ವಧುವಿನ ಕುಟುಂಬದವರನ್ನು ಕರೆದೊಯ್ಯುತ್ತಿದ್ದ ಟ್ರಕ್ ಒಂದು ನದಿಗೆ ಉರುಳಿ ಬಿದ್ದಿದ್ದು, ಮಕ್ಕಳು ಸೇರಿ ಐವರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ದಾತಿಯಾ ಜಿಲ್ಲೆಯಲ್ಲಿ ನಡೆದಿದೆ. ಕಳೆದ ರಾತ್ರಿ ಟ್ರಕ್ ಬುಹಾರಾ ಗ್ರಾಮವನ್ನು ತಲುಪಿದಾಗ ಆಯ ತಪ್ಪಿಗೆ ನದಿಗೆ ಬಿದ್ದಿದೆ. ಮೂವರು ಮಕ್ಕಳು ಸೇರಿದಂತೆ ಐವರು ಮೃತಪಟ್ಟಿದ್ದಾರೆ.
65 ವರ್ಷದ ಮಹಿಳೆ, 18 ವರ್ಷದ ಪುರುಷ ಹಾಗೂ ಎರಡು-ಮೂರು ವರ್ಷದೊಳಗಿನ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಕ್ಷಣೆ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.
ಇಪ್ಪತ್ನಾಲ್ಕು ಜನರು ಗಾಯಗೊಂಡಿದ್ದಾರೆ ಮತ್ತು ಅಪಘಾತದ ನಂತರ ಹಲವಾರು ಮಕ್ಕಳು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ಮತ್ತಷ್ಟು ಓದಿ: Rajasthan Accident: ರಾಜಸ್ಥಾನದಲ್ಲಿ ಎರಡು ಲಾರಿಗಳ ಮಧ್ಯೆ ಮುಖಾಮುಖಿ ಡಿಕ್ಕಿ: ಗಂಟೆಗಳ ಕಾಲ ಬಾನೆಟ್ನಲ್ಲಿ ಸಿಲುಕಿದ್ದ ಚಾಲಕನ ರಕ್ಷಣೆ
ಮೃತರು ಗ್ವಾಲಿಯರ್‌ನ ಬಿಲ್ಹೇಟಿ ಗ್ರಾಮದ ನಿವಾಸಿಗಳಾಗಿದ್ದು, ಮದುವೆಗಾಗಿ ಟಿಕಮ್‌ಗಢಕ್ಕೆ ತೆರಳಿದ್ದರು. ಅಪಘಾತ ಸ್ಥಳದ ದೃಶ್ಯಗಳು ನದಿ ದಡದ ಬಳಿ ಟ್ರಕ್ ಉರುಳಿಬಿದ್ದಿರುವುದನ್ನು ತೋರಿಸುತ್ತವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ