AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭೆ ಚುನಾವಣೆ: ಮೇ 7ರಂದು 3ನೇ ಹಂತದ ಮತದಾನ, ಕರ್ನಾಟಕದ ಯಾವ ಕ್ಷೇತ್ರಗಳಿಗೆ ವೋಟಿಂಗ್? ಇಲ್ಲಿದೆ ವಿವರ

Lok Sabha Elections Phase 3 polls: ಲೋಕಸಭೆ ಚುನಾವಣೆ ಮೊದಲ ಹಾಗೂ ಎರಡನೇ ಹಂತದ ಮತದಾನ ಕ್ರಮವಾಗಿ ಏಪ್ರಿಲ್ 19ರಂದು ಮತ್ತು ಏಪ್ರಿಲ್ 26ರಂದು ನಡೆದಿದೆ. 2ನೇ ಹಂತದಲ್ಲಿ ಕರ್ನಾಟಕದ ದಕ್ಷಿಣದ ಜಿಲ್ಲೆಗಳ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನವಾಗಿತ್ತು. ಇದೀಗ ಮೇ 7ರಂದು ಯಾವೆಲ್ಲ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ ಎಂಬ ವಿವರ ಇಲ್ಲಿದೆ.

ಲೋಕಸಭೆ ಚುನಾವಣೆ: ಮೇ 7ರಂದು 3ನೇ ಹಂತದ ಮತದಾನ, ಕರ್ನಾಟಕದ ಯಾವ ಕ್ಷೇತ್ರಗಳಿಗೆ ವೋಟಿಂಗ್? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:May 06, 2024 | 12:24 PM

ಬೆಂಗಳೂರು, ಮೇ 6: ಲೋಕಸಭೆ ಚುನಾವಣೆಯ (Lok Sabha Elections) ಮೂರನೇ ಹಂತದ ಮತದಾನ ಮೇ 7ರಂದು ಮಂಗಳವಾರ ನಡೆಯಲಿದ್ದು, ಕರ್ನಾಟಕದ 14 ಕ್ಷೇತ್ರಗಳಲ್ಲಿ ವೋಟಿಂಗ್ ನಡೆಯಲಿದೆ. ಕರ್ನಾಟಕದಲ್ಲಿ ಇದು ಎರಡನೇ ಹಂತದ ಮತದಾನವಾಗಿದೆ. ಮೊದಲ ಹಂತದಲ್ಲಿ ರಾಜ್ಯದ 14 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇದೀಗ ಮೂರನೇ ಹಂತದಲ್ಲಿ 11 ರಾಜ್ಯಗಳ 92 ಸ್ಥಾನಗಳಿಗೆ ಮತದಾನ ನಡೆಯಲಿದೆ. ಈ ಹಂತದಲ್ಲಿ ಒಟ್ಟು 1300 ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದು, ಅವರಲ್ಲಿ ಸುಮಾರು 120 ಮಹಿಳೆಯರಾಗಿದ್ದಾರೆ.

ಕರ್ನಾಟಕದ ಯಾವೆಲ್ಲ ಕ್ಷೇತ್ರಗಳಲ್ಲಿ ಮತದಾನ?

  • ಬಾಗಲಕೋಟೆ
  • ಬೆಳಗಾವಿ
  • ಬಳ್ಳಾರಿ
  • ಬೀದರ್
  • ವಿಜಯಪುರ
  • ಚಿಕ್ಕೋಡಿ
  • ದಾವಣಗೆರೆ
  • ಧಾರವಾಡ
  • ಹಾವೇರಿ
  • ಕೊಪ್ಪಳ
  • ಗುಲ್ಬರ್ಗ
  • ರಾಯಚೂರು
  • ಶಿವಮೊಗ್ಗ
  • ಉತ್ತರ ಕನ್ನಡ

ಮತದಾನದ ಸಮಯ

ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದ್ದು, ಸಂಜೆ 6ರ ವರೆಗೆ ನಡೆಯಲಿದೆ. ಸಂಜೆ 6 ಗಂಟೆಯ ಒಳಗೆ ಮತಗಟ್ಟೆಗೆ ಬಂದವರಿಗೆ 6ರ ನಂತರವೂ ಅವಕಾಶ ದೊರೆಯಲಿದೆ.

ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ಶೇಕಡಾ 69.56 ರಷ್ಟು ಮತದಾನವಾಗಿತ್ತು. ಮಂಡ್ಯದಲ್ಲಿ (ಶೇ 81.67), ಕೋಲಾರದಲ್ಲಿ (ಶೇ 78.27) ಮತ್ತು ತುಮಕೂರಿನಲ್ಲಿ (ಶೇ 78.05 ರಷ್ಟು) ಅತಿ ಹೆಚ್ಚು ಮತದಾನವಾಗಿತ್ತು. ಬೆಂಗಳೂರು ಸೆಟ್ರಲ್​​​ನಲ್ಲಿ ಶೇ 54.06, ಬೆಂಗಳೂರು ದಕ್ಷಿಣದಲ್ಲಿ ಶೇ 53.17, ಬೆಂಗಳೂರು ಉತ್ತರದಲ್ಲಿ ಶೇ 54.45 ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಶೇ 68.30ರಷ್ಟು ಮತದಾನವಾಗಿತ್ತು.

3ನೇ ಹಂತದಲ್ಲಿ ಯಾವ ರಾಜ್ಯಗಳ ಎಷ್ಟು ಸ್ಥಾನಗಳಿಗೆ ಚುನಾವಣೆ?

ಮೂರನೇ ಹಂತದಲ್ಲಿ ಗುಜರಾತ್​​ನ 25, ಕರ್ನಾಟಕದ 14, ಮಹಾರಾಷ್ಟ್ರದ 11, ಮಧ್ಯಪ್ರದೇಶದ 8, ಛತ್ತೀಸ್‌ಗಢದ 7, ಬಿಹಾರದ 5, ಅಸ್ಸಾಂನ 4, ಉತ್ತರ ಪ್ರದೇಶದ 10, ಪಶ್ಚಿಮ ಬಂಗಾಳದ 4, ಗೋವಾದ 2, ದಾದರ್-ನಗರ ಹವೇಲಿಯ 2 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಕಣದಲ್ಲಿರುವ ಪ್ರಮುಖರಿವರು

ಮೂರನೇ ಹಂತದಲ್ಲಿ ಕೇಂದ್ರ ಸಚಿವ ಅಮಿತ್ ಶಾ (ಗಾಂಧಿನಗರ), ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (ಗುಣಾ), ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ (ಪೋರಬಂದರ್), ಕೇಂದ್ರ ಸಚಿವ ಪರ್ಷೋತ್ತಮ್ ರೂಪಾಲಾ (ರಾಜ್​ಕೋಟ್) ಸೇರಿದಂತೆ ಹಲವು ಹಿರಿಯ ನಾಯಕರ ಭವಿಷ್ಯ ಮತಯಂತ್ರ ಸೇರಲಿದೆ.

ಇದನ್ನೂ ಓದಿ: ಮತದಾನ ಮಾಡಿ ಗುರುತು ತೋರ್ಸಿದ್ರೆ ಈ ಬಾರ್​ನಲ್ಲಿ ಸಿಗಲಿದೆ ಸ್ಪೆಷಲ್ ಡಿಸ್ಕೌಂಟ್!

ಜೂನ್ 1ರಂದು ಅಂತಿಮ ಹಂತದ ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಅಂದೇ ಫಲಿತಾಂಶವೂ ಪ್ರಕಟಗೊಳ್ಳಲಿದೆ.

ಚುನಾವಣೆ ಸಂಬಂಧಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:21 pm, Mon, 6 May 24

VIDEO: 5 ವರ್ಷದ ಪೋರನ ಸ್ಫೋಟಕ ಬ್ಯಾಟಿಂಗ್ ನೀವು ನೋಡಲೇಬೇಕು
VIDEO: 5 ವರ್ಷದ ಪೋರನ ಸ್ಫೋಟಕ ಬ್ಯಾಟಿಂಗ್ ನೀವು ನೋಡಲೇಬೇಕು
ನಟಿ ಪ್ರೇಮಾ ಈಗಲೂ ಹೇಗೆ ಡ್ಯಾನ್ಸ್ ಮಾಡ್ತಾರೆ ನೋಡಿ; ಇಲ್ಲಿದೆ ವಿಡಿಯೋ
ನಟಿ ಪ್ರೇಮಾ ಈಗಲೂ ಹೇಗೆ ಡ್ಯಾನ್ಸ್ ಮಾಡ್ತಾರೆ ನೋಡಿ; ಇಲ್ಲಿದೆ ವಿಡಿಯೋ
ಹುಲಿಗಳನ್ನು ಕೊಂದ ಅಪರಾಧಿಗಳಿಗೆ ಡಬಲ್ ಶಿಕ್ಷೆಯಾಗಲಿದೆ: ಅರಣ್ಯಾಧಿಕಾರಿ
ಹುಲಿಗಳನ್ನು ಕೊಂದ ಅಪರಾಧಿಗಳಿಗೆ ಡಬಲ್ ಶಿಕ್ಷೆಯಾಗಲಿದೆ: ಅರಣ್ಯಾಧಿಕಾರಿ
VIDEO: ಕೊನೆಯ ಎಸೆತದಲ್ಲಿ ಸಿಕ್ಸ್​... ದಾಖಲೆಯ ರನ್ ಚೇಸ್​..!
VIDEO: ಕೊನೆಯ ಎಸೆತದಲ್ಲಿ ಸಿಕ್ಸ್​... ದಾಖಲೆಯ ರನ್ ಚೇಸ್​..!
ಗರ್ಭವತಿಯಾದ ಹೆಣ್ಣಿನ ಸಂತೋಷ ಕುಟುಂಬಕ್ಕೆ ಸರ್ವಶುಭಮಂಗಳ ಹೇಗೆ?
ಗರ್ಭವತಿಯಾದ ಹೆಣ್ಣಿನ ಸಂತೋಷ ಕುಟುಂಬಕ್ಕೆ ಸರ್ವಶುಭಮಂಗಳ ಹೇಗೆ?
Daily Horoscope: ಈ ರಾಶಿಯವರು ಆತುರದಲ್ಲಿ ಏನನ್ನಾದರೂ ಮಾಡಲು ಹೋಗದಿರಿ
Daily Horoscope: ಈ ರಾಶಿಯವರು ಆತುರದಲ್ಲಿ ಏನನ್ನಾದರೂ ಮಾಡಲು ಹೋಗದಿರಿ
ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ