Liquor Policy Case: ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ನ್ಯಾಯಾಂಗ ಬಂಧನ ಮೇ 1 ರವರೆಗೆ ವಿಸ್ತರಣೆ

|

Updated on: Apr 17, 2023 | 2:41 PM

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾರ ನ್ಯಾಯಾಂಗ ಬಂಧನವನ್ನು ರೋಸ್ ಅವೆನ್ಯೂ ನ್ಯಾಯಾಲಯವು ಮೇ 1 ರವರೆಗೆ ವಿಸ್ತರಿಸಿದೆ.

Liquor Policy Case: ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ನ್ಯಾಯಾಂಗ ಬಂಧನ ಮೇ 1 ರವರೆಗೆ ವಿಸ್ತರಣೆ
ರೋಸ್ ಅವೆನ್ಯೂ ನ್ಯಾಯಾಲಯ
Image Credit source: ANI
Follow us on

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ(Manish Sisodia) ರ ನ್ಯಾಯಾಂಗ ಬಂಧನವನ್ನು ರೋಸ್ ಅವೆನ್ಯೂ ನ್ಯಾಯಾಲಯವು ಮೇ 1 ರವರೆಗೆ ವಿಸ್ತರಿಸಿದೆ. ಪ್ರಸ್ತುತ ರದ್ದುಗೊಂಡಿರುವ 2021-22ರ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಸಿಸೋಡಿಯಾರ ನ್ಯಾಯಾಂಗ ಬಂಧನವನ್ನು ಮೇ 1 ರವರೆಗೆ ವಿಸ್ತರಣೆ ಮಾಡಿದೆ.

ಕೇಂದ್ರೀಯ ತನಿಖಾ ದಳ ತನ್ನ ತನಿಖೆಯನ್ನು ಅತ್ಯಂತ ನಿರ್ಣಾಯಕ ಹಂತದಲ್ಲಿದೆ ಎಂದು ಹೇಳಿ ನ್ಯಾಯಾಂಗ ಬಂಧನದ ವಿಸ್ತರಣೆಗೆ ಮನವಿ ಮಾಡಿತ್ತು.

ಮತ್ತಷ್ಟು ಓದಿ: Liquor Policy Case: ಮನೀಶ್ ಸಿಸೋಡಿಯಾ ನ್ಯಾಯಾಂಗ ಬಂಧನ ಏ.17 ರವರೆಗೆ ವಿಸ್ತರಣೆ

ಮಾರ್ಚ್​ 6 ರಿಂದ ನ್ಯಾಯಾಂಗ ಬಂಧನದಲ್ಲಿರುವ ಸಿಸೋಡಿಯಾ ಅವರ ಬಂಧನದ ಅವಧಿ ಇಂದಿಗೆ ಅಂತ್ಯಗೊಳ್ಳುತ್ತಿತ್ತು. ಸಿಸೋಡಿಯಾ ಅವರು ಈ ಪ್ರಕರಣದ ಕ್ರಿಮಿನಲ್ ಪಿತೂರಿಯ ಪ್ರಮುಖ ಆರೋಪಿ ಎಂದು ಆರೋಪಿಸಿ ಸಿಬಿಐ ಇವರಿಗೆ ಜಾಮೀನು ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದೆ. ಈ ಹಗರಣದಲ್ಲಿ ಮನೀಶ್ ಸಿಸೋಡಿಯಾ ಕಿಕ್​ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಒಂದು ವರ್ಷದ ಅವಧಿಯಲ್ಲಿ 14 ಫೋನ್‌ಗಳನ್ನು ನಾಶಪಡಿಸಲಾಗಿದೆ ಮತ್ತು ಬದಲಾಯಿಸಲಾಗಿದೆ ಮತ್ತು ಸಿಸೋಡಿಯಾ ಮೊದಲಿನಿಂದಲೂ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ತನಿಖಾ ಸಂಸ್ಥೆ ಈ ಹಿಂದೆ ಹೇಳಿಕೊಂಡಿತ್ತು. ಮಾರ್ಚ್ 21 ರಂದು, ಇ.ಡಿ ಪ್ರಕರಣದಲ್ಲಿ ಜಾಮೀನು ಕೋರಿ ಸಿಸೋಡಿಯಾ ಮನವಿ ಸಲ್ಲಿಸಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published On - 2:29 pm, Mon, 17 April 23