AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Narendra Modi: ಪ್ರಕಾಶ್ ಸಿಂಗ್ ಬಾದಲ್ ಮಹಾನ್ ರಾಜಕೀಯ ನಾಯಕ ಮಾತ್ರವಲ್ಲ, ಹೃದಯವಂತರು: ನರೇಂದ್ರ ಮೋದಿ ಪದ ನಮನ

ಇತ್ತೀಚೆಗಷ್ಟೇ ಇಹಲೋಕ ತ್ಯಜಿಸಿರುವ ಪಂಜಾಬ್​ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್(Parkash Singh Badal)​ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಪದ ನಮನ ಸಲ್ಲಿಸಿದ್ದಾರೆ.

Narendra Modi: ಪ್ರಕಾಶ್ ಸಿಂಗ್ ಬಾದಲ್ ಮಹಾನ್ ರಾಜಕೀಯ ನಾಯಕ ಮಾತ್ರವಲ್ಲ, ಹೃದಯವಂತರು: ನರೇಂದ್ರ ಮೋದಿ ಪದ ನಮನ
ನರೇಂದ್ರ ಮೋದಿ, ಪ್ರಕಾಶ್ ಸಿಂಗ್ ಬಾದಲ್Image Credit source: Tribune India
Follow us
ನಯನಾ ರಾಜೀವ್
|

Updated on: Apr 28, 2023 | 11:40 AM

ಇತ್ತೀಚೆಗಷ್ಟೇ ಇಹಲೋಕ ತ್ಯಜಿಸಿರುವ ಪಂಜಾಬ್​ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್(Parkash Singh Badal)​ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಪದ ನಮನ ಸಲ್ಲಿಸಿದ್ದಾರೆ. ಪಂಜಾಬ್​ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಏಪ್ರಿಲ್ 25 ರಂದು ನಿಧನರಾಗಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಚಂಡೀಗಢ ತಲುಪಿ ಪ್ರಕಾಶ್ ಸಿಂಗ್ ಬಾದಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸೇರಿದಂತೆ ಹಲವು ಹಿರಿಯ ನಾಯಕರು ಉಪಸ್ಥಿತರಿದ್ದರು.

ಇದೀಗ ಪ್ರಕಾಶ್ ಸಿಂಗ್ ಬಾದಲ್ ಅವರ ನೆನಪಿಗಾಗಿ ಪ್ರಧಾನಿ ಲೇಖನವೊಂದನ್ನು ಬರೆದಿದ್ದಾರೆ. ಸರ್ದಾರ್ ಪ್ರಕಾಶ್ ಸಿಂಗ್ ಬಾದಲ್ ಅವರ ಸಾವಿನ ಸುದ್ದಿ ತಿಳಿದಾಗ ತುಂಬಾ ದುಃಖವಾಯಿತು ಎಂದು ಅವರು ಈ ಲೇಖನದಲ್ಲಿ ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ಪ್ರಕಾಶ್ ಸಿಂಗ್ ಬಾದಲ್ ಅವರನ್ನು ತಮ್ಮ ತಂದೆಗೆ ಹೋಲಿಸಿದ್ದಾರೆ ಮತ್ತು ಅವರು ತಮ್ಮ ತಂದೆಯನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ ಎಂದು ಬರೆದಿದ್ದಾರೆ. ಬಾದಲ್ ಅವರು ಕೇವಲ ಉತ್ತಮ ರಾಜಕೀಯ ನಾಯರಷ್ಟೇ ಅಲ್ಲದೆ, ಹೃದಯವಂತರೂ ಕೂಡ ಎಂದಿದ್ದಾರೆ.

ಪ್ರಕಾಶ್ ಸಿಂಗ್ ಬಾದಲ್ ಭೇಟಿ ಕುರಿತು ಪ್ರಸ್ತಾಪ ತಮ್ಮ ಲೇಖನದಲ್ಲಿ, ನರೇಂದ್ರ ಮೋದಿಯವರು ತಾವು ಸಾಮಾನ್ಯ ಕಾರ್ಯಕರ್ತರಾಗಿದ್ದಾಗಿನ ಸಂದರ್ಭವನ್ನು ಉಲ್ಲೇಖಿಸಿದ್ದಾರೆ. ಆ ಸಮಯದಲ್ಲಿ ಪ್ರಕಾಶ್ ಸಿಂಗ್ ಭಾದಲ್ ಪಂಜಾಬ್​ನ ಮುಖ್ಯಮಂತ್ರಿಯಾಗಿದ್ದರು. 1990ರಲ್ಲಿ ಕೆಲಸದ ನಿಮಿತ್ತ ಉತ್ತರ ಭಾರತಕ್ಕೆ ಬರಬೇಕಿತ್ತು, ಆಗ ಅವರನ್ನು ಭೇಟಿಯಾಗಿದ್ದೆ, ಆಗಲೇ ಅವರಿಗೆ ತುಂಬಾ ಹೆಸರಿತ್ತು, ಆದರೆ ಕಿಂಚಿತ್ತೂ ಸ್ವಾರ್ಥವಿರಲಿಲ್ಲ, ಬಾದಲ್​ ಅವರ ಹಾಸ್ಯಪ್ರಜ್ಞೆಯು ಉತ್ತಮವಾಗಿತ್ತು ಎಂದು ಪ್ರಧಾನಿ ಬರೆದಿದ್ದಾರೆ.

ಮತ್ತಷ್ಟು ಓದಿ: Parkash Singh Badal: ಪಂಜಾಬ್ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ನಿಧನ

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಬಾದಲ್ ಅವರು ನನ್ನ ಬಳಿ ಬಂದು ನಾವಿಬ್ಬರೂ ಅಮೃತಸರಕ್ಕೆ ಹೋಗುತ್ತಿದ್ದೇವೆ ಎಂದು ಹೇಳಿದರು. ಒಂದು ದಿನ ಅಲ್ಲಿಯೇ ಉಳಿಯೋಣ ಮರುದಿನ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳೋಣ ಎಂದಿದ್ದರು.

ನಾನು ಅತಿಥಿಗೃಹದಲ್ಲಿ ಉಳಿದುಕೊಂಡಿದ್ದೆ, ಆಗ ಅವರು ಕೋಣೆಗೆ ಬಂದರು, ನನ್ನ ವಸ್ತುಗಳನ್ನೆಲ್ಲಾ ಒಂದೆಡೆ ಸೇರಿಸಲು ಶುರು ಮಾಡಿದರು, ನಾನು ಆಗ ಯಾಕೆ ಹೀಗೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದೆ, ಮುಖ್ಯಮಂತ್ರಿಗಳಿಗಾಗಿ ನೀಡಿದ್ದ ಕೋಣೆಯಲ್ಲಿ ತಮ್ಮ ಜತೆಯಲ್ಲಿ ನೀನೂ ಕೂಡ ಇರಬೇಕು ಎಂದಿದ್ದರು. ಆಗ ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದೆ, ಹಾಗೆಯೇ ಬಾದಲ್ ಅವರ ಮಾತು ಕೇಳಿ ಆಶ್ಚರ್ಯಗೊಂಡಿದ್ದೆ ಎಂದು ಬರೆದಿದ್ದಾರೆ.

ಪ್ರಧಾನಿ ಮೋದಿ ಅವರು ಎಲ್ಲಾ ಸಿದ್ಧಾಂತಗಳ ಜನರೊಂದಿಗೆ ಕೆಲಸ ಮಾಡುವ ವಿಧಾನವನ್ನು ಶ್ಲಾಘಿಸಿದರು. ಬಾದಲ್ ಅವರ ವ್ಯಕ್ತಿತ್ವ ಅಂತಹದು. ಜನರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಮನಸ್ಥಿತಿ, ಜನರಿಗೆ ಸದಾ ಒಳ್ಳೆಯದೇ ಮಾಡಬೇಕೆನ್ನುವ ಮನೋಭಾವ ಉಳ್ಳವರಾಗಿದ್ದರು ಎಂದು ಬರೆದಿದ್ದಾರೆ.

ಬಾದಲ್ ಅವರು ತಮ್ಮ ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡರು, ಆದರೆ ಅವರು ಪ್ರತಿ ಬಾರಿ ಸವಾಲುಗಳನ್ನು ಎದುರಿಸುತ್ತಾ ಮುನ್ನಡೆದರು. ಅವರು ನಮ್ಮ ಹೃದಯದಲ್ಲಿ ಸದಾ ಇರುತ್ತಾರೆ ಎಂದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ