AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶವಾಸಿಗಳನ್ನುದ್ದೇಶಿಸಿ ಮೋದಿ ಮನ್ ಕಿ ಬಾತ್..

ದೆಹಲಿ: ಲಾಕ್​​ಡೌನ್ ಅನ್​ಲಾಕ್​ ಬಳಿಕ ಪಿಎಂ ನರೇಂದ್ರ ಮೋದಿ ಮೊದಲ ಬಾರಿಗೆ ಮನ್​ ಕಿ ಬಾತ್​​ನಲ್ಲಿ ದೇಶವಾಸಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ. ಕೊರೊನಾ ವಿರುದ್ಧ ಭಾರತ ಸೂಕ್ತವಾಗಿ ಹೋರಾಡುತ್ತಿದೆ. ದೇಶದ ಆರ್ಥಿಕತೆ ಅಭಿವೃದ್ಧಿಗೆ ಎಲ್ಲ ಅವಕಾಶಗಳು ತೆರೆದಿವೆ. ಮುಂಜಾಗ್ರತಾ ಕ್ರಮಗಳ ಜತೆ ವಿಮಾನಗಳ ಹಾರಾಟ ಶುರು ಮಾಡಲಾಗಿದೆ. ಮನೆಯಿಂದ ಯಾರೂ ಅನಗತ್ಯವಾಗಿ ಹೊರಗೆ ಬರಬೇಡಿ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಿ. ದೇಶದ ಜನ ತೋರಿಸಿದ ಸೇವಾ ಭಾವನೆ ನಮಗೆ ಆದರ್ಶವಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೊನಾದಿಂದ […]

ದೇಶವಾಸಿಗಳನ್ನುದ್ದೇಶಿಸಿ ಮೋದಿ ಮನ್ ಕಿ ಬಾತ್..
ಆಯೇಷಾ ಬಾನು
|

Updated on:May 31, 2020 | 2:24 PM

Share

ದೆಹಲಿ: ಲಾಕ್​​ಡೌನ್ ಅನ್​ಲಾಕ್​ ಬಳಿಕ ಪಿಎಂ ನರೇಂದ್ರ ಮೋದಿ ಮೊದಲ ಬಾರಿಗೆ ಮನ್​ ಕಿ ಬಾತ್​​ನಲ್ಲಿ ದೇಶವಾಸಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ.

ಕೊರೊನಾ ವಿರುದ್ಧ ಭಾರತ ಸೂಕ್ತವಾಗಿ ಹೋರಾಡುತ್ತಿದೆ. ದೇಶದ ಆರ್ಥಿಕತೆ ಅಭಿವೃದ್ಧಿಗೆ ಎಲ್ಲ ಅವಕಾಶಗಳು ತೆರೆದಿವೆ. ಮುಂಜಾಗ್ರತಾ ಕ್ರಮಗಳ ಜತೆ ವಿಮಾನಗಳ ಹಾರಾಟ ಶುರು ಮಾಡಲಾಗಿದೆ. ಮನೆಯಿಂದ ಯಾರೂ ಅನಗತ್ಯವಾಗಿ ಹೊರಗೆ ಬರಬೇಡಿ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಿ. ದೇಶದ ಜನ ತೋರಿಸಿದ ಸೇವಾ ಭಾವನೆ ನಮಗೆ ಆದರ್ಶವಾಗಿದೆ.

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೊನಾದಿಂದ ಮೃತಪಟ್ಟವರ ಸಾವಿನ ಸಂಖ್ಯೆ ಕಡಿಮೆ. ಕೊರೊನಾ ವಾರಿಯರ್ಸ್‌ ನಿರಂತರ ಸೇವೆಯಲ್ಲಿ ತೊಡಗಿದ್ದಾರೆ. ಸಂಕಷ್ಟದ ಈ ಸಮಯದಲ್ಲಿ ಕೆಲಸಕ್ಕೆ ಹೊಸ ಹೊಸ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ.

ಸಾವಿರಾರು ಜನರು ಇತರರ ಸೇವೆಯಲ್ಲಿ ತೊಡಗಿದ್ದಾರೆ. ಕೊರೊನಾಗೆ ಔಷಧ ಕಂಡುಹಿಡಿಯಲು ಸಂಶೋಧನೆಗಳು ನಡೆಯುತ್ತಿವೆ. ಕೊರೊನಾದಿಂದ ಎಲ್ಲರೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಬಡವರಿಗೆ ಅಗತ್ಯ ವಸ್ತು ಪೂರೈಸಲು ಎಲ್ಲ ರೀತಿ ಪ್ರಯತ್ನ ಮಾಡಲಾಗುತ್ತಿದೆ. ಲಕ್ಷಾಂತರ ಕಾರ್ಮಿಕರನ್ನು ಅವರವರ ಮನೆ ತಲುಪಿಸಿದ್ದೇವೆ.

ಪೂರ್ವ ಭಾರತದ ಅಭಿವೃದ್ಧಿಗೆ ಹೆಚ್ಚಿನ ಒತ್ತು: ಪೂರ್ವ ಭಾರತದ ಅಭಿವೃದ್ಧಿ ಅತ್ಯವಶ್ಯಕವಾಗಿದೆ. ಹೀಗಾಗಿ ಪೂರ್ವ ಭಾರತದ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಲಾಗುತ್ತೆ. ಜನರು ಹೆಚ್ಚಾಗಿ ಸ್ವದೇಶಿ ವಸ್ತುಗಳನ್ನೇ ಖರೀದಿಸುತ್ತಿದ್ದಾರೆ. ಜನರಿಂದಲೇ ‘ವೋಕಲ್ ಫಾರ್ ಲೋಕಲ್‌’ ಪ್ರಚಾರ. ಕೊರೊನಾ ವಿರುದ್ಧದ ಹೋರಾಟದಲ್ಲಿ ಯೋಗ ಹಾಗೂ ಆಯುರ್ವೇದ ಕ್ರಮಗಳು ಸಹಕಾರಿಯಾಗಿವೆ.

ಬಡವರಿಗಾಗಿ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೊಳಿಸಿದ್ದೇವೆ. 1 ಕೋಟಿಗೂ ಹೆಚ್ಚು ಜನರು ಇದರ ಲಾಭ ಪಡೆದಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ನಿರತರಾಗಿರುವ ವೈದ್ಯರು, ನರ್ಸ್‌ಗಳಿಗೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದರು.

ಪರಿಸರ ದಿನದಂದು ಒಂದೊಂದು ಗಿಡ ನೆಡಿ: ಲಾಕ್‌ಡೌನ್‌ನಿಂದ ಈಗ ಪಕ್ಷಿಗಳ ಕಲರವ ಕೇಳುತ್ತಿದ್ದೇವೆ. ಮಳೆ ನೀರನ್ನು ಸಂರಕ್ಷಣೆ ಮಾಡಿ. ಪರಿಸರ ದಿನದಂದು ಎಲ್ಲರೂ ಒಂದೊಂದು ಗಿಡ ನೆಡಬೇಕು. ಜನರು ಪ್ರಾಣಿ ಪಕ್ಷಿಗಳಿಗಾಗಿ ನೀರಿನ ವ್ಯವಸ್ಥೆ ಮಾಡಬೇಕು ಎಂದು ಮನ್ ಕೀ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Published On - 11:08 am, Sun, 31 May 20