ಒಂದು ಕಡೆ ಇನ್ನು ಮಗಳಿಲ್ಲ ಎನ್ನುವ ದುಃಖ, ಇನ್ನೊಂದು ಕಡೆ ಆಂಬ್ಯುಲೆನ್ಸ್ಗೆ ನೀಡಲು ಹಣವಿಲ್ಲ ಎನ್ನುವ ಹತಾಶೆ, ಕೊನೆಗೆ ತಂದೆಯೊಬ್ಬರು ಮಗಳ ಶವವನ್ನು ಬೈಕ್ನಲ್ಲಿ ತಮ್ಮ ತೊಡೆಯ ಮೇಲೆ ಮಲಗಿಸಿಕೊಂಡು 70 ಕಿ.ಮೀ ಸಂಚರಿಸಿರುವ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಶಹದೋಲ್ನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಆಂಬ್ಯುಲೆನ್ಸ್ ನೀಡಲು ನಿರಾಕರಿಸಿದ್ದಾರೆ, ಬಳಿಕ ತಂದೆಯೊಬ್ಬರು 13 ವರ್ಷದ ಮಗಳ ಶವವನ್ನು ಬೈಕ್ ಸಹಾಯದಿಂದ ತೆಗೆದುಕೊಂಡು ಹೋಗಬೇಕಾಯಿತು.
ಶಾಹದೋಲ್‌ನಿಂದ 70 ಕಿಮೀ ದೂರದಲ್ಲಿರುವ ಕೋಟಾ ಗ್ರಾಮದ ನಿವಾಸಿ ಲಕ್ಷ್ಮಣ್ ಸಿಂಗ್, ಸೋಮವಾರ ರಾತ್ರಿ ಅವರ ಮಗಳು ಮಾಧುರಿ ಕುಡಗೋಲು ಕಣ ರಕ್ತಹೀನತೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳನ್ನು ವಾಹನಕ್ಕಾಗಿ ಕೇಳಿದ್ದೆವು ಆದರೆ 15 ಕಿ.ಮೀಗಿಂತ ದೂರದ ಸ್ಥಳಗಳಿಗೆ ವಾಹನಗಳು ಲಭ್ಯವಿಲ್ಲ ಎಂದು ತಿಳಿಸಲಾಯಿತು ಎಂದು ಅವರು ಹೇಳಿದರು.
ಮತ್ತಷ್ಟು ಓದಿ:West Bengal: ಆಂಬ್ಯುಲೆನ್ಸ್ಗೆ ಕೊಡಲು ಹಣವಿಲ್ಲದೆ ಮಗನ ಶವವನ್ನು ಚೀಲದೊಳಗೆ ಹೊತ್ತು 200 ಕಿ.ಮೀ ಪ್ರಯಾಣಿಸಿದ ವ್ಯಕ್ತಿ
ನೀವೇ ವ್ಯವಸ್ಥೆ ಮಾಡಿಕೊಳ್ಳಿ ಎಂದರು, ಆದರೆ ಹಣದ ಕೊರತೆಯಿಂದಾಗಿ ನಾವು ನಮ್ಮ ಮಗಳ ಮೃತ ದೇಹವನ್ನು ಮೋಟಾರ್ ಸೈಕಲ್ನಲ್ಲಿ ತೆಗೆದುಕೊಂಡು ಹೋಗಬೇಕಾಯಿತು ಎಂದು ತಿಳಿಸಿದ್ದಾರೆ.
ಮನೆ 20 ಕಿ.ಮೀ ದೂರವಿರುವಾಗ ಶಾಹದೂಲ್ ಕಲೆಕ್ಟರ್ ವಂದನಾ ವೈದ್ಯ ಅವರು ವಾಹನದ ವ್ಯವಸ್ಥೆ ಮಾಡಿದರು, ಬಳಿಕ ಊರನ್ನು ತಲುಪಿದೆವು.
ಶಹದೋಲ್ ಕಲೆಕ್ಟರ್ ಕುಟುಂಬಕ್ಕೆ ಸ್ವಲ್ಪ ಆರ್ಥಿಕ ಸಹಾಯವನ್ನು ಒದಗಿಸಿದರು ಮತ್ತು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ