AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gujarat: ನರ ಬಲಿ ಹೆಸರಲ್ಲಿ, ಗಿಲೊಟಿನ್ ರೀತಿಯ ಸಾಧನ ಬಳಸಿ ತಮ್ಮ ತಲೆಯನ್ನೇ ಕತ್ತರಿಸಿಕೊಂಡ ದಂಪತಿ

ಗುಜರಾತ್​ನ ರಾಜ್​ಕೋಟ್​ನಲ್ಲಿ ಭಯಾನಕ ಘಟನೆಯೊಂದು ಮುನ್ನಲೆಗೆ ಬಂದಿದೆ. ನರ ಬಲಿ ಹೆಸರಿನಲ್ಲಿ ದಂಪತಿ ಗಿಲೊಟಿನ್ ರೀತಿಯ ಉಪಕರಣ ಬಳಸಿ ತಮ್ಮ ತಲೆಯನ್ನೇ ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Gujarat: ನರ ಬಲಿ ಹೆಸರಲ್ಲಿ, ಗಿಲೊಟಿನ್ ರೀತಿಯ ಸಾಧನ ಬಳಸಿ ತಮ್ಮ ತಲೆಯನ್ನೇ ಕತ್ತರಿಸಿಕೊಂಡ ದಂಪತಿ
Death
ನಯನಾ ರಾಜೀವ್
|

Updated on: Apr 17, 2023 | 1:35 PM

Share

ಗುಜರಾತ್​ನ ರಾಜ್​ಕೋಟ್​ನಲ್ಲಿ ಭಯಾನಕ ಘಟನೆಯೊಂದು ಮುನ್ನಲೆಗೆ ಬಂದಿದೆ. ನರ ಬಲಿ ಹೆಸರಿನಲ್ಲಿ ದಂಪತಿ ಗಿಲೊಟಿನ್ ರೀತಿಯ ಉಪಕರಣ ಬಳಸಿ ತಮ್ಮ ತಲೆಯನ್ನೇ ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಮನೆಯಲ್ಲಿಯೇ ಗಿಲೊಟಿನ್ ಮಾದರಿಯ ಸಾಧನವನ್ನು ಮನೆಯಲ್ಲಿಯೇ ತಯಾರಿಸಿದ್ದರು ಎನ್ನಲಾಗಿದೆ. ಹೇಮುಭಾಯಿ ಮಕ್ವಾನಾ (38) ಮತ್ತು ಅವರ ಪತ್ನಿ ಹಂಸಾಬೆನ್ (35) ವಿಂಚಿಯಾ ಗ್ರಾಮದ ತಮ್ಮ ಜಮೀನಿನಲ್ಲಿರುವ ಗುಡಿಸಲಿನಲ್ಲಿ ಬ್ಲೇಡ್‌ ರೀತಿಯ ಉಪಕರಣದಿಂದ ತಲೆ ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತಿ-ಪತ್ನಿ ಆತ್ಮಹತ್ಯೆಯ ಈ ಯೋಜನೆಯನ್ನು ಕಾರ್ಯಗತಗೊಳಿಸಿದ್ದು, ಅವರ ತಲೆ ಕತ್ತರಿಸಿದ ನಂತರ ಅವರು ಅಗ್ನಿಕುಂಡಕ್ಕೆ ಉರುಳಿದರು ಎಂದು ಅವರು ಹೇಳಲಾಗಿದೆ. ಸ್ಥಳದಲ್ಲಿ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ ಎಂದು ತಿಳಿಸಿದರು.

ದಂಪತಿ ತಮ್ಮ ತಲೆಯನ್ನು ಹಗ್ಗದಿಂದ ಕಟ್ಟಿದ ಗಿಲ್ಲೊಟಿನ್ ತರಹದ ಸಾಧನದ ಅಡಿಯಲ್ಲಿ ಇರಿಸುವ ಮೊದಲು ಅಗ್ನಿಕುಂಡವನ್ನು ಸಿದ್ಧಪಡಿಸಿದರು. ಹಗ್ಗವನ್ನು ಬಿಡುತ್ತಿದ್ದಂತೆಯೇ ಕಬ್ಬಿಣದ ಬ್ಲೇಡ್ ಆತನ ಮೇಲೆ ಬಿದ್ದು ತಲೆ ಕಡಿದು ಅಗ್ನಿಕುಂಡಕ್ಕೆ ಉರುಳಿತು.

ಮತ್ತಷ್ಟು ಓದಿ: ಕೇರಳದಲ್ಲಿ ಇಬ್ಬರು ಮಹಿಳೆಯರ ಹತ್ಯೆ , ನರಬಲಿ ಶಂಕೆ; ಮೂವರ ಬಂಧನ

ಶನಿವಾರ ರಾತ್ರಿ ವಿಧಿವಿಧಾನ ನೆರವೇರಿಸಲಾಯಿತು ಎಂದರು. ಕಳೆದ ಒಂದು ವರ್ಷದಿಂದ ಇಬ್ಬರೂ ಪ್ರತಿದಿನ ಗುಡಿಸಲಿನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು ಎಂದು ದಂಪತಿಯ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಘಟನಾ ಸ್ಥಳದಿಂದ ಸೂಸೈಡ್ ನೋಟ್ ವಶಪಡಿಸಿಕೊಳ್ಳಲಾಗಿದ್ದು, ಪೋಷಕರು ಮತ್ತು ಮಕ್ಕಳ ಬಗ್ಗೆ ಕಾಳಜಿ ವಹಿಸುವಂತೆ ಸಂಬಂಧಿಕರಲ್ಲಿ ಮನವಿ ಮಾಡಿದ್ದಾರೆ.

ಗಿಲೊಟಿನ್ ಯಂತ್ರ ಎಂದರೇನು?

ಫ್ರೆಂಚ್ ಕ್ರಾಂತಿಯ ಸಮಯದಲ್ಲಿ (1789) ಶಿರಚ್ಛೇದನ ದಂಡನೆಯನ್ನು ಕಾರ್ಯಗತಗೊಳಿಸಲು ಬಳಸುತ್ತಿದ್ದ ಒಂದು ಯಂತ್ರ. ಮೊದಲಿಗೆ ಈ ಯಂತ್ರವನ್ನು ಲೋಹದ ತಗಡು, ಲೋಹದ ಸರಳು, ಕಾಗದದ ರಟ್ಟು ಮುಂತಾದುವನ್ನು ಕತ್ತರಿಸಲು ಬಳಸಲಾಗುತ್ತಿತ್ತು. ಇದಕ್ಕೆ ಕೊಯ್ಯು ಯಂತ್ರ (ಷಿಯರಿಂಗ್ ಮಷೀನ್) ಅಥವಾ ಕೊಯ್ಲುಒತ್ತಗೆ (ಷಿಯಾರಿಂಗ್ ಪ್ರೆಸ್) ಎಂಬ ಹೆಸರುಗಳೂ ಇವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ