Sadhguru Interview: ಭಾರತದ ಭವಿಷ್ಯ, ಸಂಕೀರ್ಣತೆ, ಅಮಲು, ಸಂತೋಷ, ಯುವ ಶಕ್ತಿ ಬಗ್ಗೆ ಸದ್ಗುರು ವಿಚಾರ; ನ್ಯೂಸ್9 ಪ್ಲಸ್ ವಿಶೇಷ ಸಂದರ್ಶನಗಳು

Duologue with Barun Das Feat. Sadhguru Jaggi Vasudev: ಖ್ಯಾತ ಆದ್ಯಾತ್ಮಿಕ ಚಿಂತಕ ಮತ್ತು ಪರಿಸರವಾದಿ ಸದ್ಗುರು ವಾಸುದೇವ್ ಜೊತೆ ಟಿವಿ9 ನೆಟ್ವರ್ಕ್​ನ ಎಂಡಿ ಮತ್ತು ಸಿಇಒ ಬರುಣ್ ದಾಸ್ ವಿಶೇಷ ಸಂದರ್ಶನ ನಡೆಸಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ:

Sadhguru Interview: ಭಾರತದ ಭವಿಷ್ಯ, ಸಂಕೀರ್ಣತೆ, ಅಮಲು, ಸಂತೋಷ, ಯುವ ಶಕ್ತಿ ಬಗ್ಗೆ ಸದ್ಗುರು ವಿಚಾರ; ನ್ಯೂಸ್9 ಪ್ಲಸ್ ವಿಶೇಷ ಸಂದರ್ಶನಗಳು
ಸದ್ಗುರು ಜಗ್ಗಿ ವಾಸುದೇವ್
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Feb 18, 2023 | 8:10 PM

ಆದಿಯೋಗಿ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ದೇಶವಿದೇಶಗಳಲ್ಲಿ ಖ್ಯಾತರಾಗಿದ್ದಾರೆ. ಇವರ ಪರಿಸರಸ್ನೇಹಿ ಕಾರ್ಯಕ್ರಮಗಳು ಹಲವೆಡೆ ಜನಪ್ರಿಯವಾಗಿವೆ. ಮಣ್ಣು ಉಳಿಸಿ ಅಭಿಯಾನ ದೊಡ್ಡ ಮಟ್ಟದಲ್ಲೇ ನಡೆದಿದೆ. ಜೀವನ, ಭೂಗೋಳ, ಪರಿಸರ ಹೀಗೆ ಬಹು ವಿಚಾರಗಳ ಬಗ್ಗೆ ಸದ್ಗುರು ಮಾತನಾಡುತ್ತಾರೆ. ಅವರ ಭಾಷಣಗಳು ಬಹಳ ಮಂದಿಗೆ ಪ್ರೇರಣಾದಾಯಕ ಎನಿಸಿರುವುದು ಅತಿಶಯೋಕ್ತಿ ಆಗಲ್ಲ. ಟಿವಿ9 ನೆಟ್ವರ್ಕ್​ನ ಎಂಡಿ ಮತ್ತು ಸಿಇಒ ಬರುಣ್ ದಾಸ್​ಗೆ ನೀಡಿದ ಸಂದರ್ಶನದಲ್ಲಿ ಜಗ್ಗಿ ವಾಸುದೇವ್ ಜೀವನದ ಸಂತೋಷಕ್ಕೆ ಸುಲಭ ಸೂತ್ರ ಬಿಚ್ಚಿಟ್ಟಿದ್ದಾರೆ.

ಈ ವಿಶೇಷ ಸಂದರ್ಶನದ ಆರು ಎಪಿಸೋಡ್​ಗಳು ನ್ಯೂಸ್9 ಪ್ಲಸ್​ನಲ್ಲಿ (News9Plus) ಲಭ್ಯ ಇವೆ. ನ್ಯೂಸ್9 ಪ್ಲಸ್ ಎಂಬುದು ವಿಶ್ವದಲ್ಲೇ ಮೊದಲ ನ್ಯೂಸ್ ಒಟಿಟಿ (OTT News) ಎನಿಸಿದೆ. ಬಹಳ ಉನ್ನತ ಸ್ತರದ ಕಂಟೆಂಟ್​ಗಳು ಈ ಆ್ಯಪ್​ನಲ್ಲಿ ಸಿಗುತ್ತವೆ. ಸದ್ಗುರು ಜಗ್ಗಿವಾಸುದೇವ್ ಜೊತೆ ಟಿವಿ9 ನೆಟ್ವರ್ಕ್ ಸಿಇಒ ನಡೆಸಿದ ವಿಶೇಷ ಸಂವಾದದ 6 ಎಪಿಸೋಡ್​ಗಳಲ್ಲಿ ಏನೇನಿದೆ ಎಂಬ ಮಾಹಿತಿ ಇಲ್ಲಿದೆ.

ಎಪಿಸೋಡ್ 1: ಆದ್ಯಾತ್ಮಿಕತೆ ಒಂದು ಪರಿಕಲ್ಪನೆ ಎನ್ನುವುದನ್ನು ಸದ್ಗುರು ಒಪ್ಪುವುದಿಲ್ಲ. ಬಹಳ ಸಂಕೀರ್ಣ ಎನಿಸುವ ಈ ವಿಚಾರವನ್ನು ಗುರೂಜಿ ಸ್ಪಷ್ಟವಾಗಿ ಮುಂದಿಡುತ್ತಾರಾ? ಈ ಎಪಿಸೋಡ್​ನಲ್ಲಿ ಅವರ ವಿಚಾರಗಳನ್ನು ತಿಳಿಯಬಹುದು.

ಎಪಿಸೋಡ್ 2: ನಿತ್ಯ ಜೀವನದಲ್ಲಿ ಆಧ್ಯಾತ್ಮಿಕತೆಯನ್ನು ಹೇಗೆ ಅಳವಡಿಸಿಕೊಳ್ಳುತ್ತೀರಿ ಎಂಬ ಪ್ರಶ್ನೆಗೆ ಸದ್ಗುರು ಹೇಳುವ ಉತ್ತರ ಈ ಎಪಿಸೋಡ್​ನಲ್ಲಿ ಕೇಳಿ.

ಎಪಿಸೋಡ್ 3: ಉತ್ಸಾಹ, ನಿಶ್ಚಲ ಮತ್ತು ಅಮಲು ಈ ಮೂರು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸದಾ ಸಂತೋಷಿಗಳಾಗಿರುತ್ತೇವಾ? ಸದ್ಗುರು ವಿವರಣೆ ಕೇಳಿ.

ಎಪಿಸೋಡ್ 4: ನಿರೀಕ್ಷೆ ಮೀರಿದ್ದು ಸಿಕ್ಕಿದರೆ ಸಂತೋಷ ಹೇಗೆ ಬರುತ್ತದೆ ಎಂದು ಟಿವಿ9 ನೆಟ್ವರ್ಕ್​​ನ ಸಿಇಒ ಬರುಣ್ ದಾಸ್ ಅವರು ಗಣಿತಾತ್ಮಕವಾಗಿ ವಿವರಿಸುತ್ತಾರೆ. ಇದಕ್ಕೆ ಸದ್ಗುರು ಪ್ರತಿಕ್ರಿಯೆ ಹೇಗಿದೆ? ವೀಕ್ಷಿಸಿ ಈ ಎಪಿಸೋಡ್.

ಎಪಿಸೋಡ್ 5: ಆರ್ಥಿಕವಾಗಿ ಭಾರತ ಮುನ್ನುಗ್ಗುತ್ತಿರುವ ಹೊತ್ತಲ್ಲೇ ಈ ದೇಶದ ಸನಾತನ ಜೀವನ ಕ್ರಮ ಮತ್ತು ಐತಿಹಾಸಿಕ ತಪ್ಪುಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬ ವಿಚಾರದ ಬಗ್ಗೆ ಈ ಎಪಿಸೋಡ್​ನಲ್ಲಿ ಚರ್ಚಿಸಲಾಗಿದೆ. ಹೊಸ ಜೀವನ ದೃಷ್ಟಿಕೋನ ಕಾಣಬಹುದು.

ಎಪಿಸೋಡ್ 6: ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಯುವ ಸಮುದಾಯದ ಬಗ್ಗೆ ಅಪಾರ ವಿಶ್ವಾಸ ಇದೆ. ಇಷ್ಟು ವಿಶ್ವಾಸ ಯಾಕೆ? ಕೌಟುಂಬಿಕ ಮೌಲ್ಯಗಳು ನಿರರ್ಥಕವೇ? ಕುತೂಹಲಕಾರಿ ಸಂವಾದಗಳು ಈ ಎಪಿಸೋಡ್​ನಲ್ಲಿವೆ.

ನೀವು ಈ ಎಲ್ಲಾ ಎಪಿಸೋಡ್​ಗಳನ್ನು ನ್ಯೂಸ್9 ಪ್ಲಸ್ ಒಟಿಟಿಯಲ್ಲಿ ವೀಕ್ಷಿಸಬಹುದು. ಅದರ ಲಿಂಕ್ ಇಲ್ಲಿದೆ. ನ್ಯೂಸ್9 ಪ್ಲಸ್ ಒಟಿಟಿಗೆ ಬಂದಿರುವ ಮೊದಲ ನ್ಯೂಸ್ ಆ್ಯಪ್ ಆಗಿದೆ.

Published On - 7:11 pm, Sat, 18 February 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ