ಲೋಕಸಭಾ ಚುನಾವಣೆ 2024: ಮತದಾನದ ಬಗ್ಗೆ ಅರಿವು ಮೂಡಿಸಿದ ಬಾಲಿವುಡ್​ ಕಲಾವಿದರ ವಿಡಿಯೋ ಹಂಚಿಕೊಂಡ ಮೋದಿ

|

Updated on: May 07, 2024 | 10:47 AM

2024 ರ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಪ್ರಾರಂಭವಾಗಿದೆ, ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಗೆ ಮುನ್ನ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಟ್ವೀಟ್ ಅನ್ನು ಮರುಟ್ವೀಟ್ ಮಾಡಿದ್ದಾರೆ. ಮಂಗಳವಾರ, ಪ್ರಧಾನಿ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಎಕ್ಸ್‌ಗೆ ತೆಗೆದುಕೊಂಡು ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದಾರೆ.

ಲೋಕಸಭಾ ಚುನಾವಣೆ 2024: ಮತದಾನದ ಬಗ್ಗೆ ಅರಿವು ಮೂಡಿಸಿದ ಬಾಲಿವುಡ್​ ಕಲಾವಿದರ ವಿಡಿಯೋ ಹಂಚಿಕೊಂಡ ಮೋದಿ
ನರೇಂದ್ರ ಮೋದಿ
Image Credit source: Business Standard
Follow us on

2024 ರ ಲೋಕಸಭೆ ಚುನಾವಣೆ(Lok Sabha Election)ಯ ಮೂರನೇ ಹಂತದ ಮತದಾನ ಪ್ರಾರಂಭವಾಗಿದೆ, ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಗೆ ಮುನ್ನ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಿದ ಬಾಲಿವುಡ್ ಕಲಾವಿದರ ಟ್ವೀಟ್​ ರೀಟ್ವೀಟ್​ ಮಾಡಿದ್ದಾರೆ.

ಪ್ರಧಾನಿ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಎಕ್ಸ್‌ ಖಾತೆಯಿಂದ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರನ್ನು ರೀಟ್ವೀಟ್ ಮಾಡಿದ್ದಾರೆ. ಲೋಕಸಭೆ ಮೂರನೇ ಹಂತದ ಚುನಾವಣೆಯಲ್ಲಿ ಮತದಾನ ಮಾಡುವಂತೆ ಜನರನ್ನು ಒತ್ತಾಯಿಸಿದ ಟ್ವೀಟ್​ ಅದಾಗಿತ್ತು.

ನಟ ವಿಕ್ರಾಂತ್ ಮಾಸ್ಸೆ, ರಣಬೀರ್ ಕಪೂರ್, ಸಿದ್ಧಾರ್ಥ್ ಮಲ್ಹೋತ್ರಾ, ನೇಹಾ ಕಕ್ಕರ್, ಕರಣ್ ಜೋಹರ್ ಮತ್ತು ಅನೇಕರು ಸೇರಿದಂತೆ ಬಾಲಿವುಡ್​ನ ವಿವಿಧ ತಾರೆಯರನ್ನು ಒಳಗೊಂಡ X ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಕಂಡು ಬಂತು.

ಎಲ್ಲ ಸೆಲೆಬ್ರಿಟಿಗಳನ್ನು ಒಳಗೊಂಡ ವಿಡಿಯೋದಲ್ಲಿ ದೇಶದ ಜನತೆ ಸೆಲೆಬ್ರಿಟಿಗಳು ಪ್ರಜಾಪ್ರಭುತ್ವದ ಆಚರಣೆಯಾದ ಮತದಾನದ ದಿನದಂದು ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ. 2024 ರ ಲೋಕಸಭೆ ಚುನಾವಣೆಯಲ್ಲಿ ನಾಗರಿಕರಿಗೆ ಜಾಗೃತಿ ಮೂಡಿಸಲು ಮತ್ತು ಮತ ಚಲಾಯಿಸಲು ಪ್ರಧಾನಿ ಮೋದಿ ಈ ಟ್ವೀಟ್​ ಅನ್ನು ರಿ ಟ್ವೀಟ್​ ಮಾಡಿದ್ದಾರೆ.

ವಿಡಿಯೋ

ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ಇಂದು ಆರಂಭಗೊಂಡಿದ್ದು, 10 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 94 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ, ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಜೌರಿ ಕ್ಷೇತ್ರದಲ್ಲಿ ಮೇ 25 ರಂದು ಚುನಾವಣೆ ನಿಗದಿಯಾಗಿದೆ.

ಮತ್ತಷ್ಟು ಓದಿ: ಪ್ರಜಾಪ್ರಭುತ್ವ ಬಲಪಡಿಸುವ ಶಕ್ತಿ ನಿಮ್ಮ ಕೈಲಿದೆ ಎಂದು ಹೇಳುತ್ತಾ ಜನರತ್ತ ಕೈ ಬೀಸಿದ ಪ್ರಧಾನಿ ಮೋದಿ

ಈ ಹಂತದಲ್ಲಿ, ಮತದಾರರು ಗೋವಾದಲ್ಲಿ 2, ಗುಜರಾತ್‌ನಲ್ಲಿ 24, ಛತ್ತೀಸ್‌ಗಢದಲ್ಲಿ 7 ಮತ್ತು ಕರ್ನಾಟಕದಲ್ಲಿ 14 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ.

ಏಪ್ರಿಲ್ 26 ರಂದು ಎರಡನೇ ಹಂತದ ಚುನಾವಣೆಯಲ್ಲಿ ಕರ್ನಾಟಕದ 14 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇಂದು ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯುವಿನ ಎರಡು ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಇದಲ್ಲದೆ ಅಸ್ಸಾಂನ 4, ಬಿಹಾರದ 5, ಛತ್ತೀಸ್‌ಗಢದ 7, ಮಧ್ಯಪ್ರದೇಶದ 8, ಮಹಾರಾಷ್ಟ್ರದ 11, ಉತ್ತರ ಪ್ರದೇಶದ 10 ಮತ್ತು ಪಶ್ಚಿಮ ಬಂಗಾಳದ 4 ಸ್ಥಾನಗಳಿಗೆ ಮತದಾನ ನಡೆಯಲಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ