Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದಲ್ಲಿ ಇಬ್ಬರು ಮಹಿಳೆಯರ ಹತ್ಯೆ , ನರಬಲಿ ಶಂಕೆ; ಮೂವರ ಬಂಧನ

ಪತ್ತನಂತಿಟ್ಟ ಜಿಲ್ಲೆಯ ತಿರುವಲ್ಲಾದಲ್ಲಿ ಎರಡು ವಿಭಿನ್ನ ಸ್ಥಳಗಳಲ್ಲಿ ಹೂಳುವ ಮೊದಲು ಮಹಿಳೆಯರ ಕುತ್ತಿಗೆಯನ್ನು ಸೀಳಿ ಅವರ ದೇಹದ ಭಾಗಗಳನ್ನು ತುಂಡುಗಳಾಗಿ ಕತ್ತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇರಳದಲ್ಲಿ ಇಬ್ಬರು ಮಹಿಳೆಯರ ಹತ್ಯೆ , ನರಬಲಿ ಶಂಕೆ; ಮೂವರ ಬಂಧನ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Oct 11, 2022 | 5:29 PM

ತಿರುವನಂತಪುರಂ: ಕೇರಳದಲ್ಲಿ (Kerala)  ನರಬಲಿಯ (human sacrifice) ಭಾಗವಾಗಿ ಇಬ್ಬರು ಮಹಿಳೆಯರನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಪ್ರಕರಣದಲ್ಲಿ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿಟಿಐ ವರದಿಯ ಪ್ರಕಾರ, ಬಲಿಯಾದವರು 50 ವರ್ಷದವರಾಗಿದ್ದು ಲಾಟರಿ ಟಿಕೆಟ್ ಮಾರಾಟಗಾರರಾಗಿದ್ದರು. ಇವರಿಬ್ಬರು ಕಡವಂತರಾ ಮತ್ತು ಕಾಲಡಿ ನಿವಾಸಿಗಳಾಗಿದ್ದಾರೆ. ಅವರಲ್ಲಿ ಒಬ್ಬರು ಈ ವರ್ಷದ ಜೂನ್‌ನಲ್ಲಿ ನಾಪತ್ತೆಯಾಗಿದ್ದರೆ, ಇನ್ನೊಬ್ಬ ಮಹಿಳೆ ಸೆಪ್ಟೆಂಬರ್‌ನಲ್ಲಿ ಕಾಣೆಯಾಗಿದ್ದರು. ಮಹಿಳೆಯರು ತಮ್ಮ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸಮೃದ್ಧಿಯನ್ನು ತರಲು ಬೇಡಿದ್ದು ಮೂವರು ವ್ಯಕ್ತಿಗಳು ಇವರನ್ನು ನರ ಬಲಿ ಕೊಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪತ್ತನಂತಿಟ್ಟ ಜಿಲ್ಲೆಯ ತಿರುವಲ್ಲಾದಲ್ಲಿ ಎರಡು ವಿಭಿನ್ನ ಸ್ಥಳಗಳಲ್ಲಿ ಹೂಳುವ ಮೊದಲು ಮಹಿಳೆಯರ ಕುತ್ತಿಗೆಯನ್ನು ಸೀಳಿ ಅವರ ದೇಹದ ಭಾಗಗಳನ್ನು ತುಂಡುಗಳಾಗಿ ಕತ್ತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಭಗವಲ್ ಸಿಂಗ್, ಆತನ ಪತ್ನಿ ಲೈಲಾ ಮತ್ತು ರಶೀದ್ ಅಲಿಯಾಸ್ ಮೊಹಮ್ಮದ್ ಶಫಿ ಎಂದು ಗುರುತಿಸಲಾಗಿದೆ. ಸಿಂಗ್ ಮತ್ತು ಲೈಲಾ ತಿರುವಲ್ಲಾ ನಿವಾಸಿಗಳಾಗಿದ್ದರೆ, ಶಫಿ ಪೆರುಂಬವೂರ್‌ನವರು ಬಲಿ ನೀಡಲಾಗಿದೆ ಎಂದು ಹೇಳಲಾದ ದಂಪತಿಗಳ ಮನೆಗೆ ಸಂತ್ರಸ್ತರನ್ನು ಶಫಿ ಕರೆತಂದಿರುವ ಶಂಕೆ ಇದೆ ಎಂದು ವರದಿ ಹೇಳಿದೆ.

ಕೊಚ್ಚಿ ನಗರ ಪೊಲೀಸ್ ಕಮಿಷನರ್ ನಾಗರಾಜು ಚಕಿಲಂ ಪಿಟಿಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದು, ಮೃತ ಮಹಿಳೆಯರ ಶವಗಳನ್ನು ಹೊರತೆಗೆಯಲು ಪೊಲೀಸ್ ತಂಡವು ಶೀಘ್ರದಲ್ಲೇ ತಿರುವಲ್ಲಾ ತಲುಪಲಿದೆ ಎಂದಿದ್ದಾರೆ. ಕಡವಂತರಾದಿಂದ ನಾಪತ್ತೆಯಾದ ಮಹಿಳೆಗೆ ಸಂಬಂಧಿಸಿದಂತೆ ನಾವು ತನಿಖೆ ನಡೆಸಿದಾಗ, ಆಕೆಯನ್ನು ತಿರುವಲ್ಲಾದ ಆ ದಂಪತಿಯ ಮನೆಯಲ್ಲಿ ಕೊಂದು ಆಕೆಯ ದೇಹವನ್ನು ತುಂಡು ತುಂಡಾಗಿ ಅಲ್ಲಿಯೇ ಹೂಳಲಾಗಿದೆ ಎಂದು ನಮಗೆ ತಿಳಿದುಬಂದಿತು. ಇದು ದಂಪತಿಯ ಆರ್ಥಿಕ ಲಾಭಕ್ಕಾಗಿ ನರಬಲಿಯಾಗಿದೆ ಎಂದು  ಚಕಿಲಂ ಹೇಳಿದರು.

ಹೆಚ್ಚಿನ ವಿಚಾರಣೆಯಲ್ಲಿ, ಇದು ಏಕೈಕ ಪ್ರಕರಣವಲ್ಲ ಎಂದು ಕಂಡುಬಂದಿದೆ. ಜೂನ್‌ನಲ್ಲಿ ಅದೇ ಮನೆಯಲ್ಲಿ ಎರಡನೇ ಮಹಿಳೆಯನ್ನು ಸಹ ಇದೇ ರೀತಿ ಬಲಿ ಕೊಡಲಾಗಿದೆ ಮಾಡಲಾಗಿದೆ. ಈ ಭಯಾನಕ ಪ್ರಕರಣಗಳಲ್ಲಿ ಶಫಿ ಏಜೆಂಟ್ ಪಾತ್ರವನ್ನು ವಹಿಸಿದ್ದಲ್ಲದೆ, ನರಬಲಿ ಮಾಡಬೇಕೆಂದು ದಂಪತಿಗೆ ಮನವರಿಕೆ ಮಾಡಿಕೊಟ್ಟಿದ್ದಾನೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Published On - 5:27 pm, Tue, 11 October 22

ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಹೆಂಡತಿ, ಮಕ್ಕಳೊಂದಿಗೆ ಮಧುಸೂದನ್ ಭಾನುವಾರ ಕಾಶ್ಮೀರ ಪ್ರವಾಸ ತೆರಳಿದ್ದರು
ಹೆಂಡತಿ, ಮಕ್ಕಳೊಂದಿಗೆ ಮಧುಸೂದನ್ ಭಾನುವಾರ ಕಾಶ್ಮೀರ ಪ್ರವಾಸ ತೆರಳಿದ್ದರು
ಉಗ್ರರು ಹಿಂದೂಗಳನ್ನೇ ಹುಡುಕಿ ದಾಳಿ ಮಾಡಿದ್ದು ಆಘಾತಕಾರಿ ಎಂದ ಪರಮೇಶ್ವರ್
ಉಗ್ರರು ಹಿಂದೂಗಳನ್ನೇ ಹುಡುಕಿ ದಾಳಿ ಮಾಡಿದ್ದು ಆಘಾತಕಾರಿ ಎಂದ ಪರಮೇಶ್ವರ್
ಫಾರ್ಮ್​ಹೌಸ್​ನಲ್ಲಿ ಎತ್ತಿನಗಾಡಿ ಓಡಿಸಿದ ನಟ ದರ್ಶನ್; ದಾಸನ ಜಾಲಿ ಮೂಡ್
ಫಾರ್ಮ್​ಹೌಸ್​ನಲ್ಲಿ ಎತ್ತಿನಗಾಡಿ ಓಡಿಸಿದ ನಟ ದರ್ಶನ್; ದಾಸನ ಜಾಲಿ ಮೂಡ್
VIDEO: ಝಹೀರ್ ಖಾನ್ - ರಿಷಭ್ ಪಂತ್ ನಡುವೆ ಮಾತಿನ ಚಕಮಕಿ
VIDEO: ಝಹೀರ್ ಖಾನ್ - ರಿಷಭ್ ಪಂತ್ ನಡುವೆ ಮಾತಿನ ಚಕಮಕಿ
ನಿನ್ನೆ ಮಧ್ಯಾಹ್ನದಿಂದ ಪಲ್ಲವಿ ಅನುಭವಿಸಿರುವ ಯಾತನೆ ಪದಗಳಲ್ಲಿ ಹೇಳಲಾಗದು
ನಿನ್ನೆ ಮಧ್ಯಾಹ್ನದಿಂದ ಪಲ್ಲವಿ ಅನುಭವಿಸಿರುವ ಯಾತನೆ ಪದಗಳಲ್ಲಿ ಹೇಳಲಾಗದು
Video: ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯ ವಿಡಿಯೋ ಇಲ್ಲಿದೆ
Video: ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯ ವಿಡಿಯೋ ಇಲ್ಲಿದೆ
VIDEO: ಮೈದಾನದಲ್ಲೇ ಸಹ ಆಟಗಾರನಿಗೆ ಏಟು: ಕುಸಿದು ಬಿದ್ದ ವಿಕೆಟ್ ಕೀಪರ್..!
VIDEO: ಮೈದಾನದಲ್ಲೇ ಸಹ ಆಟಗಾರನಿಗೆ ಏಟು: ಕುಸಿದು ಬಿದ್ದ ವಿಕೆಟ್ ಕೀಪರ್..!
ಬರೋಬ್ಬರಿ 27 ಕೋಟಿ ರೂ... LSG ತಂಡದಲ್ಲಿ ಮೂಲೆಗುಂಪಾದ ರಿಷಭ್ ಪಂತ್
ಬರೋಬ್ಬರಿ 27 ಕೋಟಿ ರೂ... LSG ತಂಡದಲ್ಲಿ ಮೂಲೆಗುಂಪಾದ ರಿಷಭ್ ಪಂತ್
VIDEO: ನಾನೇ ಕೆಎಲ್ ರಾಹುಲ್... LSGಗೆ ಕನ್ನಡಿಗನ ತಿರುಗೇಟು
VIDEO: ನಾನೇ ಕೆಎಲ್ ರಾಹುಲ್... LSGಗೆ ಕನ್ನಡಿಗನ ತಿರುಗೇಟು