ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಏಮ್ಸ್ಗೆ ಕೊವಿಡ್ -19 ಸೆಂಟರ್ಗೆ ದಾಖಲಾಗಿದ್ದಾರೆ. ಓಂ ಬಿರ್ಲಾ ಅವರಲ್ಲಿ ಮಾ.19ರಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಮರುದಿನವೇ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಏಮ್ಸ್ನ ಮಾಧ್ಯಮ ಮತ್ತು ಪ್ರೊಟೋಕಾಲ್ ವಿಭಾಗದ ಮುಖ್ಯಸ್ಥರಾಗಿರುವ ಡಾ. ಆರ್ತಿ ವಿಜ್ ತಿಳಿಸಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಮೊದಲ ಅಲೆಯಲ್ಲಿ ಹಲವು ರಾಜಕಾರಣಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಅದೆಷ್ಟೋ ಗಣ್ಯರನ್ನೂ ಬಲಿಪಡೆದಿದೆ. ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಬರೋಬ್ಬರಿ 43,846 ಹೊಸ ಕೊರೊನಾ ಕೇಸ್ಗಳು ದಾಖಲಾಗಿವೆ. ಕಳೆದ ವರ್ಷ ನವೆಂಬರ್ 25ರ ನಂತರ ಒಂದು ದಿನದಲ್ಲಿ ಇಷ್ಟು ಪ್ರಮಾಣದ ಸೋಂಕಿತರು ಪತ್ತೆಯಾಗಿದ್ದು ಇದೇ ಮೊದಲು. ದೇಶದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1.15ಕೋಟಿಗೆ ಏರಿಕೆಯಾಗಿದೆ. ಹಾಗೇ 3.09 ಲಕ್ಷದಷ್ಟು ಕೊರೊನಾ ಸಕ್ರಿಯ ಪ್ರಕರಣಗಳಿದ್ದು, ಇದುವರೆಗೆ 1.11 ಕೋಟಿ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಅದರಲ್ಲೂ ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಕೇರಳಗಳಲ್ಲಿ ಕೊರೊನಾ ವೇಗವಾಗಿ ಪ್ರಸರಣ ಆಗುತ್ತಿದೆ. ಒಂದೆಡೆ ಲಸಿಕೆ ವಿತರಣೆ ನಡೆಯುತ್ತಿದ್ದರೂ, ಸೋಂಕಿನ ನಿಯಂತ್ರಣ ಕಷ್ಟವಾಗುತ್ತಿದೆ. ಸಾರ್ವಜನಿಕರು ಕೊರೊನಾ ನಿಯಂತ್ರಣ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯಬಾರದು. ಮಾಸ್ಕ್ಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
Lok Sabha Speaker Om Birla tested positive for COVID19 on March 19. He was admitted to AIIMS COVID Centre for observation on March 20. He is stable: AIIMS, Delhi pic.twitter.com/nhook5tr83
— ANI (@ANI) March 21, 2021
ಇದನ್ನೂ ಓದಿ: India vs England: ಏಕದಿನ ಸರಣಿಗಾಗಿ ಇಂಗ್ಲೆಂಡ್ ತಂಡ ಪ್ರಕಟ.. ರೂಟ್, ಆರ್ಚರ್ ಸರಣಿಯಿಂದ ಔಟ್!