Love Jihad: ಹಿಂದೂ ಎಂದು ನಂಬಿಸಿ ಯುವತಿ ಜತೆ ಪ್ರೀತಿಯ ನಾಟಕ, ಮತಾಂತರ, ಅತ್ಯಾಚಾರ, ಮಾರಾಟ
ಮುಸ್ಲಿಂ ವ್ಯಕ್ತಿಯೊಬ್ಬ ತಾನು ಹಿಂದೂ ಎಂದು ನಂಬಿಸಿ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡು, ಅತ್ಯಾಚಾರವೆಸಗಿ, ಮತಾಂತರ ಮಾಡಿಸಿ, ಮದುವೆಯಾಗಿ ಮೂವರಿಗೆ ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಮುಸ್ಲಿಂ ವ್ಯಕ್ತಿಯೊಬ್ಬ ತಾನು ಹಿಂದೂ ಎಂದು ನಂಬಿಸಿ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡು, ಅತ್ಯಾಚಾರವೆಸಗಿ, ಮತಾಂತರ ಮಾಡಿಸಿ, ಮದುವೆಯಾಗಿ ಮೂವರಿಗೆ ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಘಟನೆಯ ವಿವರ 11 ವರ್ಷಗಳ ಹಿಂದೆ ನಡೆದ ಘಟನೆ ಇದು. ಯುವತಿಯು ಯಾರಿಗೋ ಕರೆ ಮಾಡಲು ಹೋಗಿ ಮುಜಮ್ಮಿಲ್ ಎಂಬಾತನ ನಂಬರ್ಗೆ ಕರೆ ಮಾಡಿದ್ದಳು. ಅಲ್ಲಿಂದಲೇ ಶುರುವಾಯ್ತು ಆತನ ನಾಟಕ. ಆಕೆ ಆತನ ಹೆಸರು ಮತ್ತು ವಿಳಾಸದ ಬಗ್ಗೆ ಕೇಳಿದಾಗ ಆತ ತನ್ನ ಧರ್ಮ ಹಾಗೂ ಹೆಸರನ್ನು ಮರೆಮಾಚಿ ತನ್ನ ಹೆಸರು ಬಬ್ಬು ಎಂದು ಹೇಳಿದ್ದ ಆಕೆಯೂ ನಂಬಿದ್ದಳು.
ಕ್ರಮೇಣವಾಗಿ ಇಬ್ಬರೂ ಮಾತನಾಡಲಾರಂಭಿಸಿದರು. ಆರು ತಿಂಗಳ ನಂತರ ಆತ ಪ್ರೊಪೋಸ್ ಮಾಡಿದ್ದ ಆಕೆ ಒಪ್ಪಿಕೊಂಡುಬಿಟ್ಟಳು. 2014ರಲ್ಲಿ ಯಾರಿಗೂ ತಿಳಿಸದೆ ಆತನಿದ್ದ ಸ್ಥಳಕ್ಕೆ ಬಂದಳು, ನಂತರ ಕೆಲವು ದಿನಗಳ ಕಾಲ ಇಬ್ಬರೂ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದರು.
ಮತ್ತಷ್ಟು ಓದಿ: Love Jihad in Bengaluru: ಬೆಂಗಳೂರಿನಲ್ಲಿ ಲವ್ ಜಿಹಾದ್ಗೆ ಬಲಿಯಾದ ಮಧ್ಯಪ್ರದೇಶದ ಯುವತಿ
ನಂತರ ಆಕೆಗೆ ಆತ ಮುಸ್ಲಿಂ ಯುವಕ ಎಂಬುದು ಗೊತ್ತಾಗಿತ್ತು, ನಂತರ ಬಲವಂತವಾಗಿ ಮತಾಂತರ ಮಾಡಿ ಆಕೆಯನ್ನು ವಿವಾಹವಾಗಿದ್ದ. ಮನೆಗೆ ಕರೆದುಕೊಂಡು ಹೋಗುವ ಬದಲು ಮದರಸಾಗೆ ಕರೆದುಕೊಂಡು ಹೋಗಿ ಕೂಡಿ ಹಾಕಿದ್ದ. ಅಲ್ಲೇ ಆಕೆ ಮೂರು ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆತನ ನಾಲ್ಕು ವರ್ಷಗಳ ಕಾಲ ಮದರಸಾದಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದ. ಆದರೂ ಆಕೆಗೆ ಅವನ ಉದ್ದೇಶವೇ ಅರ್ಥವಾಗಿರಲಿಲ್ಲ.
ಬಳಿಕ ಮದರಸಾ ಅಟೆಂಡರ್ ಅಜರುದ್ದೀನ್ಗೆ ಆಕೆಯನ್ನು ಮಾರಾಟ ಮಾಡಿದ್ದ. ಅಜರುದ್ದೀನ್ ಆತನ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಇಲ್ಲಿಯೂ ಶೋಷಣೆ ನಿಲ್ಲಲ್ಲಿಲ್ಲ, ನಿಸಾರ್ ಎಂಬ ವ್ಯಕ್ತಿಗೆ ಆಕೆಯನ್ನು ಮಾರಾಟ ಮಾಡಿದ್ದ, ಆತ ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಒಂದೊಮ್ಮೆ ಮತ್ತೆ ದೂರು ಕೊಡಲು ಹೋದರೆ ಶ್ರದ್ಧಾ ವಾಕರ್ಗಿಂತಲೂ ಭಯಾನಕವಾಗಿ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ. ನಾನು ಆತನ ಹಿಡಿತದಿಂದ ತಪ್ಪಿಸಿಕೊಳ್ಳಲು ಹಿಂದೂ ಸಂಘಟನೆಯನ್ನು ಹುಡುಕಲು ಪ್ರಾರಂಭಿಸಿದ್ದೆ, ಆಗ ಬಜರಂಗದಳದ ಕಾರ್ಯಕರ್ತರನ್ನು ಭೇಟಿಯಾಗಿ ಕಷ್ಟವನ್ನು ವಿವರಿಸಿದೆ. ಅವರು ಪೊಲೀಸ್ ಠಾಣೆಗೆ ಕರೆದೊಯ್ದು ಈಗ ಎಫ್ಐಆರ್ ದಾಖಲಾಗಿದೆ ಎಂದು ಮಹಿಳೆ ತಿಳಿಸಿದ್ದಾಳೆ.
ಇಂಥವರು ಸಿಕ್ಕಿ ಬೀಳದಿದ್ದರೆ ಇನ್ನೆಷ್ಟು ಯುವತಿಯರು ಬಲಿಯಾಗುತ್ತಾರೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾಳೆ. ಆರೋಪಿಗಳಾದ ಮುಜಮ್ಮಿಲ್, ರಿಜ್ವಾನ್, ಅಜರುದ್ದೀನ್ ಮತ್ತು ನಿಸಾರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶೀಘ್ರವೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ