Bathinda: ಮಿಲಿಟರಿ ಸ್ಟೇಷನ್ ಮೇಲೆ ಗುಂಡಿನ ದಾಳಿ ಪ್ರಕರಣ: ತಪ್ಪೊಪ್ಪಿಕೊಂಡ ಯೋಧನ ಬಂಧನ
ಬಟಿಂಡಾ (Bathinda) ಮಿಲಿಟರಿ ಸ್ಟೇಷನ್ ಗುಂಡಿನ ದಾಳಿ ಘಟನೆ ಸಂಬಂಂಧಿಸಿದಂತೆ, ನಿರಂತರ ತನಿಖೆಯ ನಂತರ, ಘಟನೆಗೆ ಸಂಬಂಧಿಸಿದಂತೆ ಸೇನಾ ಗನ್ನರ್ ಘಟಕದ ಮೋಹನ್ ದೇಸಾಯಿ ಎಂಬ ಯೋಧ INSAS ರೈಫಲ್ ಅನ್ನು ಕದ್ದು ತನ್ನ ನಾಲ್ವರು ಸಹೋದ್ಯೋಗಿಗಳನ್ನು ಕೊಂದಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.
ಪಂಜಾಬ್: ಬಟಿಂಡಾ (Bathinda) ಮಿಲಿಟರಿ ಸ್ಟೇಷನ್ ಗುಂಡಿನ ದಾಳಿ ಘಟನೆ ಸಂಬಂಂಧಿಸಿದಂತೆ, ನಿರಂತರ ತನಿಖೆಯ ನಂತರ, ಘಟನೆಗೆ ಸಂಬಂಧಿಸಿದಂತೆ ಸೇನಾ ಗನ್ನರ್ ಘಟಕದ ಮೋಹನ್ ದೇಸಾಯಿ ಎಂಬ ಯೋಧ INSAS ರೈಫಲ್ ಅನ್ನು ಕದ್ದು ತನ್ನ ನಾಲ್ವರು ಸಹೋದ್ಯೋಗಿಗಳನ್ನು ಕೊಂದಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಪ್ರಾಥಮಿಕ ತನಿಖೆಗಳ ಪ್ರಕಾರ ಇದು ವೈಯಕ್ತಿಕ ಹಗೆತನದಿಂದ ಈ ಘಟನೆ ನಡೆದಿದೆ ಎಂದು ಸ್ಪಷ್ಟವಾಗಿ ಕಂಡುಬಂದಿದೆ ಎಂದು HQ ಸೌತ್ ವೆಸ್ಟರ್ನ್ ಕಮಾಂಡ್ ತಿಳಿಸಿದ್ದಾರೆ. ಇದೀಗ ಆ ಯೋಧನನ್ನು ಬಂಧನ ಮಾಡಲಾಗಿದೆ ಎಂದು ಹೇಳಲಾಗಿದೆ. ಗುಂಡಿನ ದಾಳಿಗೆ ಸಂಬಂಧಿಸಿದಂತೆ ನಾಲ್ವರು ಯೋಧರನ್ನು ಭಾನುವಾರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ಮೂಲಗಳು ತಿಳಿಸಿವೆ. ಫೈರಿಂಗ್ ಘಟನೆಯ ಸಾಕ್ಷಿ ಮೇಜರ್ ಅಶುತೋಷ್ ಶುಕ್ಲಾ ಅವರ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಹತ್ಯೆಯಾದ ನಾಲ್ವರು ಯೋಧರನ್ನು ಸಾಗರ್, ಕಮಲೇಶ್, ಸಂತೋಷ್ ಮತ್ತು ಯೋಗೇಶ್ ಎಂದು ಗುರುತಿಸಲಾಗಿದೆ ಎಂದು ಎಫ್‌ಐಆರ್ ತಿಳಿಸಿದೆ. ಅವರು ಸೈನ್ಯದ ಫಿರಂಗಿ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಏ.12 ಬೆಳಗ್ಗೆ ಪಂಜಾಬ್ನ ಬಟಿಂಡಾ ಸೇನಾ ಠಾಣೆಯೊಳಗೆ ಗುಂಡಿನ ದಾಳಿ ನಡೆದಿದೆ ಎಂದು ಭಾರತೀಯ ಸೇನೆಯ ಸೌತ್ ವೆಸ್ಟರ್ನ್ ಕಮಾಂಡ್ ತಿಳಿಸಿದೆ. ಈ ಪ್ರದೇಶದಲ್ಲಿ ತಂಡಗಳು ಸಕ್ರಿಯಗೊಂಡು ತ್ವರಿತ ಕಾರ್ಯಚರಣೆಯನ್ನು ನಡೆಸಲಾಗಿತ್ತು. ರಕ್ಷಣಾ ಸಿಬ್ಬಂದಿಗಳು ಈ ಪ್ರದೇಶವನ್ನು ಸುತ್ತುವರಿದ ಮತ್ತು ಕೆಲವೊಂದು ಕಡೆ ನಿರ್ಬಂಧವೇರಿದ್ದರು. ಈ ದಾಳಿಯಲ್ಲಿ ನಾಲ್ಕು ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿವೆ.
Bathinda Military Station firing incident | After sustained interrogation, one individual named Gunner Desai Mohan from the Artillery unit, where the incident occurred has confessed to his involvement in stealing an INSAS rifle & killing four of his colleagues. Initial… pic.twitter.com/S8k4d1rlzw
— ANI (@ANI) April 17, 2023
ಇದನ್ನೂ ಓದಿ: Punjab: ಪಂಜಾಬ್ನ ಬಟಿಂಡಾ ಸೇನಾ ಠಾಣೆಯೊಳಗೆ ಗುಂಡಿನ ದಾಳಿ, ನಾಲ್ಕು ಸಾವು
ಮುಂಜಾನೆ ವೇಳೆ ಬಟಿಂಡಾ ಮಿಲಿಟರಿ ಸ್ಟೇಷನ್ ಒಳಗೆ ಗುಂಡಿನ ದಾಳಿ ನಡೆಸಿದ ಘಟನೆ ವರದಿಯಾಗಿತ್ತು. ಬಟಿಂಡಾದ ಹಿರಿಯ ಪೊಲೀಸ್ ಅಧೀಕ್ಷಕ ಜಿಎಸ್ ಖುರಾನಾ ಅವರು ನೀಡಿರುವ ಹೇಳಿಕೆಯ ಪ್ರಕಾರ ಪೊಲೀಸ್ ತಂಡವು ಸೇನಾ ಠಾಣೆಯ ಹೊರಗೆ ಕಾಯುತ್ತಿದ್ದ ವೇಳೆ ಈ ಘಟನೆ ನಡೆದಿದೆ, ಹಂತಕರನ್ನು ಠಾಣೆಯ ಒಳಗೆ ಬರದಂತೆ ತಡೆದಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಇದು ಭಯೋತ್ಪಾದಕ ದಾಳಿಯಾಗಿ ಕಂಡುಬರುತ್ತಿಲ್ಲ. ಇದು ಆಂತರಿಕ ವಿಷಯ ಆಗಿರಬಹುದು ಎಂದು ಅವರು ಹೇಳಿದರು.
Published On - 1:44 pm, Mon, 17 April 23