಿನ ದಾರಿ ತೋರಿಸುತ್ತದೆ ಎಂದು ಈ ಸಂದರ್ಭದಲ್ಲಿ ಹೇಳಿದ ದ್ರೌಪದಿ ಮುರ್ಮು, ನಮ್ಮೊಳಗಿನ ಕತ್ತಲನ್ನು ನೀಗಿಸಿ ಜೀವನದಲ್ಲಿ ಔನ್ನತ್ಯ ಸಾಧಿಸಲು ಆ ಪರಮಾತ್ಮ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸಿದರು.

Draupadi Murmu: ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ತಮಿಳುನಾಡಿಗೆ ಮೊದಲ ಭೇಟಿ; ಮಹಾಶಿವರಾತ್ರಿ ಪ್ರಾರ್ಥನೆಯಲ್ಲಿ ಭಾಗಿ
ಆದಿಯೋಗಿ ಎದುರು ಮಹಾಶಿವರಾತ್ರಿ ಮಹೋತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 19, 2023 | 11:20 AM

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರು ನಗರದ ಬಳಿ ಇರುವ ಈಶ ಯೋಗ ಕೇಂದ್ರದಲ್ಲಿ (Isha Yoga Center) ನಿನ್ನೆ ಶನಿವಾರ ನಡೆದ ಮಹಾಶಿವರಾತ್ರಿ ಆಚರಣೆಗಳಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪಾಲ್ಗೊಂಡರು. ಆದಿಯೋಗಿ ಮೂರ್ತಿ ಬಳಿ ಮಹಾಯೋಗ ಯಜ್ಞ, ಪಂಚ ಭೂತ ಕ್ರಿಯೆಯಲ್ಲಿ ಭಾಗಿಯಾದರು. ದ್ರೌಪದಿ ಮುರ್ಮು ಅವರಿಗೆ ರಾಷ್ಟ್ರಪತಿಯಾಗಿ ಇದು ತಮಿಳುನಾಡಿಗೆ ಮೊದಲ ಭೇಟಿ ಎಂಬುದು ವಿಶೇಷ. ಸದ್ಗುರು ಜಗ್ಗಿ ವಾಸುದೇವ್ ಅವರ ಈಶ ಯೋಗ ಕೇಂದ್ರದ ಬಳಿ 112 ಅಡಿ ಎತ್ತರದ ಆದಿಯೋಗಿ ವಿಗ್ರಹ ಇದ್ದು ಇಲ್ಲಿ ನಡೆದ ಮಹಾಶಿವರಾತ್ರಿ ಮಹೋತ್ಸವಕ್ಕೆ ಸಾವಿರಾರು ಜನರು ನೆರೆದಿದ್ದರೆನ್ನಲಾಗಿದೆ. ರಾಷ್ಟ್ರಪತಿಗಳು ವಿಶೇಷ ಆಹ್ವಾನಿತರಾಗಿ ಇಲ್ಲಿಗೆ ಆಗಮಿಸಿದ್ದರು.

ಮಹಾಶಿವರಾತ್ರಿಯು ಕತ್ತಲನ್ನು ಅಂತ್ಯಗೊಳಿಸಿ ಬೆಳಕಿನ ದಾರಿ ತೋರಿಸುತ್ತದೆ ಎಂದು ಈ ಸಂದರ್ಭದಲ್ಲಿ ಹೇಳಿದ ದ್ರೌಪದಿ ಮುರ್ಮು, ನಮ್ಮೊಳಗಿನ ಕತ್ತಲನ್ನು ನೀಗಿಸಿ ಜೀವನದಲ್ಲಿ ಔನ್ನತ್ಯ ಸಾಧಿಸಲು ಆ ಪರಮಾತ್ಮ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸಿದರು.

ಇದನ್ನೂ ಓದಿ: Sadhguru Interview: ಉತ್ಸಾಹ, ನಿಶ್ಚಲ, ಅಮಲುಈ ಮೂರರ ಸಮ್ಮಿಳನದ ಮ್ಯಾಜಿಕ್: ಟಿವಿ9 ಜೊತೆ ಜಗ್ಗಿ ವಾಸುದೇವ್

ಶಿವರಾತ್ರಿಯ ಆದ್ಯಾತ್ಮಿಕ ಬೆಳಕು ನಮ್ಮ ಜೀವದಲ್ಲಿ ಪ್ರತೀ ದಿನವೂ ದಾರಿದೀಪವಾಗಲಿ. ಶಿವ ಪರಮಾತ್ಮ ಪ್ರತಿಯೊಬ್ಬರಿಗೂ ದೇವರು. ಆತ ಗೃಹಸ್ಥನೂ ಹೌದು, ಸನ್ಯಾಸಿಯೂ ಹೌದು. ಆತನೇ ಮೊದಲ ಯೋಗಿ ಮತ್ತು ಮೊದಲ ಜ್ಞಾನಿ. ಬಹಳ ಬೇಗ ಒಲಿಯುವ ದೇವರೂ ಹೌದು, ಬಹಳ ಬೇಗ ಉಗ್ರ ಸ್ವರೂಪವಾಗುವ ದೇವರೂ ಹೌದು. ಶಿವನು ಸೃಷ್ಟಿಕರ್ತನೂ ಹೌದು, ಪ್ರಳಯಕಾರಕನೂ ಹೌದು ಎಂದು ದ್ರೌಪದಿ ಮುರ್ಮು ಈ ಸಂದರ್ಭದಲ್ಲಿ ಹೇಳಿದರು.

ಇದೇ ವೇಳೆ, ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಶ್ಲಾಘಿಸಿದ ರಾಷ್ಟ್ರಪತಿಗಳು, ಈ ನಮ್ಮ ಸದ್ಗುರು ಈಗಿನ ಕಾಲದ ಋಷಿಯಾಗಿದ್ದು ದೇಶ ವಿದೇಶಗಳಿಂದ ಲೆಕ್ಕವಿಲ್ಲದಷ್ಟು ಜನರಿಗೆ ಪ್ರೇರಣೆಯಾಗಿದ್ದಾರೆ, ಗುರುಗಳಾಗಿದ್ದಾರೆ, ಆಧ್ಯಾತ್ಮಿಕ ಹಾದಿಗೆ ದಾರಿದೀಪವಾಗಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: Sadhguru Interview: ಭಾರತದ ಭವಿಷ್ಯ, ಸಂಕೀರ್ಣತೆ, ಅಮಲು, ಸಂತೋಷ, ಯುವ ಶಕ್ತಿ ಬಗ್ಗೆ ಸದ್ಗುರು ವಿಚಾರ; ನ್ಯೂಸ್9 ಪ್ಲಸ್ ವಿಶೇಷ ಸಂದರ್ಶನಗಳು

ಜಗ್ಗಿ ವಾಸುದೇವ್ ಅವರ ಈಶ ಯೋಗಕೇಂದ್ರದಲ್ಲಿ ನಡೆದ ಮಹಾಶಿವರಾತ್ರಿ ಮಹೋತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಸದ್ಗುರು ಜಗ್ಗಿ ವಾಸುದೇವ್, ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ, ತಮಿಳುನಾಡು ಐಟಿ ಸಚಿವ ಮನೋ ತಂಗರಾಜ್ ಮೊದಲಾದವರು ಪಾಲ್ಗೊಂಡಿದ್ದರು.

ಸದ್ಗುರು ಜಗ್ಗಿವಾಸುದೇವ್ ಜೊತೆ ಟಿವಿ9 ನಡೆಸಿದ ವಿಶೇಷ ಸಂದರ್ಶನಗಳು ನ್ಯೂಸ್9ಪ್ಲಸ್ ಒಟಿಟಿಯಲ್ಲಿ ಲಭ್ಯ ಇವೆ. ಇದನ್ನು ಡೌನ್​ಲೋಡ್ ಮಾಡಿಕೊಂಡು ಸಂದರ್ಶನ ವೀಕ್ಷಿಸಿ.