AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿನಗೇನಿದೆ ಯೋಗ್ಯತೆ, ನಿನ್ನಿಂದ ಏನು ಮಾಡೋಕಾಗುತ್ತೆ ಎಂದ ಜಿಲ್ಲಾಧಿಕಾರಿ, ಟ್ರಕ್ ಚಾಲಕನ ಉತ್ತರ ಇದಾಗಿತ್ತು

ಹಿಟ್ ಆ್ಯಂಡ್ ರನ್ ಕಾನೂನಿನ ಕುರಿತು ನಡೆಯುತ್ತಿರುವ ಗದ್ದಲದ ನಡುವೆ, ಮಧ್ಯಪ್ರದೇಶದ ಶಾಜಾಪುರ ಜಿಲ್ಲಾಧಿಕಾರಿ ಮತ್ತು ಟ್ರಕ್ ಚಾಲಕರ ನಡುವಿನ ಸಂಭಾಷಣೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಮಧ್ಯಪ್ರದೇಶದ ಶಾಜಾಪುರದಲ್ಲಿ 'ಹಿಟ್  ಆ್ಯಂಡ್​ ರನ್' ಕುರಿತ ಕೇಂದ್ರ ಸರ್ಕಾರದ ಹೊಸ ಕಾನೂನನ್ನು ವಿರೋಧಿಸಿ ಚಾಲಕರ ಸಂಘವು ಪ್ರತಿಭಟನೆ ನಡೆಸಿತು. ಈ ಕುರಿತು ಶಾಜಾಪುರ ಜಿಲ್ಲಾ ಅಧಿಕಾರಿ ಕಿಶೋರ್ ಕನ್ಯಾಲ್ ಪ್ರತಿಭಟನಾ ನಿರತ ಚಾಲಕರೊಂದಿಗೆ ಸಭೆ ನಡೆಸಿದರು. ಸಭೆಯ ವಿಡಿಯೋ ಹೊರಬಿದ್ದಿದೆ.

ನಿನಗೇನಿದೆ ಯೋಗ್ಯತೆ, ನಿನ್ನಿಂದ ಏನು ಮಾಡೋಕಾಗುತ್ತೆ ಎಂದ ಜಿಲ್ಲಾಧಿಕಾರಿ, ಟ್ರಕ್ ಚಾಲಕನ ಉತ್ತರ ಇದಾಗಿತ್ತು
ಜಿಲ್ಲಾಧಿಕಾರಿ
ನಯನಾ ರಾಜೀವ್
|

Updated on: Jan 03, 2024 | 9:48 AM

Share

‘ಹಿಟ್ ಆ್ಯಂಡ್ ರನ್’ ಕಾನೂನಿನ ಕುರಿತು ನಡೆಯುತ್ತಿರುವ ಗದ್ದಲದ ನಡುವೆ, ಮಧ್ಯಪ್ರದೇಶದ ಶಾಜಾಪುರ ಜಿಲ್ಲಾಧಿಕಾರಿ ಮತ್ತು ಟ್ರಕ್ ಚಾಲಕರ ನಡುವಿನ ಸಂಭಾಷಣೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಮಧ್ಯಪ್ರದೇಶದ ಶಾಜಾಪುರದಲ್ಲಿ ‘ಹಿಟ್  ಆ್ಯಂಡ್​ ರನ್’ ಕುರಿತ ಕೇಂದ್ರ ಸರ್ಕಾರದ ಹೊಸ ಕಾನೂನನ್ನು ವಿರೋಧಿಸಿ ಚಾಲಕರ ಸಂಘವು ಪ್ರತಿಭಟನೆ ನಡೆಸಿತು. ಈ ಕುರಿತು ಶಾಜಾಪುರ ಜಿಲ್ಲಾ ಅಧಿಕಾರಿ ಕಿಶೋರ್ ಕನ್ಯಾಲ್ ಪ್ರತಿಭಟನಾ ನಿರತ ಚಾಲಕರೊಂದಿಗೆ ಸಭೆ ನಡೆಸಿದರು. ಸಭೆಯ ವಿಡಿಯೋ ಹೊರಬಿದ್ದಿದೆ.

ಸಭೆಯಲ್ಲಿ ತಾಳ್ಮೆ ಕಳೆದುಕೊಂಡ ಜಿಲ್ಲಾಧಿಕಾರಿ ಕಿಶೋರ್ ಕನ್ಯಾಲ್ ಟ್ರಕ್ ಚಾಲಕನ ಬಳಿ ನೀನ್ಯಾರು, ನೀನೇನು ಮಾಡೋಕೆ ಸಾಧ್ಯ, ನಿನಗೇನು ಯೋಗ್ಯತೆ ಇದೆ ಗದರಿದ್ದರು. ಅದಕ್ಕೆ ಚಾಲಕ ಮಾತನಾಡಿ, ಹೌದು ಸರ್​ ನನಗೆ ಯಾವುದೇ ಸ್ಥಾನಮಾನ ಇಲ್ಲದಿರುವುದಕ್ಕಾಗಿಯೇ ಹೋರಾಟ ನಡೆಸುತ್ತಿದ್ದೇವೆ  ಎಂದು ಉತ್ತರಿಸಿದ್ದರು.

ಹಿಟ್ ಆ್ಯಂಡ್​ ರನ್’ ಕುರಿತ ಕೇಂದ್ರ ಸರ್ಕಾರದ ನೂತನ ಕಾನೂನನ್ನು ವಿರೋಧಿಸಿ ಚಾಲಕರು ಮುಷ್ಕರ ನಡೆಸುತ್ತಿದ್ದು, ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಷ್ಕರ ನಿರತ ಚಾಲಕರೊಂದಿಗೆ ಸಂವಾದ ನಡೆಸಿದ್ದು, ಜಿಲ್ಲಾಧಿಕಾರಿ ಕಿಶೋರ್ ಕುಮಾರ್ ಕನ್ಯಾಲ್, ಎಸ್.ಪಿ. ಯಶಪಾಲ್ ರಜಪೂತ್ ಉಪಸ್ಥಿತರಿದ್ದರು.

ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡ ಈ ವಿಡಿಯೋವನ್ನು ಶೇರ್ ಮಾಡಿದ್ದು, ವ್ಯಕ್ತಿಯೊಂದಿಗೆ ಜಿಲ್ಲಾಧಿಕಾರಿ ಮಾತನ್ನು ಖಂಡಿಸಿದ್ದಾರೆ. ಲಾರಿ ಚಾಲಕರು ತಮ್ಮ ಸಮಸ್ಯೆಗಳನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ಕೇಳಲು ಸಭೆ ಆಯೋಜಿಸಲಾಗಿತ್ತು.ಆದರೆ ಅವರಲ್ಲಿ ಒಬ್ಬರು ಇತರರನ್ನು ಪ್ರಚೋದಿಸಲು ಮತ್ತು ಆಂದೋಲನವನ್ನು ತೀವ್ರಗೊಳಿಸಲು ಪ್ರಯತ್ನಿಸುತ್ತಿದ್ದರು, ನನಗೆ ಬೆದರಿಕೆ ಹಾಕಿದ್ದರು, ನನ್ನ ಮಾತುಗಳು ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ