AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನೋಡನೋಡುತ್ತಿದ್ದಂತೆ ಬಾಯ್ಬಿಟ್ಟ ಭೂಮಿ; ಪಾತಾಳಕ್ಕೆ ಬಿದ್ದ ಮೂರು ಕಾರುಗಳು, ಭಯಾನಕ ದೃಶ್ಯ ಸೆರೆ

ಈ ಭಯಾನಕ ಘಟನೆ ನಡೆದ ಬಳಿಕ ಸ್ಥಳಕ್ಕೆ ಏಳು ಅಗ್ನಿಶಾಮಕ ಟ್ರಕ್​​ಗಳು ಮತ್ತು ಒಂದು ವಿಶೇಷ ರಕ್ಷಣಾ ಘಟಕ ತೆರಳಿತ್ತು. ಅದೃಷ್ಟವಶಾತ್​ ಯಾರಿಗೂ ಗಾಯವಾಗಿಲ್ಲ ಎಂದು ಸ್ಥಳಕ್ಕೆ ತೆರಳಿದ್ದ ಅಗ್ನಿಶಾಮಕ ದಳವೊಂದು ಟೈಮ್ಸ್​ ಆಫ್​ ಇಸ್ರೇಲ್​ ಮಾಧ್ಯಮಕ್ಕೆ ಮಾಹಿತಿ ನೀಡಿದೆ.

Viral Video: ನೋಡನೋಡುತ್ತಿದ್ದಂತೆ ಬಾಯ್ಬಿಟ್ಟ ಭೂಮಿ; ಪಾತಾಳಕ್ಕೆ ಬಿದ್ದ ಮೂರು ಕಾರುಗಳು, ಭಯಾನಕ ದೃಶ್ಯ ಸೆರೆ
ನೆಲ ಬಾಯ್ಬಿಟ್ಟ ಸ್ಥಳ
TV9 Web
| Edited By: |

Updated on:Jun 09, 2021 | 4:32 PM

Share

ನಾವು ನಿಂತಿದ್ದ ನೆಲ ಒಮ್ಮೆಲೇ ಕುಸಿದು..ಹಾಗೆ ಬಾಯ್ಬಿಟ್ಟ ಭೂಮಿಯಲ್ಲಿ ನಾವು ಬೀಳುವ ದೃಶ್ಯವನ್ನು ಕಲ್ಪನೆ ಮಾಡಿಕೊಳ್ಳಲೂ ಭಯವಾಗುತ್ತದೆ..ಆದರೆ ಇದೇ ನೈಜ ಘಟನೆಯೊಂದು ನಡೆದಿದೆ. ನೋಡನೋಡುತ್ತಿದ್ದಂತೆ ನೆಲ ಬಾಯ್ಬಿಟ್ಟು ದೊಡ್ಡದೊಂದು ಹೊಂಡ ಸೃಷ್ಟಿಯಾಗಿದೆ. ಆ ಸಮಯದಲ್ಲಿ ಅಲ್ಲೇ ನಿಂತಿದ್ದ ಮೂರು ಕಾರುಗಳು ಹೊಂಡದೊಳಗೆ ಬಿದ್ದಿರುವ ವಿಡಿಯೋ ಒಂದು ಸಿಕ್ಕಾಪಟೆ ವೈರಲ್​ ಆಗಿದ್ದು, ತೀವ್ರ ಭಯಾನಕ ಎನ್ನಿಸಿದೆ.

ಜೆರುಸೆಲಂನ ಆಸ್ಪತ್ರೆಯೊಂದರ ಪಾರ್ಕಿಂಗ್​ ಸ್ಥಳದಲ್ಲಿ ಹೀಗೆ ಭೂಮಿ ಕುಸಿದು ದೊಡ್ಡ ಹೊಂಡ ಸೃಷ್ಟಿಯಾಗಿದೆ. ನಿಲ್ಲಿಸಿದ್ದ ಕಾರುಗಳ ಕೆಳಗಿನ ಭೂಮಿ ಬಾಯ್ಬಿಟ್ಟು ಮೂರು ಕಾರುಗಳು ಅದರೊಳಗೆ ಬಿದ್ದ ದೃಶ್ಯ, ಅಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೂರು ಕಾರುಗಳು ಬಿದ್ದಿವೆ ಎಂದರೆ ಅದೆಷ್ಟು ದೊಡ್ಡ ಹೊಂಡ ಎಂಬುದನ್ನು ಊಹಿಸಿಕೊಳ್ಳಿ. ಊಹಿಸುವುದೂ ಬೇಡ.. ಕೆಳಗಿನ ವಿಡಿಯೋ ನೋಡಿ.

ಈ ಭಯಾನಕ ಘಟನೆ ನಡೆದ ಬಳಿಕ ಸ್ಥಳಕ್ಕೆ ಏಳು ಅಗ್ನಿಶಾಮಕ ಟ್ರಕ್​​ಗಳು ಮತ್ತು ಒಂದು ವಿಶೇಷ ರಕ್ಷಣಾ ಘಟಕ ತೆರಳಿತ್ತು. ಅದೃಷ್ಟವಶಾತ್​ ಯಾರಿಗೂ ಗಾಯವಾಗಿಲ್ಲ ಎಂದು ಸ್ಥಳಕ್ಕೆ ತೆರಳಿದ್ದ ಅಗ್ನಿಶಾಮಕ ದಳವೊಂದು ಟೈಮ್ಸ್​ ಆಫ್​ ಇಸ್ರೇಲ್​ ಮಾಧ್ಯಮಕ್ಕೆ ಮಾಹಿತಿ ನೀಡಿದೆ. ಈ ಜಾಗದ ಸಮೀಪ ಸುರಂಗ ಮಾರ್ಗವೊಂದನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರ ಕಾಮಗಾರಿಯಿಂದಾಗಿಯೇ ಹೀಗೆ ಭೂಕುಸಿತ ಉಂಟಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕಳೆದ ವಾರ ಬರೋಬ್ಬರಿ 300 ಅಡಿ ಆಳದ ಗುಂಡಿಯೊಂದು ಮೆಕ್ಸಿಕೋದ ಕೃಷಿಭೂಮಿಯಲ್ಲಿ ನಿರ್ಮಾಣವಾಗಿ ಆತಂಕ ಹುಟ್ಟಿಸಿತ್ತು. ಮೊದಲು ಸಣ್ಣದಾಗಿದ್ದ ಈ ಕುಳಿ ಬರಬರುತ್ತ ದೊಡ್ಡದಾಗುತ್ತ ಹೋಗಿತ್ತು. ನಂತರ ಅದರಲ್ಲಿ ನೀರು ತುಂಬಿತ್ತು.

ಇದನ್ನೂ ಓದಿ: ಇಂಧನ ದರ ಏರಿಕೆ ವಿರುದ್ಧ ಕಾಂಗ್ರೆಸ್ ಸಮರ; 5 ದಿನಗಳ ಕಾಲ ‘100 ನಾಟೌಟ್’ ಕ್ಯಾಂಪೇನ್: ಡಿ ಕೆ ಶಿವಕುಮಾರ್ ಘೋಷಣೆ

3 parked cars fell into sinkhole out side of Jerusalem hospital

Published On - 4:31 pm, Wed, 9 June 21

Follow Us
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​