ಕೊವಿಡ್ 19 ಲಸಿಕೆ ಪಡೆದವರಿಗೆ ‘ನಾನು ದೇಶಭಕ್ತ’ ಎಂಬ ಬ್ಯಾಡ್ಜ್​ ನೀಡಿ ಗೌರವಿಸುತ್ತಿರುವ ಮಧ್ಯಪ್ರದೇಶ ಪೊಲೀಸರು

| Updated By: Lakshmi Hegde

Updated on: Jun 09, 2021 | 3:56 PM

ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿದೆ. ಅದನ್ನು ನೋಡಿದ ಹಲವರು, ನಾವು ಲಸಿಕೆ ಹಾಕಿಸಿಕೊಳ್ಳಬೇಕೆಂದು ಕಾಯುತ್ತಿದ್ದೇವೆ. ಆದರೆ ಲಸಿಕೆ ಕೊರತೆಯಿಂದ ನಮಗೆ ಸಿಗುತ್ತಿಲ್ಲ ಎಂದೂ ಕಾಮೆಂಟ್ ಬರೆದಿದ್ದಾರೆ.

ಕೊವಿಡ್ 19 ಲಸಿಕೆ ಪಡೆದವರಿಗೆ ‘ನಾನು ದೇಶಭಕ್ತ’ ಎಂಬ ಬ್ಯಾಡ್ಜ್​ ನೀಡಿ ಗೌರವಿಸುತ್ತಿರುವ ಮಧ್ಯಪ್ರದೇಶ ಪೊಲೀಸರು
ಲಸಿಕೆ ಪಡೆದವರಿಗೆ ಬ್ಯಾಡ್ಜ್​ ಮತ್ತು ಪಡೆಯದವರಿಗೆ ಪೋಸ್ಟರ್
Follow us on

ಹೆಚ್ಚೆಚ್ಚು ಜನರು ಕೊರೊನಾ ಲಸಿಕೆ ತೆಗೆದುಕೊಳ್ಳಲಿ ಎಂಬ ಉದ್ದೇಶದಿಂದ ಮಧ್ಯಪ್ರದೇಶ ಪೊಲೀಸರು ವಿನೂತನ ಕಾರ್ಯಕ್ರಮವನ್ನು ಶುರು ಮಾಡಿದ್ದಾರೆ. ಲಸಿಕೆ ಪಡೆದವರಿಗೆ ‘ನಾನು ದೇಶಭಕ್ತ..ನಾನು ಲಸಿಕೆ ಪಡೆದಿದ್ದೇನೆ’ ಎಂದು ಬರೆದುಕೊಂಡಿರುವ ಬ್ಯಾಡ್ಜ್​ ಹಾಕಿ ಗೌರವಿಸುತ್ತಿದ್ದಾರೆ. ಆದರೆ ಇನ್ನೂ ಯಾರೂ ಲಸಿಕೆ ಪಡೆದಿಲ್ಲವೋ, ಅವರ ದೇಹದ ಮೇಲೆ ‘ನನ್ನಿಂದ ದೂರವಿರಿ..ನಾನಿನ್ನೂ ಲಸಿಕೆ ಹಾಕಿಸಿಕೊಂಡಿಲ್ಲ’ ಎಂದು ಬರೆದುಕೊಂಡಿರುವ ಪೋಸ್ಟರ್​ ಅಂಟಿಸುತ್ತಿದ್ದಾರೆ.

ಮಧ್ಯಪ್ರದೇಶದ ನಿವಾರಿ ಜಿಲ್ಲೆಯ ಪೊಲೀಸರು ಈ ಕ್ರಮ ಅನುಸರಿಸುತ್ತಿದ್ದು, ನಾವು ಕೊರೊನಾ ಲಸಿಕೆಯ ಮಹತ್ವ, ಅದರಿಂದ ಇರುವ ಪ್ರಯೋಜನದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹೀಗೆ ಮಾಡುತ್ತಿದ್ದೇವೆ. ಲಸಿಕೆ ಪಡೆದವರು ಹೆಮ್ಮೆಯಿಂದ ನಾವು ಲಸಿಕೆ ಪಡೆದಿದ್ದೇವೆ ಎಂದು ಹೇಳಿಕೊಳ್ಳಬಹುದಾಗಿ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಹೇಳಿದ್ದಾಗಿ ಎಎನ್​ಐ ವರದಿ ಮಾಡಿದೆ. ಇನ್ನು ಇದರ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿದೆ. ಅದನ್ನು ನೋಡಿದ ಹಲವರು, ನಾವು ಲಸಿಕೆ ಹಾಕಿಸಿಕೊಳ್ಳಬೇಕೆಂದು ಕಾಯುತ್ತಿದ್ದೇವೆ. ಆದರೆ ಲಸಿಕೆ ಕೊರತೆಯಿಂದ ನಮಗೆ ಸಿಗುತ್ತಿಲ್ಲ ಎಂದೂ ಕಾಮೆಂಟ್​ ಬರೆದಿದ್ದಾರೆ.

ಇದಕ್ಕೂ ಮೊದಲು ಮಧ್ಯಪ್ರದೇಶದ ಸತ್ನಾ ಜಿಲ್ಲೆಯಿಂದ ವಿಡಿಯೋವೊಂದು ವೈರಲ್​ ಆಗಿತ್ತು. ಲಾಕ್​ಡೌನ್​ ನಿಯಮ ಉಲ್ಲಂಘಿಸಿದವರಿಗೆ 30-45 ನಿಮಿಷ ಶ್ರೀರಾಮನಾಮ ಬರೆಯುವ ಶಿಕ್ಷೆಯನ್ನು ನೀಡುತ್ತಿದ್ದ ಪೊಲೀಸ್ ಅಧಿಕಾರಿಯ ವಿಡಿಯೋ ಅದಾಗಿತ್ತು. ಇದೀಗ ಮತ್ತೊಮ್ಮೆ ಮಧ್ಯಪ್ರದೇಶ ಪೊಲೀಸರು ಸುದ್ದಿಯಲ್ಲಿದ್ದಾರೆ.

ಇದನ್ನೂ ಓದಿ: Viral Video: ಸಿಂಹಕ್ಕೆ ಕಾಟ ಕೊಡುತ್ತಿದೆ ಪುಟ್ಟ ಆಮೆ! ಸಿಂಹದ ಪಜೀತಿ ಕೇಳುವವರು ಯಾರೂ ಇಲ್ವೇ?

Madhya Pradesh cops honouring those who have received the Covid vaccine

Published On - 3:50 pm, Wed, 9 June 21