Elephants at Tirupati Temple: ತಿಮ್ಮಪ್ಪನ ಬೆಟ್ಟದ ಮೇಲೆ ರಸ್ತೆಯಲ್ಲಿ ದಿಢೀರನೆ ಕಾಣಿಸಿಕೊಂಡ ಆನೆಗಳ ಗುಂಪು, ಬೆಚ್ಚಬಿದ್ದ ತಿಮ್ಮಪ್ಪನ ಭಕ್ತರು!
Tirumala Tirupati Temple: ತಿರುಮಲ ತಿರುಪತಿ ಬೆಟ್ಟದ ಮೇಲೆ ನಡೆದುಹೋಗುತ್ತಿದ್ದ ರಸ್ತೆಯಲ್ಲಿ ದಿಢೀರನೆ ಎದುರಾದ ಆನೆಗಳ ಗುಂಪು, ಬೆಚ್ಚಬಿದ್ದ ತಿಮ್ಮಪ್ಪನ ಭಕ್ತರು!
ಸಾಕ್ಷಾತ್ ಶ್ರೀ ವೇಂಕಟೇಶ್ವರ ಸ್ವಾಮಿ ನೆಲೆಸಿರುವ ತಿರುಪತಿಯ ತಿರುಮಲ ಬೆಟ್ಟದಲ್ಲಿ ಮತ್ತೆ ಆನೆಗಳ ಹಿಂಡುನ ಕಾಣಿಸಿಕೊಂಡಿದ್ದು ಭಕ್ತರಲ್ಲಿ (Tirumala Devotees) ಆತಂಕ ಸೃಷ್ಟಸಿದೆ. ಶ್ರೀವಾರಿ ದರ್ಶನಕ್ಕೆ ಬಂದ ಭಕ್ತರನ್ನು ಆನೆಗಳ (Elephants) ಹಿಂಡನ್ನು ದರ್ಶಿಸಿ, ಭಯಭೀತರಾಗಿದ್ದಾರೆ. ತಿರುಮಲ ಬೆಟ್ಟ ತಲುಪಲು ಇರುವ ಕಾಲುದಾರಿಯ ಮೊದಲ ತಿರುವಿನಲ್ಲಿ ಗುಂಪುಗುಂಪಾಗಿ ಆನೆಗಳು ಪ್ರತ್ಯಕ್ಷವಾಗಿವೆ. ಇದರಿಂದ ದಾರಿಹೋಕರು ತೀವ್ರ ಆತಂಕಕ್ಕೆ ಗುರಿಯಾದರು. ಘಾಟ್ ರಸ್ತೆ ಪಕ್ಕದಲ್ಲಿ ಆನೆಗಳ ಹಿಂಡು ಕಂಡುಬರುತ್ತಿದ್ದಂತೆ ವಾಹನಗಳೂ ಸುಮಾರು ಕಾಲ ನಿಂತುಬಿಟ್ಟಿವೆ (Tirumala News).
ಇನ್ನು.. ಆ ಗುಂಪಿನಲ್ಲಿ ಐದು ಆನೆಗಳು, ಒಂದು ಚಿಕ್ಕ ಗುಜ್ಜಾನೆ ಇತ್ತು. ಮಾಹಿತಿಯನ್ನು ಪಡೆದ ಅರಣ್ಯ ಅಧಿಕಾರಿಗಳು ಆನೆಗಳ ಗುಂಪನ್ನು ಬೆನ್ನುಹತ್ತಿ, ಮತ್ತೆ ಅವುಗಳನ್ನು ಕಾಡಿನಲ್ಲಿ ಕಳುಹಿಸಲು ಪ್ರಯತ್ನಿಸಿದರು. ಕೆಲವು ದಿನಗಳು ಶೇಷಾಚಲ ಕಾಡುಗಳಲ್ಲಿ ಆನೆಗಳು ಸುತ್ತುಮುತ್ತಲ ಗ್ರಾಮಗಳಿಗೆ ನುಗ್ಗಿ ಹಲ್ಚಲ್ ಮಾಡಿದ್ದವು. ತೋಟಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡಿದ್ದವು.
ಈ ಹಿಂದೆಯೂ ಆನೆಗಳನ್ನು ಕಾಡುಗಳತ್ತ ಮರಳಿ ಕಳಿಸಲು ಫಾರೆಸ್ಟ್ ಅಧಿಕಾರಿಗಳು ಪ್ರಯತ್ನಿಸಿದ್ದರು. ಈಗ ಮತ್ತೆ ಆನೆಗಳು ಘಾಟ್ ರಸ್ತೆಯಲ್ಲಿ ಹಲ್ ಚಲ್ ಮಾಡಿವೆ. ಇನ್ನು ಸ್ಥಳದಲ್ಲಿದ್ದ ಭಕ್ತರು ಮತ್ತು ಸ್ಥಳೀಯ ನಿವಾಸಿಗಳು ಆನೆಗಳನ್ನು ನೋಡುತ್ತಿದ್ದಂತೆ ಅವುಗಳನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಬಂಧಿಸಿ ಫೋಟೋಗಳು, ವಿಡಿಯೋಗಳನ್ನು ತೆಗೆದುಕೊಂಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:10 pm, Mon, 17 April 23