Sudha Murthy: ನನ್ನ ಗಂಡನನ್ನು ಉದ್ಯಮಿಯನ್ನಾಗಿ ಮಾಡಿದ್ದೇನೆ, ಮಗಳು ಆಕೆ ಪತಿಯನ್ನು ಪ್ರಧಾನಿ ಮಾಡಿದ್ದಾಳೆ: ಸುಧಾ ಮೂರ್ತಿ

|

Updated on: Apr 28, 2023 | 12:32 PM

ನಾನು ನನ್ನ ಗಂಡನನ್ನು ಉದ್ಯಮಿಯನ್ನಾಗಿ ಮಾಡಿದ್ದೇನೆ, ನನ್ನ ಮಗಳು ಆಕೆ ಗಂಡನನ್ನು ಯುಕೆ ಪ್ರಧಾನಿಯನ್ನಾಗಿ ಮಾಡಿದ್ದಾಳೆ. ಅದಕ್ಕೆ ಕಾರಣ ಹೆಂಡತಿಯ ಮಹಿಮೆ. ಹೆಂಡತಿ ಗಂಡನನ್ನು ಹೇಗೆ ಬದಲಾಯಿಸುತ್ತಾಳೆ ನೋಡಿ.

Sudha Murthy: ನನ್ನ ಗಂಡನನ್ನು ಉದ್ಯಮಿಯನ್ನಾಗಿ ಮಾಡಿದ್ದೇನೆ, ಮಗಳು ಆಕೆ ಪತಿಯನ್ನು ಪ್ರಧಾನಿ ಮಾಡಿದ್ದಾಳೆ: ಸುಧಾ ಮೂರ್ತಿ
Follow us on

ಯುಕೆ ಪ್ರಧಾನಿ ರಿಷಿ ಸುನಕ್ (Rishi Sunak ) ಅವರ ಅತ್ತೆ ಸುಧಾ ಮೂರ್ತಿ (Sudha Murthy) ಅವರು ತಮ್ಮ ಮಗಳು ಅಕ್ಷತಾ ಮೂರ್ತಿ ಅವರ ಬಗ್ಗೆ ಹೆಮ್ಮೆಯಿಂದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ, ತನ್ನ ಮಗಳು ಆಕೆ ಗಂಡನನ್ನು ಬ್ರಿಟನ್​​ ಪ್ರಧಾನಿ ಮಾಡಿದ್ದಾಳೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ, ಇದೀಗ ಅವರ ಈ ಹೇಳಿಕೆ ಎಲ್ಲ ಕಡೆ ಪ್ರಶಂಸೆಗೆ ಕಾರಣವಾಗಿದೆ. ರಿಷಿ ಸುನಕ್ ಅವರು ಅಧಿಕಾರಕ್ಕೆ ಏರಲು ಮತ್ತು ಯುಕೆಯ ಅತ್ಯಂತ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆ ಪಡೆಯಲು ನನ್ನ ಮಗಳು ಕಾರಣ ಎಂದು ಅವರ ಯುಕೆ ಪ್ರಧಾನಿ ಅತ್ತೆ ಸುಧಾ ಮೂರ್ತಿ ಹೇಳಿದ್ದಾರೆ.

ನಾನು ನನ್ನ ಗಂಡನನ್ನು ಉದ್ಯಮಿಯನ್ನಾಗಿ ಮಾಡಿದ್ದೇನೆ, ನನ್ನ ಮಗಳು ಆಕೆ ಗಂಡನನ್ನು ಯುಕೆ ಪ್ರಧಾನಿಯನ್ನಾಗಿ ಮಾಡಿದ್ದಾಳೆ. ಅದಕ್ಕೆ ಕಾರಣ ಹೆಂಡತಿಯ ಮಹಿಮೆ. ಹೆಂಡತಿ ಗಂಡನನ್ನು ಹೇಗೆ ಬದಲಾಯಿಸುತ್ತಾಳೆ ನೋಡಿ. ಆದರೆ ನನ್ನ ಗಂಡನನ್ನು ಬದಲಾಯಿಸಲು ನನಗೆ ಸಾಧ್ಯವಾಗಲಿಲ್ಲ. ನಾನು ನನ್ನ ಗಂಡನನ್ನು ಉದ್ಯಮಿನ್ನಾಗಿ ಮತ್ತು ನನ್ನ ಮಗಳು ಆಕೆಯ ಪತಿಯನ್ನು ಪ್ರಧಾನಿಯನ್ನಾಗಿ ಮಾಡಿದ್ದಾಳೆ ಎಂದು ಸುಧಾ ಮೂರ್ತಿ ಹೇಳಿದ್ದಾರೆ. ರಿಷಿ ಸುನಕ್, ಇನ್ಫೋಸಿಸ್ ಕಂಪನಿಯ ಸ್ಥಾಪಕ ನಾರಾಯಣ ಮೂರ್ತಿ  ಮತ್ತು ಸುಧಾ ಮೂರ್ತಿಯವರ ಪುತ್ರಿ ಅಕ್ಷತಾ ಮೂರ್ತಿಯನ್ನು 2009ರಲ್ಲಿ ವಿವಾಹವಾದರು.

ಇದನ್ನೂ ಓದಿ:Sudha murthy: ಅತ್ತೆಗೆ ಪದ್ಮಭೂಷಣ ಪ್ರಶಸ್ತಿ, ಸಂತಸ ವ್ಯಕ್ತಪಡಿಸಿದ ಬ್ರಿಟನ್​ ಪ್ರಧಾನಿ ರಿಷಿ ಸುನಕ್

ಸುಧಾ ಮೂರ್ತಿ ಅವರು ತಮ್ಮ ಮಗಳು ರಿಷಿ ಸುನಕ್ ಅವರ ಜೀವನದಲ್ಲಿ ವಿಶೇಷವಾಗಿ ಅವರ ಆಹಾರಕ್ರಮದ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಹೇಳಿದರು. ಈ ಗುರುವಾರ ಎನ್ನುವುದು ನಮ್ಮ ಜೀವನದ ಯಶಸ್ಸಿನ ದಿನ ಎಂದು ಹೇಳಬಹುದು. ಹೌದು, ನನ್ನ ಪತಿ ನಾರಾಯಣ ಮೂರ್ತಿ ಗುರುವಾರ ಇನ್ಫೋಸಿಸ್ ಪ್ರಾರಂಭಿಸಿದರು. ನಮ್ಮ ಮಗಳ ಪತಿ ರಿಷಿ ಸುನಕ್ ಅವರ ಪೂರ್ವಜರು ವರ್ಷಗಳಿಂದ ಇಂಗ್ಲೆಂಡ್‌ನಲ್ಲೇ ನೆಲೆಸಿದ್ದಾರೆ, ಆದರೆ ಅವರು ತುಂಬಾ ಧಾರ್ಮಿಕರು. ರಿಷಿ ಸುನಕ್ ಮದುವೆಯಾದ ಮೇಲೆ ನೀವು ಗುರುವಾರ ಏನಾದ್ರೂ ಶುರು ಮಾಡ್ತೀರಾ ಎಂದು ಕೇಳಿದ್ದೇವು. ನಾವು ರಾಘವೇಂದ್ರ ಸ್ವಾಮಿಗಳ ಬಳಿ ಹೋಗುತ್ತೇವೆ ಅಂದರು. ಶುಭ ದಿನ ಹೇಳಿ ಪ್ರತಿ ಗುರುವಾರ ಉಪವಾಸ ಮಾಡುತ್ತಾರೆ. ನಮ್ಮ ಅಳಿಯನ ತಾಯಿ ಪ್ರತಿ ಸೋಮವಾರ ಉಪವಾಸ ಮಾಡುತ್ತಾರೆ. ಆದರೆ ನಮ್ಮ ಅಳಿಯ ಗುರುವಾರದಂದು ಉಪವಾಸ ಮಾಡುತ್ತಾರೆ ಎಂದು ಸುಧಾ ಮೂರ್ತಿ ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:28 pm, Fri, 28 April 23