Sadhguru Interview: ಉತ್ಸಾಹ, ನಿಶ್ಚಲ, ಅಮಲು- ಈ ಮೂರರ ಸಮ್ಮಿಳನದ ಮ್ಯಾಜಿಕ್: ಟಿವಿ9 ಜೊತೆ ಜಗ್ಗಿ ವಾಸುದೇವ್

Barun Das Feat. Sadhguru Jaggi Vasudev- ಈಶ ಯೋಗ ಕೇಂದ್ರದಲ್ಲಿ ಟಿವಿ9 ನೆಟ್ವರ್ಕ್​ನ ಎಂಡಿ ಮತ್ತು ಸಿಇಒ ಬರುಣ್ ದಾಸ್ ಜೊತೆ ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಜಗ್ಗಿ ವಾಸುದೇವ್ ಜೀವನಸಾಧನೆಗೆ ಅಗತ್ಯ ಇರುವ ಮೂರು ಆಯಾಮಗಳ ಬಗ್ಗೆ ಮಾತನಾಡಿದರು.

Sadhguru Interview: ಉತ್ಸಾಹ, ನಿಶ್ಚಲ, ಅಮಲು- ಈ ಮೂರರ ಸಮ್ಮಿಳನದ ಮ್ಯಾಜಿಕ್: ಟಿವಿ9 ಜೊತೆ ಜಗ್ಗಿ ವಾಸುದೇವ್
ಸದ್ಗುರು ಜಗ್ಗಿ ವಾಸುದೇವ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 19, 2023 | 10:40 AM

ಆದಿಯೋಗಿ ಸದ್ಗುರು ಜಗ್ಗಿ ವಾಸುದೇವ್ ಪ್ರಕಾರ ಜೀವನದಲ್ಲಿ ಮೂರು ಆಯಾಮಗಳು ಸೇರಿದರೆ ಏನು ಬೇಕಾದರೂ ಸಾಧಿಸಲು ಸಾಧ್ಯವಿದೆ. ಈಶ ಯೋಗ ಕೇಂದ್ರದಲ್ಲಿ ಮಹಾಶಿವರಾತ್ರಿ ಮಹೋತ್ಸವಕ್ಕೆ ಮುನ್ನ ಟಿವಿ9 ನೆಟ್ವರ್ಕ್​ನ ಎಂಡಿ ಮತ್ತು ಸಿಇಒ ಬರುಣ್ ದಾಸ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಜಗ್ಗಿ ವಾಸುದೇವ್ ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ಜೀವನದ ಸಾಧನೆ ಮತ್ತು ಸಂತೋಷಕ್ಕೆ ಸುಲಭ ಸೂತ್ರ ಬಿಚ್ಚಿಟ್ಟಿದ್ದಾರೆ. ಉತ್ಸಾಹ, ನಿಶ್ಚಲ ಮತ್ತು ಅಮಲು (Exuberance, Stillness and Intoxication) ಇವು ಮೂರು ಆಯಾಮಗಳು ಸೇರಿದರೆ ಜೀವನದಲ್ಲಿ ಉನ್ನತಿ ಸಾಧ್ಯ ಎಂದರು.

ಈ ಮೂರು ಆಯಾಮಗಳ ವಿಶ್ಲೇಷಣೆ ಮಾಡಿದ ಸದ್ಗುರು, ಉತ್ಸಾಹ, ನಿಶ್ಚಲತೆ ಮತ್ತು ಅಮಲು, ಈ ಮೂರೂ ಕೂಡ ಬಹಳ ಮುಖ್ಯ. ಒಂದು ಬಿಟ್ಟರೆ ಪರಿಪೂರ್ಣತೆ ಆಗುವುದಿಲ್ಲ. ಮಕ್ಕಳಲ್ಲಿ ಉತ್ಸಾಹದ ಭುಗ್ಗೆಯೇ ಹರಿಯುತ್ತಿರುತ್ತದೆ. ನಿಶ್ಚಲತೆ ಇಲ್ಲದೇ ಹೋದರೆ ಈ ಉತ್ಸಾಹವನ್ನು ನಿಯಂತ್ರಿಸುವುದಕ್ಕೆ ಆಗುವುದಿಲ್ಲ. ಬಹಳ ಜನರು ಚಿಕ್ಕ ವಯಸ್ಸಿನಲ್ಲಿ ಭಾರೀ ಉತ್ಸಾಹ ಮತ್ತು ಲವಲವಿಕೆಯಿಂದ ಇರುತ್ತಾರೆ. ಆದರೆ, ನಂತರ ಅವರು ಖಿನ್ನತೆಗೆ ಹೋಗಿಬಿಡುವುದುಂಟು. ಆದ್ದರಿಂದ ಉತ್ಸಾಹದ ಜೊತೆಗೆ ನಿಶ್ಚಲತೆಯೂ ಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಉತ್ಸಾಹ (Exuberance) ಎಂಬುದು ಹೆಚ್ಚು ಮಾನಸಿಕ ಮತ್ತು ಭಾವನಾತ್ಮಕವಾದುದು. ನಮ್ಮದೇ ವೈದ್ಯಕೀಯ ಶಾಲೆಯ ರಿಸರ್ಚ್ ಸೆಂಟರ್​ನಲ್ಲಿ ಇದರ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಕೋಶಗಳ ಮಟ್ಟದಲ್ಲಿ ಮತ್ತು ಜೆನಿಟಿಕ್ ಮಟ್ಟದಲ್ಲಿ ಉತ್ಸಾಹ ವ್ಯಕ್ತವಾಗುತ್ತದೆ. ಬಿಡಿಎನ್​ಎಫ್ ಫ್ಯಾಕ್ಟರ್​ಗಳು ಶೇ. 70ರಷ್ಟು ಹೆಚ್ಚುತ್ತವೆ. ನಿಮ್ಮ ತಲೆಯಲ್ಲಿ ಏನೋ ಆಸಕ್ತಿಯದ್ದು ಇರುತ್ತೆ ಎಂದಲ್ಲ, ಆದರೂ ನೀವು ಪುಳಕ ಸ್ಥಿತಿಯಲ್ಲಿರುತ್ತೀರಿ. ನೀವು ಏನು ಬೇಕಾದರೂ ಮಾಡಬಹುದು. ನೀವು ಪ್ಯಾಷನೇಟ್ ಆಗಿದ್ದರೆ ಒಂದನ್ನೇ ಮಾತ್ರ ಮಾಡಬಹುದು. ಇದನ್ನು ಮಾಡಿದರೆ ಇನ್ನೊಂದು ಆಗಲ್ಲ. ಇದು ನಮ್ಮ ಜೀವನವನ್ನು ಕುಂಠಿತಗೊಳಿಸುತ್ತದೆ (Crippling life). ಆದ್ದರಿಂದ ಉತ್ಸಾಹ ಬಹಳ ಮುಖ್ಯ. ಆದರೆ, ನಿಶ್ಚಲತೆ ಇಲ್ಲದಿದ್ದರೆ ಈ ಉತ್ಸಾಹ ಎನ್ನುವುದು ನಿರರ್ಥಕ ಎನಿಸುತ್ತದೆ ಎಂದು ಸದ್ಗುರು ಜಗ್ಗಿ ವಾಸುದೇವ್ ವಿವರಣೆ ನೀಡಿದರು.

ಇದನ್ನೂ ಓದಿ: Sadhguru Interview: ಭಾರತದ ಭವಿಷ್ಯ, ಸಂಕೀರ್ಣತೆ, ಅಮಲು, ಸಂತೋಷ, ಯುವ ಶಕ್ತಿ ಬಗ್ಗೆ ಸದ್ಗುರು ವಿಚಾರ; ನ್ಯೂಸ್9 ಪ್ಲಸ್ ವಿಶೇಷ ಸಂದರ್ಶನಗಳು

ಇದೇ ವೇಳೆ ಸದ್ಗುರು ಮೂರನೇ ಆಯಾಮವಾದ ಅಮಲೇರುವಿಕೆ (Intoxication)ಬಗ್ಗೆಯೂ ಮಾತನಾಡಿ, ನೀವು ಅಮಲೇರದಿದ್ದರೆ ಏನಾದರೂ ಸಾಧಿಸುವುದು ಕಷ್ಟ ಎಂದರು.

ಇನ್​ಟಾಕ್ಸಿಕೇಶನ್ ಎಂದರೆ ಆಲ್ಕೋಹಾಲ್, ಡ್ರಗ್ ನೆನಪಾಗಬಹುದು. ಇವುಗಳ ಬಗ್ಗೆ ನನಗೇನು ನೈತಿಕ ಅಭ್ಯಂತರಗಳಿಲ್ಲ. ಇವು ಅಮಲೇರಿಸುತ್ತವಾದರೂ ನಾವು ಜಾಗೃತಾವಸ್ಥೆಯನ್ನು ಕಳೆದುಕೊಳ್ಳುತ್ತೇವೆ. ನಮಗೆ ಜಾಗೃತಾವಸ್ಥೆಯಲ್ಲಿರುವ ಅಮಲೇರಿಕೆ ಬೇಕುಎಂದು ಹೇಳಿದ ಅವರು ಸ್ವಿಟ್ಚರ್​ಲೆಂಡ್​ನಲ್ಲಿ ನಡೆದ ಒಂದು ಘಟನೆಯನ್ನು ಮೆಲುಕು ಹಾಕಿದರು.

ನಮ್ಮ ಸೇವ್ ಸಾಯಿಲ್ ಅಭಿಯಾನಕ್ಕೆ ಸ್ವಿಸ್ ಟೂರಿಸಂ ಇಲಾಖೆ ಬೆಂಬಲ ನೀಡಿತು. ನಾವು ಕೆಲ ಸ್ಥಳಗಳ ಪ್ರಚಾರಕ್ಕೆ ವಿಡಿಯೋ ಮಾಡಿದೆವು. ಒಂದು ಸರೋವರದ ಪ್ರಚಾರದ ವಿಡಿಯೋ ಮಾಡುವ ಸಂದರ್ಭದಲ್ಲಿ ಅವರು ಕೇಳಿದರು, ಸದ್ಗುರು ನೀವು ಯಾವಾಗ ರಜೆ ತಗೋತೀರಿ? ನಾನು ಹೇಳಿದೆ, ಇದ್ಯಾವುದು ರಜೆ, ನಾನು ಯಾವಾಗಲೂ ಆನಂದವಾಗಿರುತ್ತೇನೆ. ನನಗೇಕೆ ರಜೆ ಅಂದೆಎಂದು ನೆನಪಿಸಿಕೊಂಡರು.

ನಮ್ಮ ಈ ದೇಹವು ಈ ಭೂಮಿಯ ಅತಿದೊಡ್ಡ ಕೆಮಿಕಲ್ ಫ್ಯಾಕ್ಟರಿ ಅಲ್ಲವೇ? ಈಗ ಪ್ರಶ್ನೆ ಇರುವುದು ಈ ಫ್ಯಾಕ್ಟರಿಗೆ ನೀವು ಉತ್ತಮ ಮ್ಯಾನೇಜರಾ ಅಥವಾ ಕೆಟ್ಟ ಮ್ಯಾನೇಜರಾ ಎಂಬುದು. ನೀವು ಉತ್ತಮ ಮ್ಯಾನೇಜರ್ ಆದರೆ ಒಳ್ಳೆಯ ಕೆಮಿಕಲ್ ಸೃಷ್ಟಿಸುತ್ತೀರಿಎಂದು ಸದ್ಗುರು ಈ ವಿಶೇಷ ಸಂದರ್ಶನದಲ್ಲಿ ಹೇಳೀದರು.

ನ್ಯೂಸ್9 ಪ್ಲಸ್ ಒಟಿಟಿಯಲ್ಲಿ ಸದ್ಗುರು ಸಂದರ್ಶನದ ಎಲ್ಲಾ ಎಪಿಸೋಡ್​ಗಳು ಲಭ್ಯ ಇವೆ. ಈ ಆ್ಯಪ್ ಡೌನ್​ಲೋಡ್ ಮಾಡಿ

Published On - 10:40 am, Sun, 19 February 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ