Viral Video: ಸಿಂಹಕ್ಕೆ ಕಾಟ ಕೊಡುತ್ತಿದೆ ಪುಟ್ಟ ಆಮೆ! ಸಿಂಹದ ಪಜೀತಿ ಕೇಳುವವರು ಯಾರೂ ಇಲ್ವೇ?

ಸಿಂಹವನ್ನು ಕಾಡಿಸುತ್ತಾ ಆಮೆ ಸಂತೋಷಗೊಳ್ಳುತ್ತಿದೆ. ಸಿಂಹಕ್ಕೆ ನೀರು ಕುಡಿಯಲು ಬಿಡದೆ ಮತ್ತೆ ಮತ್ತೆ ಕಾಡಿಸತೊಡಗಿದೆ. ಇದರಿಂದ ಅಸಾಮಾಧಾನಗೊಂಡ ಸಿಂಹ ಏನೂ ಮಾಡಲು ತೋಚದೆ ಸುಮ್ಮನಾಗಿದೆ.

Viral Video: ಸಿಂಹಕ್ಕೆ ಕಾಟ ಕೊಡುತ್ತಿದೆ ಪುಟ್ಟ ಆಮೆ! ಸಿಂಹದ ಪಜೀತಿ ಕೇಳುವವರು ಯಾರೂ ಇಲ್ವೇ?
Follow us
TV9 Web
| Updated By: shruti hegde

Updated on: Jun 09, 2021 | 3:43 PM

ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತವೆ. ಕೆಲವು ತಮಾಷೆ ವಿಡಿಯೋಗಳಾಗಿದ್ದರೆ ಇನ್ನು ಕೆಲವು ರೋಮಾಂಚನಕಾರಿಯಾಗಿರುತ್ತದೆ. ಅದರಲ್ಲಿಯೂ ವಿಶೇಷವಾಗಿ ಪ್ರಾಣಿಗಳ ತುಂಟಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತವೆ. ಪ್ರಾಣಿಗಳ ತುಂಟಾಟದ ವಿಡಿಯೋಗಳನ್ನು ನೋಡುವುದೇ ಒಂದು ರೀತಿಯ ಖುಷಿ. ಇಲ್ಲೊಂದು ಆಮೆಯು ದೈತ್ಯಾಕಾರದ ಸಿಂಹವನ್ನೇ ನಡುಗಿಸುತ್ತದೆ. ಇದೀಗ ವೈರಲ್​ ಆಗುತ್ತಿರುವ ಸಿಂಹ ಮತ್ತು ಪುಟ್ಟ ಆಮೆಯ ವಿಡಿಯೋ ನೋಡಿದ ನೆಟ್ಟಿಗರು ಆಮೆಯ ಕೀಟಲೆಯನ್ನು ಮೆಚ್ಚಿಕೊಂಡಿದ್ದಾರೆ. 

ಸಿಂಹ ಕಾಡಿನ ರಾಜ. ಅದು ಹೇಳಿದಂತೆಯೇ ಇತರ ಪ್ರಾಣಿಗಳು ಕೇಳಬೇಕೆಂಬ ಹಠ. ಸಿಂಹ ಎದುರು ಬಂದರೆ ಸಾಕು! ಉಳಿದ ಪ್ರಾಣಿಗಳೆಲ್ಲಾ ಬಾಲ ಮುದುಡಿಕೊಂಡು ತಲೆಮರಿಸಿಕೊಳ್ಳುತ್ತವೆ. ಆದರೆ ಪುಟ್ಟ ಆಮೆ ಮರಿಯೊಂದು ದೈತ್ಯಾಕಾರದ ಸಿಂಹಕ್ಕೆ ಕಾಟ ಕೊಡುತ್ತಿದೆ. ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ ಸಿಂಹ ಸೋಲುತ್ತಿದೆ. ಈ ವೀಡಿಯೋ ವೈರಲ್​ ಆಗುತ್ತಿದ್ದಂತೆಯೇ ನೆಟ್ಟಿಗರು ಮೆಚ್ಚಿಕೊಂಡಿದ್ದು, ಉಳಿದೆಲ್ಲಾ ಪ್ರಾಣಿಗಳನ್ನು ಹತೋಟಿಯಲ್ಲಿಟ್ಟುಕೊಂಡ ಸಿಂಹಕ್ಕೆ ಆಮೆಗೆ ಮಾತುಕೇಳಿಸಲು ಆಗುತ್ತಿಲ್ಲ ಎಂದು ತಮಾಷೆ ಮಾಡಿದ್ದಾರೆ.

ಬಾಯಾರಿದ ಸಿಂಹ ನೀರು ಕುಡಿಯಲೆಂದು ಕೆರೆ ಬಳಿ ಬಂದಿದೆ. ನೆಮ್ಮದಿಯಿಂದ ನೀರು ಕುಡಿಯುತ್ತಿದೆ. ಸದ್ದಿಲ್ಲದೇ ನೀರಿನೊಳಗಿಂದ ಬಂದ ಆಮೆಯು ಸಿಂಹದ ಮೀಸೆಯನ್ನು ಎಳೆಯುತ್ತಿದೆ. ಸಿಂಹವು ತಪ್ಪಿಸಿಕೊಂಡಂತೆ ಮತ್ತೆ ಕಾಡಿಸುತ್ತಿದೆ. ಇದರಿಂದ ಸಿಂಹ ಅಸಾಮಾಧಾನಗೊಂಡು ಎದ್ದು ಹೊರಟಿದೆ.

ಸಿಂಹವನ್ನು ಕಾಡಿಸುತ್ತಾ ಆಮೆ ಸಂತೋಷಗೊಳ್ಳುತ್ತಿದೆ. ಸಿಂಹಕ್ಕೆ ನೀರು ಕುಡಿಯಲು ಬಿಡದೆ ಮತ್ತೆ ಮತ್ತೆ ಕಾಡಿಸತೊಡಗಿದೆ. ಇದರಿಂದ ಅಸಾಮಾಧಾನಗೊಂಡ ಸಿಂಹ ಏನೂ ಮಾಡಲು ತೋಚದೆ ಸುಮ್ಮನಾಗಿದೆ.

ಇದನ್ನೂ ಓದಿ:

Viral Video: ವರ ಪಕ್ಕದಲ್ಲಿರುವಾಗಲೇ ಸ್ನೇಹಿತ ಕೊಟ್ಟ ಗಿಫ್ಟ್​ ನೋಡು ವಧು ಕಂಗಾಲು! ಏನದು ಕುತೂಹಲ ಕೆರಳಿಸಿದ ಉಡುಗೊರೆ?

Viral Video: ನಾಯಿಯಿಂದಾದ ಅಚಾತುರ್ಯಕ್ಕೆ ವ್ಯಕ್ತಿಗೆ ಶಿಕ್ಷೆ! ನಿಜವಾಗಿಯೂ ಏನಾಯ್ತು ಅಲ್ಲಿ?