AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭೆ ಚುನಾವಣೆ: ಇಂದು ಸೀಟು ಹಂಚಿಕೆ ಕುರಿತು ಆಮ್​ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್​ ಸಭೆ

ದೆಹಲಿ, ಪಂಜಾಬ್​ ಮಾತ್ರವಲ್ಲದೆ ಆಮ್​ ಆದ್ಮಿ ಪಕ್ಷ(Aam Admi Party)ದ ಕಣ್ಣು ಬೇರೆ ರಾಜ್ಯಗಳ ಮೇಲೂ ಇದೆ. ಈ ಹಿನ್ನೆಲೆಯಲ್ಲಿ ಸೀಟು ಹಂಚಿಕೆ ಕುರಿತು ಕಾಂಗ್ರೆಸ್​ ಜತೆ ಆಮ್​ ಆದ್ಮಿ ಪಕ್ಷ ಇಂದು ಸಭೆ ನಡೆಸಲಿದೆ. ಭಾರತ ಮೈತ್ರಿಕೂಟದಲ್ಲಿರುವ ತನ್ನ ಮಿತ್ರಪಕ್ಷಗಳೊಂದಿಗೆ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆಗಾಗಿ ಕಾಂಗ್ರೆಸ್ ಸೂತ್ರವನ್ನು ರೂಪಿಸಲು ಪ್ರಾರಂಭಿಸಿದೆ.

ಲೋಕಸಭೆ ಚುನಾವಣೆ: ಇಂದು ಸೀಟು ಹಂಚಿಕೆ ಕುರಿತು ಆಮ್​ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್​ ಸಭೆ
ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್
ನಯನಾ ರಾಜೀವ್
|

Updated on: Jan 08, 2024 | 11:36 AM

Share

ದೆಹಲಿ, ಪಂಜಾಬ್​ ಮಾತ್ರವಲ್ಲದೆ ಆಮ್​ ಆದ್ಮಿ ಪಕ್ಷ(Aam Admi Party)ದ ಕಣ್ಣು ಬೇರೆ ರಾಜ್ಯಗಳ ಮೇಲೂ ಇದೆ. ಈ ಹಿನ್ನೆಲೆಯಲ್ಲಿ ಸೀಟು ಹಂಚಿಕೆ ಕುರಿತು ಕಾಂಗ್ರೆಸ್​ ಜತೆ ಆಮ್​ ಆದ್ಮಿ ಪಕ್ಷ ಇಂದು ಸಭೆ ನಡೆಸಲಿದೆ. ಭಾರತ ಮೈತ್ರಿಕೂಟದಲ್ಲಿರುವ ತನ್ನ ಮಿತ್ರಪಕ್ಷಗಳೊಂದಿಗೆ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆಗಾಗಿ ಕಾಂಗ್ರೆಸ್ ಸೂತ್ರವನ್ನು ರೂಪಿಸಲು ಪ್ರಾರಂಭಿಸಿದೆ. ಬಿಹಾರಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ನಾಯಕರೊಂದಿಗಿನ ಸಭೆಯ ನಂತರ, ದೆಹಲಿ ಮತ್ತು ಪಂಜಾಬ್‌ನಲ್ಲಿ ಸೀಟು ಹಂಚಿಕೆಗಾಗಿ ಕಾಂಗ್ರೆಸ್ ನಾಯಕರು ಸೋಮವಾರ ಆಮ್ ಆದ್ಮಿ ಪಕ್ಷದೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂದೀಪ್ ಪಾಠಕ್, ದೆಹಲಿ ಸರ್ಕಾರದ ಸಚಿವರಾದ ಸೌರಭ್ ಭಾರದ್ವಾಜ್ ಮತ್ತು ಅತಿಶಿ ಅವರು ಮುಕುಲ್ ವಾಸ್ನಿಕ್ ನೇತೃತ್ವದ ಕಾಂಗ್ರೆಸ್‌ನ ಐದು ಸದಸ್ಯರ ಸಮಿತಿಯೊಂದಿಗೆ ಸೀಟು ಹಂಚಿಕೆ ಕುರಿತು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಈ ಸಮಯದಲ್ಲಿ, ದೆಹಲಿ ಮತ್ತು ಪಂಜಾಬ್‌ನ 20 ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಸೀಟು ಹಂಚಿಕೆ ಕುರಿತು ಚರ್ಚೆ ನಡೆಯಬೇಕಾಗಿತ್ತು, ಆದರೆ ಅರವಿಂದ್ ಕೇಜ್ರಿವಾಲ್ ಗುಜರಾತ್‌ನ ಒಂದು ಸ್ಥಾನಕ್ಕೆ ತಮ್ಮ ಅಭ್ಯರ್ಥಿಯನ್ನು ಘೋಷಿಸಿದ್ದರು.

ಮತ್ತಷ್ಟು ಓದಿ:ಲೋಕಸಭಾ ಚುನಾವಣೆ: ಉತ್ತರ ಪ್ರದೇಶದ 40, ಬಿಹಾರದ 12 ಸೀಟುಗಳ ಮೇಲೆ ಕಾಂಗ್ರೆಸ್​ ಕಣ್ಣು

ದೆಹಲಿ ಮಾತ್ರವಲ್ಲ, ಆಮ್ ಆದ್ಮಿ ಪಕ್ಷವು ಚುನಾಯಿತ ಪ್ರತಿನಿಧಿಗಳು ಮತ್ತು ಸಂಘಟನೆಗಳನ್ನು ಹೊಂದಿರುವ ಎಲ್ಲಾ ರಾಜ್ಯಗಳ ಬಗ್ಗೆ ಇಂದು ಚರ್ಚೆ ನಡೆಯಲಿದೆ ಎಂದು ಸಂದೀಪ್ ಪಾಠಕ್ ಹೇಳಿದ್ದಾರೆ. ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಸಮಸ್ಯೆಯನ್ನು ಬಗೆಹರಿಸುವುದು ಸುಲಭವಲ್ಲ, ಏಕೆಂದರೆ ಎರಡೂ ರಾಜ್ಯಗಳಲ್ಲಿ ಆಮ್ ಆದ್ಮಿ ಪಕ್ಷದ ಪ್ರಾಬಲ್ಯವಿದೆ.

ಆಮ್ ಆದ್ಮಿ ಪಕ್ಷ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್‌ನಿಂದ ಅಧಿಕಾರವನ್ನು ಕಸಿದುಕೊಂಡಿದೆ. ಇದರಿಂದಾಗಿ ಉಭಯ ಪಕ್ಷಗಳ ನಡುವೆ ರಾಜಕೀಯ ಜಗಳ ಮುಂದುವರಿದಿದೆ. ಇದರ ಹೊರತಾಗಿಯೂ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪೈಪೋಟಿ ನೀಡಲು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಕೈಜೋಡಿಸಿದ್ದು, ಈಗ ಸೀಟು ಹಂಚಿಕೆಗಾಗಿ ಒಟ್ಟಿಗೆ ಸಭೆ ನಡೆಸಿ ಒಮ್ಮತಕ್ಕೆ ಬರಲು ಪ್ರಯತ್ನಗಳು ನಡೆಯುತ್ತಿವೆ.

ಹೀಗಿರುವಾಗ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಖಾತೆಗೆ ಎಷ್ಟು ಸೀಟು ಸೇರಲಿದೆ ಎಂಬುದರ ಮೇಲೆ ಎಲ್ಲರ ಚಿತ್ತವಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ಸೀಟು ಹಂಚಿಕೆ ಕುರಿತು ಕಾಂಗ್ರೆಸ್ ಮಾತುಕತೆ ನಡೆಸಲಿದೆ.  ದೆಹಲಿಯಲ್ಲಿ 7 ಲೋಕಸಭಾ ಸ್ಥಾನಗಳಿವೆ. 2019 ರ ಲೋಕಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳ ನಡುವೆ ಕೇವಲ ಒಂದು ಸ್ಥಾನದ ಕಾರಣದಿಂದಾಗಿ ಮಾತುಕತೆ ಸಫಲವಾಗಿರಲಿಲ್ಲ.

ಏಕೆಂದರೆ ಆಮ್ ಆದ್ಮಿ ಪಕ್ಷವು 5 ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿದ್ದರೆ, ಕಾಂಗ್ರೆಸ್ 3 ಸ್ಥಾನಗಳಿಗೆ ಬೇಡಿಕೆ ಇಟ್ಟಿತ್ತು ಈ ಬಾರಿ ಕಾಂಗ್ರೆಸ್ ಕನಿಷ್ಠ 2 ರಿಂದ ಮೂರು ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸುತ್ತಿದೆ, ಆದರೆ ಆಮ್ ಆದ್ಮಿ ಪಕ್ಷವು ಒಂದರಿಂದ ಎರಡು ಸ್ಥಾನಗಳನ್ನು ಮಾತ್ರ ಬಿಡಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ